ಕನ್ನಡ ಭವನ ದ ರೂವಾರಿಗಳಾದ ವಾಮನ್ ರಾವ್ ಬೇಕಲ್ ಸಂದ್ಯಾ ರಾಣಿ ಟೀಚರ್ ಸಾರತ್ಯದಲ್ಲಿ ಕನ್ನಡ ಭವನ ಪ್ರಕಾಶನ ಸಂಸ್ಥೆ ಉದ್ಘಾಟನೆ ಗೊಂಡಿತು. ಅಕ್ಟೋಬರ್ 1ರಂದು ಕನ್ನಡ ಭವನ ಸಭಾಂಗಣದಲ್ಲಿ ನಡೆದ ಕಾಸರಗೋಡು ಕನ್ನಡ ಸಂಸ್ಕೃತಿ ಉತ್ಸವ 2023. ವೇದಿಕೆಯಲ್ಲಿ ಮಾಜಿ ವಿಧಾನ ಪರಿಷತ್ ಸಚೇತಕ ರಾಗಿದ್ದ ಕಾಪ್ಟನ್ ಕಾರ್ಣಿಕ್ ಸರ್ ಫಲಕ ಅನಾವರಣೆ ಗೊಳಿಸಿ ಸಂಸ್ಥೆಯ ವಾಮನ್ ರಾವ್ ಬೇಕಲ್ ರಿಗೆ ನೀಡಿ ಶುಭ ಹಾರೈಸಿ ಉದ್ಘಾಟನೆ ಗೊಳಿಸಿದರು. ವೇದಿಕೆಯಲ್ಲಿ ರಾಧಾಕೃಷ್ಣ ಕೆ ಉಳಿಯತಡ್ಕ, ಡಾ ಪ್ರಮೀಳಾ ಮಾಧವ್, ಅರಿಬೈಲ್ ಗೋಪಾಲ್ ಶೆಟ್ಟಿ,ಶ್ರೀಧರ್ ಶೆಟ್ಟಿ ಮುಟ್ಟಮ್, ಸಿನಿ ಸ್ಟಾರ್ ರಂಜನ್, ಕನ್ನಡ ಕೈರಳಿ ಪ್ರಕಾಶಕ ಎ ಆರ್ ಸುಬ್ಬಯ್ಯಕಟ್ಟೆ, ಪ್ರಕಾಶಕಿ ಸಂದ್ಯಾ ರಾಣಿ ಟೀಚರ್, ಕ್ರಾಂತಿ ಕಿಡಿ ಪತ್ರಿಕೆ ಶಿವಮೊಗ್ಗ ಸಂಪಾದಕ ಕೆ ಜಿ ವೆಂಕಟೇಶ್, ಕಥಾ ಬಿಂದು ಪ್ರಕಾಶಕ ಪಿ ವಿ ಪ್ರದೀಪ್ ಕುಮಾರ್, ಜಗದೀಶ್ ಕೂಡ್ಲು, ಕಾರ್ಯದರ್ಶಿ ವಸಂತ್ ಕೆರೆಮನೆ, ಶಶಿಕಾಂತ್ ಶೆಟ್ಟಿ ತ್ಯಾಗರಾಜ್ ಟಿ ಮೈಸೂರು, ನಾಟಕ ಭಾರ್ಗವ ಕೆಂಪೇರಾಜು ಮೈಸೂರ್, ಪ್ರೊ ಎ ಶ್ರೀನಾಥ್, ರವಿ ನಾಯ್ಕಾಪು, ಡಾ ಕೆ ವಿ ದೇವಪ್ಪ, ರೇಖಾ ಸುದೇಶ್ ರಾವ್ ಮುಂತಾದವರಿದ್ದು, ಶುಭ ಹಾರೈಸಿದರು.
Comments (0)
Post Comment
Report Abuse
Be the first to comment using the form below.