"ಮುಗುದೆ" ಕವನದ ಈ ಚರಣ ಸೊಗಸಾಗಿದೆ
ಅಮ್ಮನಿರದಿದ್ದರೆ ಬಾಳೊಂದು ಬರಡು
ವಾತ್ಸಲ್ಯ ಮರೆತ ಬದುಕು ಉರುಳು
ಅಮ್ಮ ಹಿಡಿದರೆ ಬೆರಳು
ರೋಮಾಂಚನವ ನೆರಳು
ಅಮ್ಮ ಕೊಟ್ಟ ಕೈತುತ್ತಿನ ರುಚಿಗೆ ಬಾಳೆಲ್ಲ ಮರು ಮರಳು ಭಾವನಾತ್ಮಕವಾಗಿ ಅಮ್ಮನ ಬಗ್ಗೆ ನೋಡಿದ ಭಾವಗಳನ್ನು ಯಥಾವತ್ ಕವನವಾಗಿಸಿದ ಪರಿ ಚೆನ್ನಾಗಿದೆ. ಕಾಂತಿ ಕವನದ ಈ ಸಾಲುಗಳು ಗಮನಾರ್ಹ:
ದೀಪಾವಳಿ ಆಶಯವ ಈಡೇರಿಸಿ
ಮನುಜಕುಲವ ಹಸೀದಗೊಳಿಸಲಿ/
ಹಸಿದು ಮಲಗಿಹ ಹೊಟ್ಟೆಗೆ ಹಿಟ್ಟು ಬಡಿಸಲಿ/
ದಾಹದಲಿ ಬೆಂದ ಕರುಳನು ಸಂಭಾಳಿಸುತಿರಲಿ/
ವರ್ಷದುದ್ದವೂ ದಿವಾಳಿಯಿರದ
ದೀಪಮಾಲೆ ಪ್ರಕಾಶಿಸಲಿ/
ದೀಪಾವಳಿ ಎಂದರೆ ಲೋಕಕ್ಕೆ ದೀಪ ಬೆಳಗುವ ಹಬ್ಬವಾದರೂ ಹಸಿದ ಜನಕ್ಕೆ ಹೊಟ್ಟೆ ತುಂಬಲಿ ಎಂಬ ಆಶಯವನ್ನು ಕವಯತ್ರಿ ಮಾರ್ಮಿಕವಾಗಿ ಮೂಡಿಸಿದ್ದಾರೆ. ಇದು ಗಹನ ಚಿಂತನೆಯಿಂದ ಮೂಡಿ ಬಂದಂತಿದೆ. ಕಲ್ಪನಾ ಅರುಣ್ ಪ್ರಕೃತಿಯನ್ನು ಆರಾಧಿಸುತ್ತ ಪ್ರೀತಿ ಪ್ರೇಮಗಳ ನ್ನರಸುತ್ತ ಇಂದಿನ ವೈಪರೀತ್ಯಗಳಿಗೆ ಕಾರಣಗಳನ್ನು ವಿಮರ್ಶಿಸುತ್ತ ತಮ್ಮ ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಹೊಂದಾಣಿಕೆ ಮಾಡಿಕೊಂಡು ಕನಸುಗಳನ್ನು ಮೂರ್ತವಾಗಿಸಲು ಹೊರಟ ಮಹಿಳಾ ಲೇಖಕಿ, ಕವಿಯತ್ರಿ, ಶಿಕ್ಷಕಿ. ಕನ್ನಡತಿಯಾಗಿ ಹೆಮ್ಮೆಯಿಂದ ಹೆಜ್ಜೆಯಿಡುವ ಕನ್ನಡಾಂಬೆಯ ಕೂಸು. ಸುಂದರ ಕವನಗಳನ್ನು ಕಟ್ಟಿಕೊಡಬಲ್ಲ ಕಲ್ಪನಾ ಅರುಣ್ ಅವರ ಮುಂದಿನ ಸಾಹಿತ್ಯ ಪಯಣ ಸಫಲವಾಗಲಿ ಎಂದು ಶುಭ ಹಾರೈಕೆಗಳು.
Comments (0)
Post Comment
Report Abuse
Be the first to comment using the form below.