ಸಾಹಿತ್ಯದ ಪಯಣದಲ್ಲಿ ಅದೆಷ್ಟೋ ಅಪರಿಚಿತ ಕವಿಗಳು
ಪರಿಚಿತರಾಗಿಬಿಡುತ್ತಾರೆ. ಕೆಲವರು ನಮ್ಮ ಸಂಬOಧಿಗಳೆನೋ ಎಂದೆನಿಸಿಬಿಡುತ್ತಾರೆ.
ಹಾಗೆಯೇ ನನ್ನ ಸಾಹಿತ್ಯ ಪಯಣದಲ್ಲಿ ಪರಿಚಿತರಾದ ಶ್ರೀಯುತ ಹರೀಶ್ ಕಜೆ
ಇವರು ಮೂಲತಃ ಪುತ್ತೂರಿನವರು. ವೃತ್ತಿಯಲ್ಲಿ ಶಿಕ್ಷಕರು. ಇವರು ಹಲವು
ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತ್ತಾರೆ. ಕೆಲವು ಕವಿತೆಗಳನ್ನು ಹಾಡುಗಳನ್ನಾಗಿಸಿ
ತಮ್ಮ ಯೂಟ್ಯೂಬ್ ಚಾನೆಲ್ ಮುಖಾಂತರ ಹೊರತಂದಿದ್ದಾರೆ.ಹಾಗೆಯೇ
ಇವರು ಹಾಡುಗಾರರು ಹೌದು. ನಮ್ಮ ನವಪರ್ವ ಫೌಂಡೇಶನ್ ನ
ನಿರ್ಮಾಪಕರಾಗಿ ಇವರ ಕರ್ತವ್ಯ ಅಪಾರ. ಹಾಗೆಯೇ ಇವರು ತಮ್ಮ ಸ್ವರಚಿತ
ಭಾವಗೀತೆಗಳ ಸಂಕಲನ ಹೊರತರುತ್ತಿರುವುದು ಸಂತಸದ ಸಂಗತಿ. ಇವರ
"ಭಾವ ಪಂಜರದಲ್ಲಿ" ಅಗೋಚರ,ಸವಿತನದೊಲವು, ಭ್ರಮಾಗೋಪುರ ,ಒಲುಮೆಯ
ಮೊರೆ, ಮಮತೆ ಶೂನ್ಯ, ಭಾವ ಶೂನ್ಯ,ಮನದವೇದನೆ, ಒಂದಕ್ಕಿOತ ಒಂದು
ಭಾವಗೀತೆಗಳು ಅದ್ಬುತವಾಗಿ ಮೂಡಿಬಂದಿವೆ. ಇವರ ಭಾವಗೀತೆಗಳ ಸಂಕಲನದ
ಕನಸು ನನಸಾಗುತ್ತಿರುವ ಈ ಸಮಯದಿ ಸಹೋದರರಾದ ಹರೀಶ್ ಕಜೆ
ಇವರಿಗೆ ನನ್ನ ಶುಭ ಹಾರೈಕೆ. ಇವರು ಅತೀ ಹೆಚ್ಚು ಪುಸ್ತಕವನ್ನು
ಹೊರತರುವಂತಾಗಲಿ. ಸರ್ವ ಯಶಸ್ಸು ನಿಮ್ಮದಾಗಲಿ. ಶುಭವಾಗಲಿ ಸಹೋದರ
ಹರೀಶ್ ಕಜೆ ನಿಮಗೆ.
Comments (0)
Post Comment
Report Abuse
Be the first to comment using the form below.