ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ. ಮಹತ್ವ ಇದೆ. ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ.
ನನ್ನ ನೆಚ್ಚಿನ ಶಿಕ್ಷಕಿ ನನ್ನಮ್ಮ
ಶ್ರೀಮತಿ ರಾಜೇಶ್ವರಿ ಪುಟ್ಟರಾಜ ಶಂಭುಶಂಕರ,ನಿವೃತ್ತ ಶಿಕ್ಷಕಿ,ಪಾರ್ವತಿ ಹಿರಿಯ ಪ್ರಾಥಮಿಕ ಶಾಲೆ ರಾಜೇಶ್ವರ,ತಾಲ್ಲೂಕು– ಬಸವ ಕಲ್ಯಾಣ,ಜಿಲ್ಲೆ– ಬೀದರ್
ಈ ಅಂಕಣದ ವಿಶೇಷವೆಂದರೆ ಇಲ್ಲಿ ನನ್ನ ಅಚ್ಚುಮೆಚ್ಚಿನ ಶಿಕ್ಷಕಿ ನಮ್ಮ ತಾಯಿ ಆಗಿದ್ದಾರೆ. ಮನೆಯಲ್ಲಿ ಪ್ರೀತಿ,ವಾತ್ಸಲ್ಯ,ಸಲುಗೆಯಿಂದ ನಮ್ಮ ಜತೆ ಇರುತ್ತಿದ್ದ ನಮ್ಮ ತಾಯಿ ಶಾಲೆಯಲ್ಲಿಯೇ ಬೇರೆ ರೂಪ. ಅಲ್ಲಿ ಕೇವಲ ಶಿಕ್ಷಕಿಯಾಗಿ ಇರುತ್ತಿದ್ದರು. ನನ್ನ ಮಗಳು ಎಂದು ಯಾವುದೇ ಕಾರಣಕ್ಕೂ ಹೇಳಿಕೊಂಡಿರಲಿಲ್ಲ. ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಂತೆಯೇ ನಮಗೂ ಬೋಧನೆ ಮಾಡಿದರು. ನಾನು ನೋಡಿದ ಕರುಣಾಮಯಿ ಶಿಕ್ಷಕಿ ಅವರು. ಬಡವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಅವರು ಹಿಂದುಳಿಯಲು ಕಾರಣ ಹುಡುಕಿ ಅವರಿಗೆ ಆರ್ಥಿಕ ಸಹಾಯ ಮಾಡಿ ವಿಶೇಷ ಕಾಳಜಿಯಿಂದ ಪಾಠ ಬೋಧನೆ ಮಾಡುತ್ತಿದ್ದರು. ಇಂಗ್ಲಿಷ್ ಕ್ಲಿಷ್ಟಕರ ಎಂದು ಹೇಳುತ್ತಿದ್ದ ಆ ಸಮಯದಲ್ಲಿ ಮಕ್ಕಳಿಗೆ ಸುಲಲಿತವಾಗಿ ಇಂಗ್ಲಿಷ್ ಪಾಠ ಬೋಧನೆ ಮಾಡುತ್ತಿದ್ದರು. ಪ್ರತಿ ಪಾಠದ ಮಾಡೆಲ್ ರೀಡಿಂಗ್,ಭಾಷಾಭ್ಯಾಸ ಹಾಗೂ ಸಂಪೂರ್ಣ ಪಾಠ ಮಕ್ಕಳಿಗೆ ಮನವರಿಕೆ ಮಾಡಿ ಮುಂದಿನ ಪಾಠಕ್ಕೆ ಹೋಗುತ್ತಿದ್ದರು. ಮಕ್ಕಳಿಗೆ ಯಾವುದೇ ರೀತಿಯಿಂದ ಶಿಕ್ಷಿಸದೇ ಕಣ್ಣು ಸಣ್ಣೆಯಿಂದಲೇ ತಿದ್ದಿ ತೀಡಿ ಪಾಠ ಬೋಧನೆ ಮಾಡುತ್ತಿದ್ದರು. ಮನೆಯಲ್ಲಿ ಕೂಡ ಒಳ್ಳೆಯ ನಡೆತೆ,ಒಳ್ಳೆಯ ಅಭ್ಯಾಸ,ಮೃದು ಸ್ವಭಾವದಿಂದ ದೊಡ್ಡ ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ಬಂದವರು. ಶ್ರೀಮಂತ ಮನೆತನದಿಂದ ಬಂದವರಾದರೂ ಯಾವುದೇ ಅಹಂ ಇರಲಿಲ್ಲ. ಏಳು ಜನ ಮಕ್ಕಳು,ಗಂಡನ ಅನಾರೋಗ್ಯದ ಸಮಸ್ಯೆ ಹಾಗೂ ಖಾಸಗಿ ಶಾಲೆಯ ಕಟ್ಟುನಿಟ್ಟಾದ ಪರಿಸರದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಸಮಯ ಪ್ರಜ್ಞೆಯೊಂದಿಗೆ ನಿಷ್ಠೆಯಿಂದ ಕೆಲಸ ಮಾಡಿದವರು. ಮನೆಯ ಸಮಸ್ಯೆಯನ್ನು ಮನೆಯಲ್ಲಿ ಮಾತ್ರ ಬಿಟ್ಟು,ಶಾಲೆಯಲ್ಲಿ ಶಿಕ್ಷಕಕಿಯಾಗಿ ಅಚ್ಚುಕಟ್ಟಿನ ಉಡುಗೆ ತೊಡುಗೆ ವಿದ್ಯಾರ್ಥಿಗಳು ಮೆಚ್ಚುವಂಥ ಮಾತೃ ಹೃದಯಿ ಆಗಿದ್ದರು. ಮಕ್ಕಳಿಗೆ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಇಂಗ್ಲಿಷ್ ಬೋಧಿಸುತ್ತಿದ್ದರು. ಇಂದಿಗೂ ನಾವು ಅವರ ಮಾದರಿ ಅನುಸರಿಸಿ ನಾವು ಪಾಠ ಬೋಧನೆ ಮಾಡುತ್ತೇವೆ. ಇವತ್ತಿಗೂ ನಾವು ಯಾವುದೇ ತಪ್ಪು ಮಾಡಿದಾಗ,ಅಥವಾ ಅಶಿಸ್ತಿನಿಂದ ವರ್ತಿಸಿದಾಗ ನಮಗೆ ಬುದ್ಧಿ ಹೇಳುತ್ತಾರೆ. ಶಿಸ್ತು ಮತ್ತು ಸಮಯಪ್ರಜ್ಞೆ,ಇತರರೊಂದಿಗೆ ಒಳ್ಳೆಯ ಸಂಬಂಧ ಇವೆಲ್ಲವೂ ಇವರಿಂದ ಕಲಿಯುವಂಥವು. ಇದರ ಮಾರ್ಗದರ್ಶನ ಪಡೆದು ನಾವು ಇದನ್ನೇ ಪಾಲಿಸಿಕೊಳ್ಳುತ್ತ ಬಂದಿದ್ದೇವೆ. ೩೦ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಮ್ಮ ತಂದೆಯನ್ನು ಮಗುವಿನ ಹಾಗೆ ಆರೈಕೆ ಮಾಡಿದ್ದು,ಆದರ್ಶವಾದ ನನ್ನ ತಾಯಿ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಶಾಲೆಯ ಜವಾಬ್ದಾರಿ,ದೊಡ್ಡ ಕುಟುಂಬದ ಜವಾಬ್ದಾರಿ ಜತೆಗೆ ಸಮಾಜದಲ್ಲಿ ಒಬ್ಬ ಆದರ್ಶ ಮಹಿಳೆಯಾಗಿ ಉತ್ತಮ ಶಿಕ್ಷಕಿ ಆಗಿ ಹೊರಹೊಮ್ಮಿದ್ದಾರೆ. ಒಬ್ಬ ಆದರ್ಶ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ ನನ್ನ ತಾಯಿಗೆ ನನ್ನ ಒಂದು ಸಲಾಂ..........
Comments (0)
Post Comment
Report Abuse
Be the first to comment using the form below.