(JavaScript required to view this email address)
Mangalore

News & Articles

ಶ್ರೀ ಶಾರದಾ ಓದುಗರ ವೇದಿಕೆಯ ಆರಂಭದ ದಿನಗಳು ಅವು. ವೇದಿಕೆಯ ಸದಸ್ಯರು ತಮ್ಮ ವಿಮರ್ಶೆಗಳನ್ನು ಮಂಡಿಸಲು ಪ್ರಯತ್ನಿಸುತ್ತಿದ್ದ ಕಾಲ. ಎಂಬತ್ತರ ಆಸುಪಾಸಿನ ಹಿರಿಯರಿಂದ ಹಿಡಿದು ಇಪ್ಪತ್ತೈದರ ಹರೆಯ ದವರ ಮಿಲನ ಆ ವೇದಿಕೆಯ ಹೆಗ್ಗಳಿಕೆಯಾಗಿತ್ತು. ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬAಧವಯ್ಯಾ-ಎAಬ ವಚನದ ಭಾವದಂತೆ ನಾವೆಲ್ಲ ಸದಸ್ಯರು ಒಂದುಗೂಡಿದ್ದು ಸಂತಸ ಹಂಚಿಕೊAಡದ್ದು, ಜೀವನದ ಸಾಧನೆಯೆಡೆಗೆ ಸಾಗಿದ್ದು ಈಗ ಇತಿಹಾಸ. ಇಂತಹ ಸಮಾಗಮದಲ್ಲಿ ಒಂದು ದಿನ ತಮ್ಮ ಭಾವಪೂರ್ಣ ಅನಿಸಿಕೆಯಿಂದ ನಮ್ಮನ್ನೆಲ್ಲ ಸೆಳೆದವರು ಶ್ರೀಮತಿ ಗಾಯತ್ರಮ್ಮ. ಅವರ ಹೃದಯ ಭಾವನೆಗಳ ಆಗರ ಹಾಗೂ ಸಾಗರವೇ ಆಗಿತ್ತು. ಆದರೆ ಈಗ ನೂರಾರು ಕವನಗಳನ್ನು ರಚಿಸಿ, ನಾನಾ ರೀತಿಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡ ಗಾಯತ್ರಮ್ಮನವರನ್ನು ಕಂಡಾಗ ಅವರಲ್ಲಿ ಒಬ್ಬ ಕವಯತ್ರಿ ಅಡಗಿದ್ದಳು ಎಂಬ ನನ್ನ ಅನಿಸಿಕೆ ಸುಳ್ಳಾಗಿರಲಿಲ್ಲ.
ಗಾಯಿತ್ರಮ್ಮ ನವರದು ಧೈರ್ಯ, ಸ್ಥೈರ್ಯದ ವ್ಯಕ್ತಿತ್ವ. ಮದುವೆ, ಮಕ್ಕಳು ನಂತರ ಪದವಿಯನ್ನು ಪಡೆದವರು. ಇವತ್ತು ರಾಜ್ಯಮಟ್ಟದಲ್ಲಿ ಪ್ರಶಸ್ತಿ ಸನ್ಮಾನಗಳನ್ನು ಗಳಿಸುವಂತಹ ರೀತಿಯಲ್ಲಿ ಕವನಗಳ ರಚನೆಯಿಂದ ಹೆಸರಾದದ್ದು ನನಗೆ ಒಂದು ಸೋಜಿಗ. ಕವನಗಳ ರಚನೆಗೆ ಬೇಕಾದ ಪ್ರತಿಭೆ ದೈವದತ್ತವಾದುದು. ಗಾಯಿತ್ರಮ್ಮ ನವರು ಆ ಪ್ರತಿಭೆಯನ್ನು ಆಳವಾದ ಅಧ್ಯಯನದ ಒರೆಗಲ್ಲಿಗೆ ಹಚ್ಚಿ, ಈಗ ಪ್ರಕಾಶನಗೊಳ್ಳುತ್ತಿರುವ ‘ಭಾವದರ್ಪಣ’ ಕವನ ಸಂಕಲನದಲ್ಲಿ ಸುಮಾರು 74 ಕವನ ಗಳಿದ್ದು ವೈವಿಧ್ಯಮಯ ಕಾವ್ಯವಸ್ತುಗಳನ್ನು ಹೊಂದಿದೆ. ಗಂಭೀರವಾದ ಭಾವಕೂಟದಿಂದ ವರ್ಣ ರಂಜಿತವಾದ ಭಾವನಾತ್ಮಕ ಕವನಗಳು ಓದುಗರನ್ನು ರಂಜಿಸುವುದರ ಜೊತೆಗೆ ಉತ್ತಮ ಸಂದೇಶಗಳನ್ನು ತಲಪಿಸುತ್ತವೆ. ಕವನಗಳಲ್ಲಿ ಉತ್ತಮ ಅಭಿರುಚಿಯ ಚಿಗುರಿ ನಂತಹ ಭಾವಗಳಿವೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಮಟ್ಟದ ಕವನಗಳು ಅವರಿಂದ ಹೊರಹೊಮ್ಮಲಿ. ಸಾಮಾನ್ಯ ಬದುಕಿಂದ ಅಸಾಮಾನ್ಯ ಕವನಗಳ ಭಾವಧಾರೆಯಾಗಿ... ಚಿಮ್ಮಿದೆ. ಶ್ರೀ ಶಾರದಾ ಓದುಗರ ವೇದಿಕೆ ಸ್ಥಾಪಿಸಿದ್ದು ನನಗೆ ಸಾರ್ಥಕತೆ ಹಾಗೂ ನೆಮ್ಮದಿ ನೀಡಿದೆ. ಗಾಯಿತ್ರಮ್ಮ ನವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಶುಭಾಶಯಗಳೊಂದಿಗೆ,
ರುಕ್ಮಿಣಿನಾಯಕ್, ಎಮ್.ಎ.ಬಿ ಎಡ್ ಶಿವಮೊಗ್ಗ
ನಿವೃತ್ತ ಸಂಸ್ಕೃತ ಉಪನ್ಯಾಸಕರು
ಶ್ರೀಮತಿ ಗಾಯತ್ರಿ ಸುರೇಂದ್ರ ಅವರ ಭಾವದರ್ಪಣ
ರುಕ್ಮಿಣಿನಾಯಕ್, ಎಮ್.ಎ.ಬಿ ಎಡ್ ಶಿವಮೊಗ್ಗ
ನಿವೃತ್ತ ಸಂಸ್ಕೃತ ಉಪನ್ಯಾಸಕರು
ಶ್ರೀಮತಿ ಗಾಯತ್ರಿ ಸುರೇಂದ್ರ ಅವರ ಭಾವದರ್ಪಣ

ಸಹೃದಯ ಕವಯಿತ್ರಿಶ್ರೀಮತಿ ಗಾಯತ್ರಮ್ಮ
ಶ್ರೀಮತಿ ಗಾಯತ್ರಮ್ಮ ಮೂಲತಃ ಶಿವಮೊಗ್ಗ ದವರು. ಅವರ ಪತಿ ಸುರೇಂದ್ರ ಬಿ ಎಂ. ವಾಯು ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರು.ಶ್ರೀಮತಿ ಗಾಯತ್ರಮ್ಮ ಅವರಿಗೆ ಕನ್ನಡ ಸಾಹಿತ್ಯ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿ. ಅವರ ಓದು ಬಿ.ಎ. ಹಿಂದಿಯಲ್ಲಿ ಪ್ರವೀಣ ಮತ್ತು ಸಂಸ್ಕೃತದಲ್ಲಿ ಕೋವಿದ ಕೂಡ ಪೂರೈಸಿದ್ದಾರೆ. ಅವರು ಅಂತರ್ಜಾಲ ಆಧಾರಿತ ಸಾಹಿತ್ಯ ಬಳಗಗಳಲ್ಲಿ ಸಕ್ರಿಯರಾಗಿದ್ದಾರೆ. ನೂರಕ್ಕೂ ಹೆಚ್ಚು ಬಳಗಗಳಿಂದ ಬಹುಮಾನ ಪತ್ರಗಳನ್ನು ಪಡೆದಿದ್ದಾರೆ.ಶ್ರೀಮತಿ ಗಾಯತ್ರಮ್ಮ ಅವರು ವಾಗೀಶ್ವರಿ ಓದುಗರ ಸಂಘವನ್ನು 2013ರಲ್ಲಿ ಹುಟ್ಟು ಹಾಕಿ ಶಿವಮೊಗ್ಗದಲ್ಲಿ ಮನೆ ಮನೆಯಲ್ಲಿ ಉತ್ತಮ ಪುಸ್ತಕಗಳ ವಿಮರ್ಶೆಯ ಮೂಲಕ ಜಾಗೃತಿ ಮೂಡಿಸಿ ಓದುವ ಹವ್ಯಾಸವನ್ನು ಬೆಳೆಸಿದ್ದಾರೆ. ಅವರು ಕನ್ನಡ ಸಾಹಿತ್ಯ ಪರಿಷತ್ ಶಿವಮೊಗ್ಗ ತಾಲೂಕ ಘಟಕದ ಸದಸ್ಯರು. 
ಶ್ರೀಮತಿ ಗಾಯತ್ರಮ್ಮ ಅವರಿಗೆ ಹಲವು ಪ್ರಶಸ್ತಿಗಳು ಬಂದಿವೆ
1 ಕನ್ನಡ ಸೇವಾರತ್ನ ಪ್ರಶಸ್ತಿ ರಾಜ್ಯ ಪ್ರಶಸ್ತಿ 
 ಬೆಂಗಳೂರು ನಗರ ಜಿಲ್ಲಾ
2 ಸಾಹಿತ್ಯದ ಸಿಂಧೂ ರಾಜ್ಯ ಪ್ರಶಸ್ತಿ 
3 ಉತ್ತಿಷ್ಠ ಸಾಧಕ ರತ್ನ ಪ್ರಶಸ್ತಿ ಪ್ರಶಸ್ತಿ ರಾಜ್ಯ ಪ್ರಶಸ್ತಿ ಬೆಂಗಳೂರು 
4 ಹೆಮ್ಮೆಯ ಕನ್ನಡತಿ ರಾಜ್ಯ ಪ್ರಶಸ್ತಿ ಧಾರವಾಡ
5 ಸೌರಭ ರತ್ನ ಕಾವ್ಯಪ್ರಶಸ್ತಿ - ರಾಜ್ಯ ಪ್ರಶಸ್ತಿ 
 ಕಥಾಬಿಂದು ಪ್ರಕಾಶನದವರಿಂದ
ಶ್ರೀಮತಿ ಗಾಯತ್ರಮ್ಮ ಅವರ ಸಾಹಿತ್ಯ ಚಟುವಟಿಕೆಗಳು ಇನ್ನೂ ಬಿರುಸಾಗಿ ನಡೆಯಲಿ ಎಂದು ಶುಭ ಹಾರೈಕೆಗಳು. 


ಶ್ರೀಮತಿ ಗಾಯತ್ರಿ ಸುರೇಂದ್ರ ಅವರ ಭಾವದರ್ಪಣ
ಡಾ ಕೊಳ್ಚಪ್ಪೆ ಗೋವಿಂದ ಭಟ್ 
ಮಂಗಳೂರು

ಶ್ರೀಮತಿ ಗಾಯತ್ರಿ ಸುರೇಂದ್ರ ಅವರ ಭಾವದರ್ಪಣ
ಶ್ರೀಮತಿ ಗಾಯತ್ರಿ ಸುರೇಂದ್ರ ಅವರ ಭಾವದರ್ಪಣ
ಶ್ರೀಮತಿ ಗಾಯತ್ರಿ ಸುರೇಂದ್ರ ಅವರ ಭಾವದರ್ಪಣ
ಶ್ರೀಮತಿ ಗಾಯತ್ರಿ ಸುರೇಂದ್ರ ಅವರ ಭಾವದರ್ಪಣ
ಶ್ರೀಮತಿ ಗಾಯತ್ರಿ ಸುರೇಂದ್ರ ಅವರ ಭಾವದರ್ಪಣ

Comments (0)




Be the first to comment using the form below.