"ಕರ್ನಾಟಕದ ಭಾಷೆ ಕನ್ನಡ ಬೇರೆಯಲ್ಲ ತುಳು ಬೇರೆಯಲ್ಲ ಆದರೆ ಕಾರಣಾಂತರದಿಂದ ಆದ್ಯತೆ ಸಿಗದ ಕಾರಣ ಮನ್ನಣೆ ಸಿಕ್ಕಿಲ್ಲ ಕನ್ನಡವನ್ನು ಬೆಳೆಸುವ ಜವಾಬ್ದಾರಿಯನ್ನು ತುಳುವರು ವಹಿಸಿಕೊಂಡ ಅಂತೆ ಉಳಿಸಿಕೊಂಡಂತೆ ತುಳುವನ್ನು ಬೆಳೆಸುವಲ್ಲಿ ಕನ್ನಡಿಗರು ಜವಾಬ್ದಾರಿ ವಹಿಸಿಕೊಳ್ಳಬೇಕು"
- ಮಹೇಶ್ ಜೋಷಿ, ಕಸಾಪ ಅಧ್ಯಕ್ಷ.
ಮಂಗಳೂರು: ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಕನ್ನಡಿಗರಿಗೆ ಆದ್ಯತೆಯ ಮೇಲೆ ಉದ್ಯೋಗ ಸಿಗುವಂತಾಗಬೇಕು. ಕನ್ನಡ ಶಾಲೆಗಳನ್ನು ಮುಚ್ಚದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.
ತುಳು ಸಾಹಿತ್ಯ ಅಕಾಡೆಮಿ, ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಸತ್ಯಶಾಂತ ಪ್ರತಿಷ್ಠಾನ ಸಹಯೋಗದಲ್ಲಿ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಸೋಮವಾರ ನಗರದ ಊರ್ವ ಸ್ಟೋರ್ ತುಳು ಭವನದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸಾಹಿತ್ಯ ಪರಿಷತ್ ಅಧ್ಯಕ್ಷರ ಆಯ್ಕೆಗೆ ಮುಂದಿನ ಬಾರಿ ಮೂಲಕ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ. ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ, ಸದಸ್ಯರು ತಾವು ಇರುವಲ್ಲಿಂದಲೇ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ಪರಿಷತ್ ಗೆ ಅನುದಾನ ನೀಡುವುದು ಸರ್ಕಾರದ ಕರ್ತವ್ಯ ಅದನ್ನು ಪಡೆದುಕೊಂಡು ಸಾಹಿತ್ಯ ಸೇವೆ ನಡೆಸುತ್ತೇವೆ ಎಂದರು.
ಡಾ ಮಹೇಶ ಜೋಶಿ ಮತ್ತು ಕಸಾಪ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷ ಎಂ.ಪಿ. ಶ್ರೀನಾಥ್ ಅವರನ್ನು ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಭಿನಂದಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸುವ ನಿಟ್ಟಿನಲ್ಲಿ ಪರಿಷತ್ ಅಧ್ಯಕ್ಷರ ಸಹಕಾರ ಯಾಚಿಸಿದರು.
ಸಾಹಿತಿ ಲಕ್ಷ್ಮಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಲೆಕ್ಕಪರಿಶೋಧಕ ಎಸ್. ಎಸ್. ನಾಯಕ್, ಪಿಂಗಾರ ಸಾಹಿತ್ಯ ಬಳಗದ ರೇಮಂಡ್ ಡಿಕೊನ ತಾಕೊಡೆ, ಸತ್ಯಶಾಂತ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷೆ ಶಾಂತ ಕುಂಟಿನಿ, ಗಝಲ್ ಕವಿ ಡಾ. ಸುರೇಶ ನೆಗಳಗುಳಿ, ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಬೆಟ್ಟಂಪಾಡಿ ಸುಂದರ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಮಲ್ಲಿಕಾ ಶೆಟ್ಟಿ, ಕಾಂತಿ ಶೆಟ್ಟಿ, ಕಾರ್ಯಕ್ರಮದ ಆಯೋಜಕರಾದ ಪಿ.ವಿ. ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು. ಶಾಂತ ಪುತ್ತೂರು ಸ್ವಾಗತಿಸಿ, ಜಯಾನಂದ ಪೆರಾಜೆ ವಂದಿಸಿದರು. ರಶ್ಮಿ ಸನಿಲ್ ನಿರೂಪಿಸಿದರು.
Comments (0)
Post Comment
Report Abuse
Be the first to comment using the form below.