(JavaScript required to view this email address)
Mangalore

News & Articles

ಕಾವ್ಯ ಎನ್ನುವುದು ಬರಿ ತೋಚಿದ್ದನ್ನು ಗೀಚುವುದಲ್ಲ ನನ್ನ ಗುರುಗಳು ಮಿತ್ರರು ಆದ ಡಾ. ಕೆ ಜಿ ವೆಂಕಟೇಶ್ ರವರ ಹಲವು ಹವ್ಯಾಸಗಳಲ್ಲಿ ಕವನ ಬರೆಯುವುದು ಒಂದು. ಒಂಬತ್ತನೇ ತರಗತಿಯಲ್ಲಿದ್ದಾಗಲೇ ಕತೆ ಬರೆದು ಶಿವಮೊಗ್ಗ ಜಿಲ್ಲಾ ಮಟ್ಟದ ಮೊದಲ ಬಹುಮಾನವನ್ನು ಪಡೆದಿದ್ದರು ಅನಂತರ ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಓದುವಾಗ ನೂರಾರು ಕವನಗಳನ್ನು ಬರೆದಿದ್ದರು ಆದರೆ ಬರೆದಿದ್ದನ್ನು ಇಟ್ಟುಕೊಳ್ಳುವ ಹವ್ಯಾಸ ಇವರದ್ದಲ್ಲ. ಕೊರೋನ ಕಾಲದಲ್ಲಿ ಏನು ಕೆಲಸವಿಲ್ಲದೆ ಇದ್ದಾಗ ಅನೇಕರು ವಾಟ್ಸಪ್ ನಲ್ಲಿ ಕವನ ಸ್ಪರ್ಧೆಗಳನ್ನು ಏರ್ಪಡಿಸಿದ್ದರು ಇಂತಹ ಸ್ಪರ್ಧೆಗಳಲ್ಲಿ ಅವರು ಕೊಟ್ಟಂತ ವಿಷಯಕ್ಕೆ ತಕ್ಷಣವೇ ಕವನವನ್ನು ಗೀಚಿ ಕಳುಹಿಸುತ್ತಿದ್ದರು ಹಾಗೆ ಕವನವನ್ನು ಕಳಿಸುವಾಗ ಮೊಬೈಲ್ನಲ್ಲಿ ಟೈಪ್ ಮಾಡಲೇಬೇಕಾಗಿತ್ತು. ಹೀಗಾಗಿ ಇವರು ಬರೆದ ಸಾವಿರಾರು ಕವನಗಳಲ್ಲಿ ಕೆಲವು ಉಳಿದುಕೊಂಡಿತು. ಸಾಂತ್ವಾನ ಕವನದಲ್ಲಿ ಜಗದೆಲ್ಲ ನೋವು ಓಡಿಸುವಂತೆ ಅವಳು ಸಂತೈಸುತ್ತಾಳೆ ಬಳ್ಳಿ ಅಪ್ಪಿದಂತೆ ಎದೆಗೆ. ಎನ್ನುತ್ತಾರೆ. ಬೆಳಗು ಕವನದಲ್ಲಿ ಹುತ್ತದ ನಾಗಪ್ಪನ ಕಲ್ಲಿಗೆ ಹಾಲು ಎರೆದರೆ ಸಂತಾನ ಭಾಗ್ಯ ಬರುವುದೇ. ಗಂಡು ಗಂಡಸಿಗೆ ಹಾಲುಕೊಡು ತನುಮನ ಎರೆ....ಎಂದು ವಾಸ್ತವತೆ ಗುರುತಿಸುತ್ತಾರೆ. 
ಕಾಡುವ ಗೆಳೆಯ ಕವನದಲ್ಲಿ ಬಾ ಗೆಳೆಯ ನೀ ಹೀಗೆ ಕಾಡಬೇಡ. ಕಾಡಬೇಡ ನನ್ನ ಎಳೆದೊಯ್ಯುವ ಮುಂಚೆ ನೀ ಬಾ ಎಂದು ಅಕ್ಷರ ಮತ್ತು ಅರ್ಥವನ್ನು ಸಮರ್ಥವಾಗಿ ದುಡಿಸಿಕೊಂಡಿದ್ದಾರೆ. ಸಂಕಲದ ಉದ್ದಕ್ಕೂ ಇಂತಹದ್ದೇ ಕವನಗಳಿವೆ. ಕಥಾಬಿಂದು ಪ್ರಕಾಶನದವರು ಪ್ರಕಟಿಸುವ ನೂರು ಕವನಗಳ ಒಂದು ಸಂಕಲನಕ್ಕೆ ಒಂದಷ್ಟು ಕವಿತೆಗಳನ್ನು ಕಳುಹಿಸಿದರು ಎಲ್ಲಿಯೂ ವಿಶೇಷವಾಗಿ ಆಯ್ಕೆ ಮಾಡಿದ ಕವಿತೆಗಳಿಲ್ಲ ಇರುವ ಕವನಗಳೆಲ್ಲವೂ ಯೋಚನೆಗೆ ಹಚ್ಚುತ್ತದೆ.

ಗಣೇಶ್ ಬಿಳಗಿ ಪ್ರಕಾಶಕರು 
ಸಂಪಾದಕರು ಕ್ರಾಂತಿಕಿಡಿ ಪಾಕ್ಷಿಕ ಪತ್ರಿಕೆ ಶಿವಮೊಗ್ಗ
ಡಾ. ಕೆ ಜಿ ವೆಂಕಟೇಶ್ ರವರ ಕನಸು ಗರಿಗೆದರುವ ಮುನ್ನ
ಡಾ.ಕೆ.ಜಿ. ವೆಂಕಟೇಶ್ ಇವರು ಮೂಲತಃ ಶಿವಮೊಗ್ಗ ಜಿಲ್ಲೆ ಹೊಸನಗರದವರು ತಂದೆ ಕೆ .ಗೋವಿಂದಪ್ಪ ತಾಯಿ ಹೆಚ್. ರತ್ನಮ್ಮ
ಮೈಸೂರು ವಿ.ವಿ.ಯಿಂದ ಎಂ.ಎ. ಇತಿಹಾಸ ಪದವಿ ಪಡೆದ ಇವರು ಕರ್ನಾಟಕದಲ್ಲಿ ರಾಮಕ್ಷತ್ರಿಯರು ಎಂಬ ಮಹಾ ಪ್ರಬಂಧಕ್ಕಾಗಿ ಕುವೆಂಪು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ನಿವೃತ್ತ ಉಪನ್ಯಾಸಕರಾದ ಇವರು ಯಕ್ಷಗಾನ ತಾಳಮದ್ದಲೆ ನಾಟಕ ಹರಟೆ ಅಷ್ಟಾವಧಾನ ಸಾಹಿತ್ಯ ಜಾನಪದ ಪತ್ರಿಕೋದ್ಯಮ ಯೋಗಾಸನ ಪರ್ವತಾರೋಹಣ ದಲ್ಲಿ ಆಸಕ್ತರಾಗಿ ಹಲವಾರು ಸಾಧನೆಯನ್ನು ಮಾಡಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಪ್ರಶಸ್ತಿ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ದಸರಾ ಪ್ರಶಸ್ತಿ ಕ್ಷತ್ರಿಯ ಕುಲ ತಿಲಕ ಪ್ರಶಸ್ತಿ ಕನಕ ಚೇತನ ರತ್ನ ಪತಂಜಲಿ ಪ್ರಶಸ್ತಿ ರಾಮ ಕ್ಷತ್ರಿಯ ಕುಲ ಪುರಸ್ಕಾರ ಪ್ರಶಸ್ತಿ ಕನ್ನಡ ಪಯಸ್ವಿನಿ ೨೦೨೨ ಪ್ರಶಸ್ತಿ ಅತ್ಯುತ್ತಮ ಕಥೆಗಾರ ಅತ್ಯುತ್ತಮ ಲೇಖಕ ಪ್ರಶಸ್ತಿ ಪಡೆದಿರುತ್ತಾರೆ. ಹತ್ತಕ್ಕೂ ಹೆಚ್ಚು ಸಮಾಜ ಸೇವಾ ಸಂಘಟನೆಗಳಲ್ಲಿ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.







ಡಾ. ಕೆ ಜಿ ವೆಂಕಟೇಶ್ ರವರ ಕನಸು ಗರಿಗೆದರುವ ಮುನ್ನ
 ಪಿ. ವಿ. ಪ್ರದೀಪ್ ಕುಮಾರ್
ಲೇಖಕ, ಕಾದಂಬರಿಕಾರ  ಕಥಾಬಿಂದು  ಪ್ರಕಾಶನ ಮಂಗಳೂರು 
ಡಾ. ಕೆ ಜಿ ವೆಂಕಟೇಶ್ ರವರ ಕನಸು ಗರಿಗೆದರುವ ಮುನ್ನ
ಡಾ. ಕೆ ಜಿ ವೆಂಕಟೇಶ್ ರವರ ಕನಸು ಗರಿಗೆದರುವ ಮುನ್ನ
ಡಾ. ಕೆ ಜಿ ವೆಂಕಟೇಶ್ ರವರ ಕನಸು ಗರಿಗೆದರುವ ಮುನ್ನ
ಡಾ. ಕೆ ಜಿ ವೆಂಕಟೇಶ್ ರವರ ಕನಸು ಗರಿಗೆದರುವ ಮುನ್ನ
ಡಾ. ಕೆ ಜಿ ವೆಂಕಟೇಶ್ ರವರ ಕನಸು ಗರಿಗೆದರುವ ಮುನ್ನ

Comments (0)




Be the first to comment using the form below.