(JavaScript required to view this email address)
Mangalore

News & Articles

ಮಂಗಳೂರಿನ ಕಾದಂಬರಿಗಾರ ಪ್ರದೀಪ್ ಕುಮಾರ್ ಅವರ ಸಾರಥ್ಯದಲ್ಲಿ ಕನ್ನಡಿಗರ 15 ಸಾಹಿತ್ಯಕ ಮತ್ತು ಕಲಾಸಕ್ತರ ತಂಡ ಐದು ದಿನಗಳ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳ ಭೇಟಿ ಮಾಡಿ ಸೆಪ್ಟೆಂಬರ್ 27ರಂದು ಮಂಗಳೂರಿಗೆ ವಾಪಸ್ ಬಂದಿದ್ದಾರೆ. 
ತಾವು ಭೇಟಿ ನೀಡಿದ ರಾಜಧಾನಿಯಲ್ಲಿ ಕನ್ನಡದ ಕಂಪನ್ನು ಪಸರಿಸಿದ ಈ ಪ್ರವಾಸಿಗಳ ಪ್ರಯತ್ನ ಶ್ಲಾಘನೀಯ. ವೇದಿಕೆಯಲ್ಲಿ ಕಲಾವಿದ ದಂಪತಿಗಳಾದ ರವೀಂದ್ರ ಕಿಣಿ ಮತ್ತು ಕವಿತಾ ಕಿಣಿ, ಶಿಕ್ಷಕಿ ದೀಪ್ತಿ ಪ್ರದೀಪ್ ಕುಮಾರ್ ಅವರ ಜೊತೆಗೆ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ರೇವತಿ ವೈದ್ಯ, ಅನುರಾಧ ವೈದ್ಯ, ಅನಿತಾ ಶೆಣೈ, ಗಾಯತ್ರಿ ಮನೋಹರ್, ಸುಲೋಚನಾ ನವೀನ್ ಕವನವಾಚನ ಮಾಡಿದರು. ಶಿಕ್ಷಕಿ ಸುಭಾಷಿಣಿ ಕನ್ನಡ ಚಿತ್ರಗೀತೆ ಹಾಡಿ ಮಾಧುರ್ಯ ತುಂಬಿದರು. ಬಾಬಾ ಪೈ ಮತ್ತು ಜಯಶ್ರೀ ಪೈ ಉಪಸ್ಥಿತರಿದ್ದರು. 

ನವದೆಹಲಿಯಲ್ಲಿ ಕಥಾಬಿಂದು ಪ್ರಕಾಶನದ ಕನ್ನಡ ಡಿಂಡಿಮ
ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು
ನವದೆಹಲಿಯಲ್ಲಿ ಕಥಾಬಿಂದು ಪ್ರಕಾಶನದ ಕನ್ನಡ ಡಿಂಡಿಮ - Youtube Video
ನವದೆಹಲಿಯಲ್ಲಿ ಕಥಾಬಿಂದು ಪ್ರಕಾಶನದ ಕನ್ನಡ ಡಿಂಡಿಮ

Comments (0)




Be the first to comment using the form below.