(JavaScript required to view this email address)
Mangalore

News & Articles

ಕಥಾ ಬಿಂದು ಪ್ರಕಾಶನದ ಮೂಲಕ ಕೃತಿ ಪ್ರಕಟಿಸುವವರಿಗೆ ಸೂಚನೆಗಳು
ಕಥಾ ಬಿಂದು ಪ್ರಕಾಶನವು ಬರಹಗಾರರ ಕೃತಿಗಳನ್ನು  ಸ್ಪರ್ಧಾತ್ಮಕ ದರದಲ್ಲಿ ಪ್ರಕಟಿಸುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಚಾರವಾಗಿದೆ. ಈ ಸಾಲಿನ ಅಕ್ಟೋಬರ್ 26 ನೇ ತಾರೀಕು ಮಂಗಳೂರಿನಲ್ಲಿ ಸುಮಾರು 25 ಕೃತಿಗಳನ್ನು ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. 64 ಪುಟದ ಕವನ ಸಂಕಲನಕ್ಕೆ ರೂ 6,000 ಶುಲ್ಕವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಡಿಟಿಪಿ ಮಾಡುವ ಖರ್ಚು, ಮುಖಪುಟ ತಯಾರಿಸುವ ಖರ್ಚು, ಪುಸ್ತಕ ತಯಾರಿ ಮತ್ತು ಪ್ರೊಫೆಷನಲ್ ಬೈಂಡಿಂಗ್ ಖರ್ಚು ಮತ್ತು ಪುಸ್ತಕ ಬಿಡುಗಡೆಯ ಖರ್ಚು ಒಳಗೊಂಡಿದೆ.

ಪುಸ್ತಕ ಪ್ರಕಟಣೆ ಈ ಕೆಳಗಿನಂತಿದೆ 

ಕೃತಿಕಾರರು ತಮ್ಮ ಕವನಗಳನ್ನು ಮೊಬೈಲಿನಲ್ಲಿ ಟೈಪ್ ಮಾಡಿ  ಅಥವಾ ನುಡಿಯಲ್ಲಿ ಟೈಪ್ ಮಾಡಿ ವಾಟ್ಸಪ್ ಮುಖಾಂತರ ಅಥವಾ ಇ-ಮೇಲ್ ಮುಖಾಂತರ ಪ್ರಕಾಶಕರ  9341410153   *   [email protected] ನಂಬರಿಗೆ   ಅಥವಾ ಇಮೇಲ್ ಗೆ ಕಳಿಸಿಕೊಡಬೇಕು. ಬಂದ ಕವನಗಳನ್ನು ಡಿಟಿಪಿ ಮಾಡಿ ಕರಡು ರೂಪದಲ್ಲಿ ಕೃತಿಗಾರರಿಗೆ ವಾಟ್ಸಪ್ ಮೂಲಕ ಮುಖಾಂತರ ಕಳಿಸಲಾಗುವುದು... ಅದನ್ನು ಸ್ಥಳೀಯವಾಗಿ ಒಂದು ಕಾಪಿ ಪ್ರಿಂಟ್ ಮಾಡಿ ಪೂರ್ಣವಾಗಿ ಪರಿಶೀಲಿಸಿ ಪ್ರೂಫ್ ಓದಿ ಹಸ್ತಪ್ರತಿಯನ್ನು ಸ್ಪೀಡ್ ಪೋಸ್ಟ್ ಮುಖಾಂತರ ಈ ವಿಳಾಸಕ್ಕೆ ಕಳಿಸಬೇಕು ....

ಪ್ರದೀಪ್ ಕುಮಾರ್ 
ಕಥಾಬಿಂದು ಪ್ರಕಾಶನ 
ಕಲಾ ಶ್ರೀ, ಎಲ್ ಐ ಜಿ 6, ಕೆ ಎಚ್ ಬಿ ಕಾಲೋನಿ, ಕುಂಜತಬಯಲು 
ಪಿನ್ನು 575015
ಮಂಗಳೂರು ಇದರ ಜೊತೆಗೆ ಮುನ್ನುಡಿ, ಬೆನ್ನುಡಿ, ಲೇಖಕರ ಮಾತುಗಳನ್ನು ಕೂಡ ಕಳಿಸಬೇಕು. 
ಪ್ರಕಾಶಕರು ವಸ್ತು ವಿಷಯದ ಆಧಾರದ ಮೇಲೆ ಮುಖಪುಟ ಮಾಡಿ ಕೃತಿಕಾರರಿಗೆ ಕಳಿಸುವರು. ಅದರ ಅಂತಿಮ  ಆಯ್ಕೆಯನ್ನು ಪ್ರಕಾಶಕರಿಗೆ ತಿಳಿಸಬೇಕು. ಒಂದು ವೇಳೆ ಲೇಖಕರು ಮುಖಪುಟ ಮಾಡುವುದಾದರೆ ಮೊದಲೇ ತಿಳಿಸಬೇಕು. ಪುಸ್ತಕ ಬಿಡುಗಡೆಗೆ ಬಳಸಲಾಗುವುದು (26.10.25).


ಕಥಾಬಿಂದು ಪ್ರಕಾಶನದ ಮೂಲಕ ಕೃತಿ ಪ್ರಕಟಿಸುವವರಿಗೆ
ಕಥಾಬಿಂದು ಪ್ರಕಾಶನದ ಮೂಲಕ ಕೃತಿ ಪ್ರಕಟಿಸುವವರಿಗೆ - Youtube Video
ಕಥಾಬಿಂದು ಪ್ರಕಾಶನದ ಮೂಲಕ ಕೃತಿ ಪ್ರಕಟಿಸುವವರಿಗೆ

Comments (0)




Be the first to comment using the form below.