(JavaScript required to view this email address)
Mangalore

News & Articles

ಭಾವಗೀತೆಗಳು ಯಾವುದೇ ಭಾಷೆಯ ಸಾಹಿತ್ಯದಲ್ಲೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಅದಕ್ಕೆ ಕಾರಣಗಳು ಹಲವಿದ್ದರೂ  ಬಹು ಮುಖ್ಯವಾಗಿ ಅದು ಈ ಜಗತ್ತಿನ ಎಲ್ಲಾ ಜೀವಿಗಳ ಭಾವನೆಗಳಿಗೆ ಸಂಬಂಧಿಸಿದೆ ಎನ್ನಬಹುದು. ಈ ಜಗತ್ತಿನ ಪ್ರತಿ ಮನುಜನಲ್ಲೂ ತನ್ನದೇ ಆದ ಭಾವನೆಗಳಿರುವುದು ಸರ್ವೇಸಾಮಾನ್ಯ ಸಂಗತಿ. ಎಲ್ಲಾ ರಸಗಳನ್ನು ಒಂದೇ ಅಮೃತ ಪಾತ್ರೆಯಲ್ಲಿ ಕೂಡಿಟ್ಟು ಹಂಚಬಲ್ಲ ಸಾಹಿತ್ಯವೇ ಭಾವಗೀತೆಗಳು. ಉದಯೋನ್ಮುಖ ಯುವ ಕವಯತ್ರಿ  ಶ್ರೀಮತಿ ವೇದಾವತಿಯವರು ತಮ್ಮ ನವಿರಾದ ಭಾವಗಳನ್ನು 'ಭಾವ ಬಿಂದು' ಕವನ ಸಂಕಲನದ 30 ಕವನಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಕವನಗಳ ಸಂಖ್ಯೆ ಸೀಮಿತವಾದರೂ ಅವರ ಆಯ್ಕೆಯ ವಿಷಯಗಳು ವೈವಿಧ್ಯಮಯವಾಗಿವೆ.  ಕವನಗಳಲ್ಲಿ ಕೆಲವು ಸಾಧಕರ ಕುರಿತಾದ ವ್ಯಕ್ತಿ ಚಿತ್ರಗಳು ಸೇರಿವೆ. ಹಂಪಿ, ಮಕ್ಕಳ ದಿನಾಚರಣೆ,  ಮತದಾನದಂತಹ ಸರಳ ವಿಷಯಗಳ ಕುರಿತ ಕವನಗಳು ರಾರಾಜಿಸುತ್ತವೆ.  ಪ್ರೇಮ ಕಾವ್ಯ, ಮುತ್ತಿನ ಮಳೆ, ಒಲವಧಾರೆ ನವಿರಾದ ಭಾವಗಳಿಗೆ ಬಣ್ಣ ಹಚ್ಚಿದ ಭಾವಪೂರ್ಣ ವರ್ಣ ಚಿತ್ರಗಳು. 'ಮನಮೋಹಕ' ಎಂಬ ಶೀರ್ಷಿಕೆಯ ಕವನದ ಈ ಸಾಲುಗಳ ಭಾವ ತೀವ್ರತೆಯನ್ನು ಗಮನಿಸಿ

ಮನದೊಳಗೆ ಹರಿದಿದೆ ನಿನ್ನೊಲವ ಗುಪ್ತ ಗಾಮಿನಿ
ಅತಿಯಾಗದೆ ಮಿತಿಮೀರದೆ ಆಗು ಸಂಜೀವಿನಿ
ಭಾವಗಳ ಹರಿ ಬಿಡದಿರು ಮನವೇ ಎಂದೂ ನೀ
ಮರೆತರೂ ಬಿಡದೆ ಕಾಡುವೆ ಅನುಕ್ಷಣವೂ ನೀ ಇಲ್ಲಿ ಮನಸ್ಸಿನ ಭಾವಗಳ ಸುಪ್ತ ಹರಿವು ಚೆನ್ನಾಗಿ ಮೂಡಿಬಂದಿದೆ. ಕನ್ನಡ ನಾಡನ್ನು ವಿಜೃಂಭಿಸಲು ಅವರ ಕವನ ಇಂತಿದೆ.


ಉದಯೋನ್ಮುಖ ಯುವ ಕವಯತ್ರಿ  ಶ್ರೀಮತಿ ವೇದಾವತಿಯವರ 'ಭಾವ ಬಿಂದು'
ಸಹ್ಯಾದ್ರಿ ತಪ್ಪಲಿನ ಹಸಿರಿನೂರು
ಕಾವೇರಿ ನದಿಯ ತವರೂರು
ಕುವೆಂಪು  ರಾಘವಾಂಕರ ಊರು
ನೀಡಿದೆ ನಮ್ಮೆಲ್ಲರಿಗೂ ಸೂರು ಎಂದು ಬರೆಯುತ್ತಾ ಕರುನಾಡಿನ ಗರಿಮೆಯನ್ನು ವ್ಯಕ್ತಪಡಿಸಿದ್ದಾರೆ. ಒಂದು ಹೂದೋಟದ ವರ್ಣ ರಂಜಿತ ವರ್ಣ ವೈವಿಧ್ಯದಂತೆ ಚಿಕ್ಕ ಚೊಕ್ಕ  ಕವನಗಳು ಮನ ತಣಿಸುತ್ತವೆ, ಮುದ ನೀಡುತ್ತವೆ. ಕವಯಿತ್ರಿ ವೇದಾವತಿಯವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು; ಸದ್ಯ ಮುಂಬೈಯಲ್ಲಿ ನೆಲೆಸಿರುವರು. ಗುರುಕುಲ ಪ್ರತಿಷ್ಠಾನ ಸಾಹಿತ್ಯ ಸಂಸ್ಥೆಯ ಅಂತರ ರಾಜ್ಯ ಘಟಕದ ಅಧ್ಯಕ್ಷರಾಗಿ ಕನ್ನಡದ ಕೈಂಕರ್ಯದಲ್ಲಿ ತೊಡಗಿದ್ದಾರೆ. ಅವರು ಹೊರನಾಡಿನ ಸಾಹಿತ್ಯ ಸಂಸ್ಕೃತಿಯ ಪರಿಚಾರಿಕೆಯಾಗಿ 'ಗುರುಕುಲ ಅನರ್ಘ್ಯ ರತ್ನ' ಹಾಗೂ 'ಗುರುಕುಲ ಕಲಾ ಕೀರ್ತಿ' ಪ್ರಶಸ್ತಿಗೆ ಭಾಜನರಾಗಿರುವರು. ಈ 'ಭಾವ ಬಿಂದು' ಕೃತಿಯ ಮೂಲಕ  ಸಾಹಿತ್ಯ ವಲಯದಲ್ಲಿ ಇನ್ನೂ ಹೆಚ್ಚಿನ ಎತ್ತರಕ್ಕೆ ಏರಲಿ ಎಂಬ ಶುಭ ಹಾರೈಕೆಗಳು.



ಉದಯೋನ್ಮುಖ ಯುವ ಕವಯತ್ರಿ  ಶ್ರೀಮತಿ ವೇದಾವತಿಯವರ 'ಭಾವ ಬಿಂದು'
ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು
ಉದಯೋನ್ಮುಖ ಯುವ ಕವಯತ್ರಿ  ಶ್ರೀಮತಿ ವೇದಾವತಿಯವರ 'ಭಾವ ಬಿಂದು'
ಉದಯೋನ್ಮುಖ ಯುವ ಕವಯತ್ರಿ  ಶ್ರೀಮತಿ ವೇದಾವತಿಯವರ 'ಭಾವ ಬಿಂದು'

Comments (0)




Be the first to comment using the form below.