ಎಲ್ಲ ಸಹೃದಯಿ ಬಂಧುಗಳಿಗೆ ನನ್ನ ಆತ್ಮೀಯ ನಮಸ್ಕಾರಗಳು
ಕಾವ್ಯ ರಸ ಋಷಿಗಳು ಹುಟ್ಟಿ ಬಂದ ಈ ಪುಣ್ಯ ನೆಲದಲ್ಲಿ ಈ ದಿನದ ಕವಿಗೋಷ್ಠಿಯ ಅಧ್ಯಕ್ಷ ಸ್ಥಾನವೆಂಬ ಒಂದು ಹಿರಿಯ ಪಟ್ಟಕ್ಕಾಗಿ.. ತುಂಬ ಸಂತೋಷ ಆಗುತ್ತಿದೆ ಸಾಹಿತ್ಯ ಸೇವೆಯನ್ನೇ ಉಸಿರಾಡುತ್ತಿರುವ ಶ್ರೀಯುತ ಪ್ರದೀಪ್ ಕುಮಾರರ ಪ್ರೀತಿ ಗೌರವವೇ ಇದಕ್ಕೆ ಮುಖ್ಯ ಕಾರಣ ಮೊದಲನೆಯದಾಗಿ ನನ್ನದೊಂದು ನಮನವನ್ನು ಅವರಿಗೆ ತಿಳಿಸಲು ಉತ್ಸುಕಳಾಗಿದ್ದೇನೆ. ಹಸಿರುಟ್ಟ ಮಲೆನಾಡ ಸುಂದರ ಪರಿಸರದ ತೊಟ್ಟಲೊಳು ಮಲಗಿ ಹಕ್ಕಿಗಳ ಚಿಲಿಪಿಲಿ ಗಾನದ ಜೋಗುಳವನ್ನೇ ಆಲಿಸುತ್ತಾ ಇಲ್ಲಿಯ ನೀರನ್ನು ಕುಡಿದು ಬೆಳೆದು.. ರಾಷ್ಟ್ರ ಪ್ರಶಸ್ತಿಗಳೊಂದಿಗೆ ಇನ್ನೂ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡ ಮೇರು ಕನ್ನಡ ಸಾಹಿತಿ ಕುವೆಂಪು ಹಾಗೆಯೇ ಅವರ ಸುಪುತ್ರ ಹಿರಿಯ ಸಾಹಿತಿ ತೇಜಸ್ವಿಯವರ ನೆನಪುಗಳು ಇಲ್ಲಿ ಸದಾ ಹಸಿರು….ಎಲ್ಲಿ ನೋಡಿದರಲ್ಲಿ ಕಂಗೊಳಿಸಿ ಕೈ ಬೀಸಿ ಕರೆಯುತ್ತಿರುವ ಹರಿದ್ವರ್ಣ ಮರಗಳು.! ಬಿರಿದರಳಿದ ಬಗೆ ಬಗೆ ಬಣ್ಣದ ಅದೆಷ್ಟೋ ಹೂವುಗಳು! ಅಚ್ಚರಿತರಿಸುವ ಹಿಂದಿನ ಪಳಯುಳಿಕೆಗಳು! ಒಂದೆ ಎರಡೆ ನೋಡಿದಷ್ಟೂ ಕಣ್ಣಿಗೆ ಸಂಭ್ರಮ ಸಡಗರ ಅವೆಷ್ಟು ಪ್ರಭಾವಿತವಾಗಿದೆಯೆಂದರೆ ನಾಡಿನ ನಾಲ್ಕು ಮೂಲೆಗಳಿಂದಲೂ ಹಿರಿಯ ಕಿರಿಯ ಸಾಹಿತಿಗಳನ್ನೂ ಪ್ರವಾಸಿಗರನ್ನೂ ತನ್ನತ್ತ ಸೆಳೆಯುವ ವಿಶೇಷವಾದ ಶಕ್ತಿ ಈ ಮಣ್ಣಿಗಿದೆ ಎಂದರೂ ವಿಶೇಷವಾಗಲಾರದು..( ಒಂದು ಬೃಹತ್ತಾದ ಕುಟುಂಬದಂತೆ ಇಂದು ನಾವಿಲ್ಲಿ ಒಗ್ಗೂಡಿದುದೇ ಕಣ್ಮುಂದಿನ ಸಾಕ್ಷಿ ಈ ಅಗಾಧ ಸಭೆಯನ್ನು ನೋಡಿದಾಗ ಹೃದಯ ತುಂಬಿ ಬರುತ್ತಿದೆ. ) ನಾವೂ ಆಕರ್ಷಿತರಾಗಿ ಮಂಗಳೂರು ಕಡೆಯಿಂದ ನಿನ್ನೆಯೇ ಬಂದವರು.. ಇಲ್ಲೇ ಉಳಕ್ಕೊಂಡಿದ್ದೇವೆ ..ಬಂದವರಿಗೆಲ್ಲಾ ಒಂದು ಉತ್ತಮ ಆದರಾತಿಥ್ಯ ನೀಡುವ ಇಲ್ಲಿಯ ಕಾರ್ಯ ಕರ್ತರ ವಿಶಾಲ ಹೃದಯಕ್ಕೆ ಒಂದು ನಮನ ಸಲ್ಲಲೇಬೇಕು ಕುವೆಂಪುರವರ ಪ್ರಸಿದ್ಧ ನಾಡಗೀತೆ.ಕನ್ನಡ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ..ನಾಡಿನನಾಲ್ದೆಸೆಯಲ್ಲೂ ಅನವರತ ಮೊಳಗುತ್ತಿದ್ದು,ಮನೆಯಲ್ಲೂ ಶಾಲೆಯಲ್ಲೂ ವಿಜೃಂಭಿಸುತ್ತಿದ್ದು ಇದು ಕನ್ನಡತಾಯಿ ಭುವನೇಶ್ವರಿಯ ಮುಡಿಗೆ ಪ್ರೀತಿಯಿಂದ ಸಂದ ಅನನ್ಯ ಬಳುವಳಿ ನಾವೆಲ್ಲ ಕನ್ನಡಿಗರು ನಮ್ಮ ಮಾತೃ ಭಾಷೆ ಕನ್ನಡವೆಂದು ಹೇಳಲು ತುಂಬ ಅಭಿಮಾನ ಹೆಮ್ಮೆಯಾಗುತ್ತಿದೆಯಾದರೂ ಇಂದೀಗ ಅದು ಎಲ್ಲೋ ಒಂದುಕಡೆ ನಮ್ಮ ಮಣ್ಣಿನಲ್ಲಿಯೇ ಸೋಲುತ್ತಿದೆಯೋ ಎಂಬ ಒಂದು ಆತಂಕಕ್ಕಡೆಮಾಡುತ್ತಿದೆ..ಇಂದಿನ ಹೆತ್ತವರೂ ಮಕ್ಕಳೂ ಆಂಗ್ಲಭಾಷೆಯ ಮೋಹಕ್ಕೊಳಗಾಗಿ ಅದಕ್ಕೇ ಹೆಚ್ಚೆಚ್ಚು ಶರಣಾಗುವುದು ಕಾಣುತ್ತಿದ್ದರೆ ಇದು ಎಲ್ಲಿ ತನಕ ಬಂದು ಮುಟ್ಟುವುದೋ ಎಂಬ ಭೀತಿ ಜಾಸ್ತಿಯಾಗಿದೆ.
Comments (0)
Post Comment
Report Abuse
Be the first to comment using the form below.