(JavaScript required to view this email address)
Mangalore

News & Articles

ಮಂಗಳೂರಿನ ಕಥಾಬಿಂದು ಪ್ರಕಾಶನ ಸಾಹಿತ್ಯ ಸೇವೆಯಲ್ಲಿ ತೊಡಗಿರುವ ಸಂಸ್ಥೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅಕ್ಟೋಬರ್ 29 2023 ರಂದು ಮಂಗಳೂರಿನಲ್ಲಿ 50 ಪುಸ್ತಕಗಳನ್ನು ಒಂದೇ ದಿನ ಬಿಡುಗಡೆಗೊಳಿಸಿ ವಿಕ್ರಮ ಸಾಧಿಸಿದೆ. ಜನವರಿ 21, 2024ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 52 ಪುಸ್ತಕಗಳನ್ನು ಬಿಡುಗಡೆ ಮಾಡಿ ತನ್ನದೇ  ದಾಖಲೆಯನ್ನು ಮೀರಿಸಿದ್ದು ನಿಮಗೆಲ್ಲ ಪರಿಚಿತ.
ಸಾಹಿತ್ಯ ಸೇವೆಯನ್ನು ಮುಂದುವರಿಸುತ್ತಾ ಈ ವರ್ಷದ ಏಪ್ರಿಲ್ 20, 21,ಮತ್ತು 22 ರಂದು ಬಹುಭಾಷಾ ಸಾಹಿತ್ಯ ಸಮ್ಮೇಳನವನ್ನು ಕಥಾಬಿಂದು ಪ್ರಕಾಶನ ಆಯೋಜಿಸುತ್ತಿದೆ. ಮಂಗಳೂರಿನ ಹೊರವಲಯದಲ್ಲಿರುವ ಶ್ರೀ ಭಾರತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಡಿಪು ಶಾಲೆಯಲ್ಲಿ ಈ ಸಮ್ಮೇಳನವು ನಡೆಯಲಿದೆ. ಈ ಸಮ್ಮೇಳನದಲ್ಲಿ ಮೊದಲ ದಿನ ಕನ್ನಡ ಭಾಷೆಗೆ, ಎರಡನೇ ದಿನ ತುಳು ಭಾಷೆಗೆ, ಮತ್ತು ಮೂರನೇ ದಿನ ಬಹು ಭಾಷೆಗೆ ಮೀಸಲಾಗಿದೆ. ಪ್ರತಿದಿನ ಆಯಾ ಭಾಷೆಯ ಪುಸ್ತಕ ಬಿಡುಗಡೆ,ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕವಿಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಪುಸ್ತಕ ಪ್ರಕಟಣೆಗೆ ಅವಕಾಶವಿದೆ. ಪ್ರಕಟಣೆಗಾಗಿ ಬರಹಗಾರರಿಂದ ಕೃತಿಗಳ ಪಠ್ಯವನ್ನು ಆಹ್ವಾನಿಸಲಾಗಿದೆ. ಕೃತಿ ಪ್ರಕಾಶನದ ಬಗ್ಗೆ ಸಂಸ್ಥಾಪಕರಾದ ಪಿ ವಿ ಪ್ರದೀಪ್ ಕುಮಾರ್ ಮೊ 9341410153  ಅಥವಾ ಹಿರಿಯ ಸಾಹಿತಿಗಳಾದ ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು ಮೊ 7045353049 ಅವರನ್ನು ಸಂಪರ್ಕಿಸಬಹುದು.
ಕೃತಿಗಳ ತಂತ್ರಾಂಶ ರೂಪದ  ಪಠ್ಯವನ್ನು ಪ್ರಕಾಶಕರಿಗೆ ಸಲ್ಲಿಸಲು ಕೊನೆಯ ತಾರೀಕು ಮಾರ್ಚ್ 20, 2024.
ಮೂರು ದಿನ ಆಯಾ ಭಾಷೆಗಳ ಕವಿಗೋಷ್ಠಿಯನ್ನು ಕೂಡ ಆಯೋಜಿಸಲಾಗಿದೆ. ಭಾಗವಹಿಸಲು ಆಸಕ್ತ ಕವಿಗಳು ಈ ಬಗ್ಗೆ ತಮ್ಮ ಹೆಸರನ್ನು ಶ್ರೀಮತಿ ರೇಖಾ ಸುದೇಶ ರಾವ್ ಮೊ 9481978620ಅವರಿಗೆ ಕರೆ ಮಾಡಿ ನೋಂದಾಯಿಸಲು ವಿನಂತಿಸಲಾಗಿದೆ.
ಕಾರ್ಯಕ್ರಮದ ಪೂರ್ಣ ಮಾಹಿತಿಯನ್ನು ಏಪ್ರಿಲ್ 15 ರ ಒಳಗೆ ಎಲ್ಲರಿಗೂ ತಿಳಿಸಲಾಗುವುದು.
ಪುಸ್ತಕ ಪ್ರಕಟಣೆಯ ವಿಧಿ ವಿಧಾನಗಳು ಹೀಗಿವೆ
1. ಉದ್ದೇಶದ ಕೃತಿಯ ಕರಡು ತಿದ್ದಿದ ಪಠ್ಯವನ್ನು ಪ್ರಕಾಶಕರ ಇ-ಮೇಲ್ ಐಡಿ. [email protected] ಗೆ ಕಳಿಸಬೇಕು.
2. ಮೊಬೈಲಿನ ತಂತ್ರಾಂಶದಲ್ಲಿ ತಯಾರಿಸಿದ್ದರೆ ಕರಡು ತಿದ್ದಿದ ಪಠ್ಯವನ್ನು ಪ್ರಕಾಶಕರ ಮೊಬೈಲ್ 93414 10153 ಅಥವಾ ಸಂಪಾದಕರಾದ ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು ಅವರ ಮೊ ಸಂಖ್ಯೆ  7045353049ಗೆ ಕಳಿಸಬೇಕು.  
3. ಕೃತಿಗಾರರು ಕಳುಹಿಸಿದ ಪ್ರತಿಯ ಪುಟ ವಿನ್ಯಾಸ ಮಾಡಿ ಪುಟ ವಿನ್ಯಾಸದ ಅಂತಿಮ ಒಪ್ಪಿಗೆಗಾಗಿ ಕೃತಿಕಾರರಿಗೆ ಕಳುಹಿಸಲಾಗುವುದು. 
4. ಪುಸ್ತಕದ ವಿನ್ಯಾಸ ಈ ರೀತಿ ಇರುತ್ತದೆ

ಪ್ರಕಟಣೆ
ಪ್ರತಿಪುಟದಲ್ಲಿ ಎರಡು ಕಾಲಂಗಳಲ್ಲಿ ಪದ್ಯಗಳು ಇರುತ್ತವೆ. ಪ್ರತಿ ಕವನ 24 ಸಾಲುಗಳ ಮಿತಿಯಲ್ಲಿದ್ದರೆ ವಿನ್ಯಾಸ ಚೆನ್ನಾಗಿ ಮೂಡಬಹುದು.
ಪ್ರಕಾಶಕರು ಪುಟ ವಿನ್ಯಾಸ ಮಾಡಿದ ಸ್ಪುಟಗೊಳಿಸಿದ ಅಂತಿಮ ಪ್ರತಿಯನ್ನು ಅಚ್ಚು ಮಾಡುವ ಅನುಮತಿಗಾಗಿ ಕೃತಿಕಾರರಿಗೆ ಕಳುಹಿಸಿ ಕೊಡುವರು. ಏನಾದರೂ ಬದಲಾವಣೆ ಇದ್ದರೆ ಎರಡು ದಿನಗಳ ಒಳಗೆ ಪ್ರಕಾಶಕರಿಗೆ ಲಿಖಿತ ರೂಪದಲ್ಲಿ ತಿಳಿಸಬೇಕು
ಪ್ರತಿ ಪುಸ್ತಕವು 64 ಪುಟಗಳನ್ನು ಹೊಂದಿರುತ್ತದೆ. ಪ್ರತಿ ಪುಸ್ತಕದಲ್ಲಿ ಸುಮಾರು ನೂರು ಕವನಗಳು ಅಳವಡುತ್ತವೆ. 
ಪ್ರೊಫೆಷನಲ್ ಬೈಂಡ್ ಮಾಡಲಾಗುತ್ತದೆ
ಡಮ್ಮಿ1/ 8 ಆಕಾರದಲ್ಲಿದ್ದು 70 ಜಿಎಸ್ಎಂ ಕಾಗದವನ್ನು ಬಳಸಲಾಗುವುದು.
5. ಸಾಮಾನ್ಯೀಕರಿಸಿದ (standardized)  ಮೇಲಿನ ಅಂಶಗಳನ್ನು ಹೊಂದಿದ ನೂರು ಪ್ರತಿಗಳಿಗೆ ಒಟ್ಟು ಬರುವ ಖರ್ಚು ರೂ10000/.
6. ಕರಡು ತಿದ್ದದ ಪಠ್ಯಗಳಾದರೆ ಅದರ ಖರ್ಚು ರೂ 750/ ಪ್ರತ್ಯೇಕ. ಹಾಗೆಯೇ ಪುಟಗಳು ಜಾಸ್ತಿ ಇದ್ದರೆ ಅಥವಾ ಮಾಡಬೇಕಾದ ಪ್ರತಿಗಳ ಸಂಖ್ಯೆ ಹೆಚ್ಚಿದ್ದರೆ ತಗಲುವ ವೆಚ್ಚ ವ್ಯತ್ಯಯವಾಗುವುದು. ಪರಸ್ಪರ ಮಾತುಕತೆಯ ಸಂದರ್ಭದಲ್ಲಿ ಮೊತ್ತವನ್ನು ನಿರ್ಧರಿಸಲಾಗುವುದು.
7. ಈ ಮೇಲಿನ ವಿಧಿ ವಿಧಾನಗಳು ಪೂರ್ಣಗೊಂಡ ಬಳಿಕ ನಿಗದಿತ ಮೊತ್ತವನ್ನು ಪ್ರಕಾಶಕರ ಬ್ಯಾಂಕ್ ಖಾತೆಗೆ ಕೃತಿಕಾರರು ಹಣ ಸಂದಾಯ ಮಾಡಬೇಕು. ಈ ಮಟ್ಟದಲ್ಲಿ ಇತರ ಸೇವೆಗಳಾದ ಹೊರ ಕವಚದ ವಿನ್ಯಾಸ,ಪ್ರೊಫೆಷನಲ್ ಬೈಂಡಿಂಗ್, ಪುಸ್ತಕಗಳ ಸಾಮೂಹಿಕ ಬಿಡುಗಡೆಯ ಖರ್ಚು ಸೇರಿರುತ್ತದೆ.
8. ಕೃತಿಕಾರರು ಪುಸ್ತಕದ ಮುನ್ನುಡಿ, ಆಶಯ ನುಡಿ, ಅರ್ಪಣೆಯ ವಿವರಗಳು ಮತ್ತು ಪರಿವಿಡಿ ತಯಾರಿಸಿ ಕಳಿಸಬೇಕು.
ಬೆನ್ನುಡಿಯೊಂದಿಗೆ ಅಚ್ಚು ಹಾಕಲು ಸೂಕ್ತ ಪಾಸ್ ಪೋರ್ಟ್ ಸೈಜ್ ನ ಚಿತ್ರವನ್ನು ಕಳಿಸಬೇಕು. ಕಾನೂನಾತ್ಮಕ ಪುಟದಲ್ಲಿ ಸೇರಿಸಲು ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಪಿನ್ ಕೋಡ್, ಇಮೇಲ್ ಐಡಿ ಇವುಗಳನ್ನು ಒದಗಿಸಬೇಕು.
9.ಒಂದು ಒಡಂಬಡಿಕೆಯ ರೂಪದ ಪತ್ರವನ್ನು ವಾಟ್ಸಪ್ ಮೂಲಕ ಕಳಿಸಿ ಸಹಿ ಮಾಡಿದ ಒಡಂಬಡಿಕೆ ಪತ್ರವನ್ನು ಪ್ರಕಾಶಕರ ವಿಳಾಸಕ್ಕೆ ಅಂಚೆ ಮುಖಾಂತರ ಕಳಿಸಬೇಕು.
ಆ ಪತ್ರದ ನಮೂನೆ ಈ ತರ ಇರಬೇಕು.



ಪ್ರಕಟಣೆ
ಕೃತಿಕಾರರ ಪೂರ್ಣ ವಿಳಾಸ
ಮಾನ್ಯರೇ,
ವಿಷಯ:  ಪುಸ್ತಕದ ಪ್ರಕಟಣೆ ಮತ್ತು ಬಿಡುಗಡೆ
ಪರಸ್ಪರ ಮಾತುಕತೆಯ ಮೂಲಕ ಉಭಯತ್ರರು ಪುಸ್ತಕ ಪ್ರಕಟಣೆಯ ಒಪ್ಪಂದಕ್ಕೆ ಬಂದಿರುತ್ತೇವೆ. ಅದರಂತೆ ಮೇಲೆ ಹೇಳಿದ ಅಗತ್ಯ ದಾಖಲೆಗಳನ್ನು ಮತ್ತು ಪಠ್ಯಗಳನ್ನು ನಾನು ಒದಗಿಸಲು ಬದ್ಧನಾಗಿದ್ದೇನೆ. ಕೃತಿ ಚೌರ್ಯದ ಬಗ್ಗೆ ಯಾವುದೇ ದೂರುಗಳು ಬಂದರೂ ಅದಕ್ಕೆ ಕೃತಿಕಾರನಾದ ನಾನೇ ಬಾಧ್ಯನಾಗಿದ್ದುತ್ತೇನೆ. ಈ ಒಡಂಬಡಿಕೆಯಂತೆ  ನಾನು ಕೊಟ್ಟ ಪಠ್ಯವನ್ನು ಪುಸ್ತಕ ರೂಪದಲ್ಲಿ ಅಚ್ಚು ಮಾಡಬೇಕೆಂದು ವಿನಂತಿಸುತ್ತೇನೆ.
ನಿಮ್ಮ ವಿಶ್ವಾಸಿ
ಸಹಿ
(ವಿ.ಸೂ: ಈ ಪತ್ರವನ್ನು ವಾಟ್ಸಪ್ ಮುಖಾಂತರ ಕಳಿಸಿ, ಮುದ್ರಿತ ಒಡಂಬಡಿಕೆಗೆ ಸಹಿ ಮಾಡಿ ಪ್ರಕಾಶಕರ ವಿಳಾಸಕ್ಕೆ ಆದಷ್ಟು ಬೇಗ ಆದರೆ  ಮಾರ್ಚ್ ಹತ್ತರ ಮೊದಲು ಕಳಿಸಬೇಕು)


ಪ್ರಕಟಣೆ
ಈ ಅರ್ಜಿ ಭರ್ತಿ ಮಾಡಿ ಅಂಚೆ ಮೂಲಕ ಕಳಿಸಿಕೊಡಿ

Comments (0)




Be the first to comment using the form below.