ಕಥಾಬಿಂದು ಪ್ರಕಾಶನ 17ನೇ ವರ್ಷದ ಸಂಭ್ರಮೋತ್ಸವವನ್ನು ಡಿಸೆಂಬರ್ 15ರಂದು ಬೆಳಗ್ಗೆ 9:30 ರಿಂದ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿದೆ. ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಚಿಸುವವರು 12 ಸಾಲುಗಳ ಎರಡು ಕವನಗಳನ್ನು ವಾಟ್ಸಪ್ ಮುಖಾಂತರ 7045353049
ನಂಬರಿಗೆ ಕಳಿಸಿಕೊಡಬೇಕು. ಒಂದು ಕವನ ಭಗವದ್ಗೀತೆಯ ಕುರಿತಾಗಿರಬೇಕು, ಇನ್ನೊಂದು ಕವನ ಭಗವದ್ಗೀತೆಯ ಯಾವುದಾದರೂ ಪಾತ್ರದ ಬಗ್ಗೆ ಇರಬೇಕು.
ಕವನಗಳನ್ನು ಕಳಿಸಲು ಕೊನೆಯ ತಾರೀಕು 30 ನವೆಂಬರ್ 2024. ಕವನದ ಕೊನೆಗೆ ಲೇಖಕರ ಹೆಸರು ವಿಳಾಸ ಮತ್ತು ವಾಟ್ಸಪ್ ನಂಬರ್ ಅಗತ್ಯ ನಮೂದಿಸಬೇಕು.
ಡಿಸೆಂಬರ್ 10ರ ಮೊದಲು ವಾಚನಕ್ಕೆ ಅರ್ಹವಾದ ಕವಿತೆಗಳ ಪಟ್ಟಿಯನ್ನು ಬಿತ್ತರಿಸಲಾಗುವುದು.
ಅತ್ಯುತ್ತಮ ಕವಿತೆಗೆ 1000 ರೂ ನಗದು ವಿಶೇಷ ಪುರಸ್ಕಾರವನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ
7045353049
ಆಯೋಜಕರು
ಪಿವಿ ಪ್ರದೀಪ್ ಕುಮಾರ್
ಕಥಾ ಬಿಂದು ಪ್ರಕಾಶನ, ಮಂಗಳೂರು
Comments (0)
Post Comment
Report Abuse
Be the first to comment using the form below.