ಶ್ರೀಮತಿ ಅನುಪಮಾ ಸುಲಾಖೆಯವರಿಗೆ "ಕನ್ನಡ ರತ್ನ" ರಾಜ್ಯ ಪ್ರಶಸ್ತಿ
ಹೊಸಪೇಟೆ ನವೆಂಬರ್ 23
ಹೊಸಪೇಟೆಯಲ್ಲಿ ಪ್ರಕಟವಾಗುತ್ತಿರುವ "ದ ಜರ್ನಿ ಆಫ್ ಸೊಸೈಟಿ" ಕನ್ನಡ ವಾರಪತ್ರಿಕೆಯು ಮೊದಲ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವನ್ನು 19.12.2023ರಂದು ಆಯೋಜಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಶ್ರೀಮತಿ ಅನುಪಮಾ ಸುಲಾಖೆ ಅವರು ಕನ್ನಡ ರತ್ನ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶ್ರೀಮತಿ ಅನುಪಮಾ ಸುಲಾಖೆ ಯವರು ಸಣ್ಣ ಉದ್ದಿಮೆ ನಡೆಸುವುದರ ಜೊತೆಗೆ ಕಥೆ ಕವನಗಳನ್ನು ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಉತ್ತಮ ಗಾಯಕಿಯಾದ ಇವರು ಇತ್ತೀಚಿಗೆ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದು ಅವರ ಹೆಗ್ಗಳಿಕೆ.
Comments (0)
Post Comment
Report Abuse
Be the first to comment using the form below.