(JavaScript required to view this email address)
Mangalore

News & Articles

ಸರ್ವ ಅರಸ ಶೆಟ್ಟಿ

ಕಾಯಕವೇ ಕೈಲಾಸವೆನ್ನುವ ರೈತ
ಕಷ್ಟಪಟ್ಟು ಶ್ರಮಿಸಿ ಸಾಧನೆಗೈಯುವ ಸತತ
ದೇಶದ ಬೆನ್ನೆಲುಬಾಗಿ ನಿರಂತರ ದುಡಿಯುತ
ಜಗದ ಹಸಿವು ನೀಗಿಸುವ ಧೀಮಂತ

ಭೂಮಿ ತಾಯಿಯ ನೆಚ್ಚಿನ ಮಗನು
ಸಹನೆ ತಾಳ್ಮೆ ಶಕ್ತಿ ಧೈರ್ಯದ ಯೋಧನು
ನಷ್ಟ ದುಃಖವ ಸಹಿಸಿ ಬಾಳುವವನು
ಮಣ್ಣಿನೊಂದಿಗೆ ಹೋರಾಡಿ ಮಣ್ಣಿನ ಮಗನಾಗುವನು

ಹಸಿರೇ ಉಸಿರು ಎಂದು ಬೋಧಿಸುವನು
ಹಸಿದು ಬಂದವರಿಗೆ ದೇವರಾಗುವನು
ಇಳೆಯ ಋಣವನ್ನು ತೀರಿಸಿ ಅಮರನಾಗುವನು
ಬಾಳಯಾನದಲ್ಲಿ ನೆಮ್ಮದಿಯ ಸಾರ್ಥಕತೆ ಕಾಣುವನು

ವೃತ್ತಿಯಲ್ಲಿ ಶ್ರೇಷ್ಠವು ಅನ್ನದಾತನದು
ಚಳಿಗಾಳಿ ಲೆಕ್ಕಿಸದೇ ಸೇವೆಗೈಯುವ ಪರಿಯದು
ಎಲೆಮರೆಯ ಕಾಯಿಯಂತ ನಿಷ್ಕಲ್ಮಶ ಮನಗಳು
ನಿಮಗಿದೋ ಗೌರವ ತುಂಬಿದ ನಮನಗಳು
ಅನ್ನದಾತ
ಕವಿ ಪರಿಚಯ
ಸರ್ವಮಂಗಳ ನಿರಂಜನ್ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಶಿರ್ವದವರು. ಅವರ ಓದು ಬಿ.ಕಾಂ. ವೃತ್ತಿಯಲ್ಲಿ ಗೃಹಿಣಿ, ಪ್ರವೃತ್ತಿಯಲ್ಲಿ ಬಹುಮುಖ ಪ್ರತಿಭೆ. ಪತಿ ಕುತ್ಯಾರು ಅಬ್ಬೆಟ್ಟು ಗುತ್ತು ನಿರಂಜನ್ ಶೆಟ್ಟಿ, ಹೋಟೆಲ್ ಉದ್ಯಮಿ. 2022 ರಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ರಾಜ್ಯ ಮಟ್ಟದ ಕವಿ ಸಮ್ಮೇಳನದಲ್ಲಿ ನವ ಪರ್ವ ಸಾಹಿತ್ಯ ರತ್ನ ಪ್ರಶಸ್ತಿ ಬಂದಿದೆ. ಮಾರ್ಚ್ 5,2023 ರಂದು ಧಾರವಾಡದಲ್ಲಿ ಖಿದ್ಮಾ ಫೌಂಡೇಶನ್ ಕರ್ನಾಟಕ ಸಾಹಿತ್ಯ ಬಳಗದವರಿಂದ ಸಾಹಿತ್ಯ ಸೇವೆಗಾಗಿ ರಾಜ್ಯ ಮಟ್ಟದ ಕವಿಕಾವ್ಯ ಸಂಭ್ರಮದಲ್ಲಿ 'ಖಿದ್ಮಾ ಕಾವ್ಯ ಪ್ರಶಸ್ತಿ' ದೊರೆತ್ತಿದೆ. ಅವರ ಬರಹಗಳು ಮತ್ತು ಕವನಗಳು ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.
ಅನ್ನದಾತ
ಸೋಮವಾರ  ದಕ್ಷಿಣ ಕನ್ನಡದಲ್ಲಿ ಧಾರಾಕಾರ ಮಳೆ ಇಬ್ಬರು ಮೃತ ಪಟ್ಟಿದ್ದಾರೆ ಮಂಗಳೂರಿನ ಪಂಪ್ ವೆಲ್ ಪ್ಲೇ ಓವರ್
ಅನ್ನದಾತ
ಅನ್ನದಾತ
ಅನ್ನದಾತ
ಅನ್ನದಾತ
ಅನ್ನದಾತ

Comments (0)




Be the first to comment using the form below.