ಬಹುಮುಖ ಪ್ರತಿಭೆಯ ಶ್ರೀ ಅನಂತ ಕೃಷ್ಣ ನಾಯಕ್
ಶ್ರೀ ಅನಂತ ಕೃಷ್ಣ ನಾಯಕ್ ಮೂಲತಃ ಉಡುಪಿ ಜಿಲ್ಲೆಯ ಕೋಟದವರು. ಈಗ ಕೃಷಿಕ ಮತ್ತು ಸಮಾಜ ಸೇವಕರಾಗಿ ಭದ್ರಾವತಿಯ ವೀರಾಪುರದಲ್ಲಿ ನಡೆಸಿದ್ದಾರೆ. ಅವರ ತಂದೆ ಹರಿಯಪ್ಪ ನಾಯಕ್ ಮತ್ತು ತಾಯಿ ಚಂದ್ರಾವತಿ ಬಾಯಿ. ಅವರ ಓದು ಆಟೋ ಮೊಬೈಲ್ ಡಿಪ್ಲೋಮಾ. ಅವರು ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದು ಕಲ್ಕತ್ತದ ಹಿಂದುಸ್ತಾನ್ ಮೋಟರ್ಸ್ ನಲ್ಲಿ. ಮೂರು ವರ್ಷ ಅಲ್ಲಿ ಸೇವೆ ಮಾಡಿದ್ದಾರೆ. ಆ ಬಳಿಕ ವೀರಾಪುರದ ಅಕ್ಕಿ ಗಿರಣಿಯಲ್ಲಿ ಪಾಲುದಾರರಾಗಿ ಉದ್ಯಮಕ್ಕೆ ಮುಖ ಮಾಡಿದರು. ಸುಮಾರು ಹತ್ತು ವರ್ಷ ಈ ಉದ್ಯಮದಲ್ಲಿ ಅನುಭವ ಪಡೆದರು. ಅವರು ತಮ್ಮ ಉದ್ಯಮಗಳ ಜೊತೆಗೆ ಕಳೆದ ಶತಮಾನದ 70ರ ದಶಕದಿಂದ ಇದುವರೆಗೆ ಕೃಷಿಯನ್ನು ಮುಖ್ಯ ಕಸುಬಾಗಿ ನಡೆಸಿಕೊಂಡು ಬಂದಿದ್ದಾರೆ. 1984-95ರ ಅವಧಿಯಲ್ಲಿ ಭದ್ರಾವತಿಯಲ್ಲಿ ಕಾಂಚನ ಹೋಟೆಲ್ ನ ಮಾಲೀಕರಾಗಿ ಹೋಟೆಲ್ ಉದ್ಯಮದಲ್ಲಿ ನುರಿತಿದ್ದಾರೆ. 1986 88ರ ಅವಧಿಯಲ್ಲಿ ಹೈದರಾಬಾದಿನಲ್ಲಿ ಶಾನ್ ಭಾಗ್ ಕೆಫೆಯ ಪಾಲುದಾರರಾಗಿದ್ದರು. ಬೆಂಗಳೂರಿನಲ್ಲಿ ಕಾಮಾಕ್ಷಿ ಫುಡ್ ಮತ್ತು ಕೆಟರಿಂಗ್ ಉದ್ಯಮ ಪ್ರಾರಂಭಿಸಿದರು. ಈಗ ಅವರ ಹಿರಿಯ ಮಗ ಭರತ್ ಈ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅವರ ಇನ್ನೊಬ್ಬ ಮಗ ರೋಹಿತ್ ಸಾಫ್ಟ್ವೇರ್ ಉದ್ಯಮದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.
Comments (0)
Post Comment
Report Abuse
Be the first to comment using the form below.