ಬಳಕೆಗೆ ಬರುವ ಮೊದಲು ಬಾಯಿಂದ ಬಾಯಿಗೆ ಹರಿದು ಬರುತ್ತಿದ್ದವು.
ಯಾವುದೇ ಒಂದು ಸಾಹಿತ್ಯ ಪ್ರಕಾರದಲ್ಲಿ ಶ್ರೇಷ್ಠತೆ ಬರಬೇಕಾದರೆ ಬರೆಯುವ ಮೊದಲು ಸಾವಿರ ಕೃತಿಗಳನ್ನು ಓದಬೇಕು, ನೂರು ಕೃತಿಗಳನ್ನು ಮನನ ಮಾಡಬೇಕು, ಹತ್ತು ಕೃತಿಗಳನ್ನು ಬರೆಯಬೇಕು, ಒಂದನ್ನು ಪ್ರಕಟಿಸಬೇಕು. ಹಾಗಾದರೆ ಮಾತ್ರ ಕೃತಿ ಕಲಾಕೃತಿ ಆಗಲು ಸಾಧ್ಯ. ಸರಿಯಾದ ಬೀಜಗಳನ್ನು ಸರಿಯಾದ ನೆಲದಲ್ಲಿ ಊರಿ, ಸರಿಯಾದ ನೀರು, ಗೊಬ್ಬರ ನೀಡಿದರೆ ಹೇಗೆ ಹುಲುಸಾದ ಬೆಳೆ ಸಾಧ್ಯವೋ ಹಾಗೆ ಪ್ರಾಜ್ಞ, ಮನಸ್ಸಿನ, ಸಾಹಿತ್ಯ ಕೃಷಿಯಲ್ಲಿ ಪಳಗಿದ ಕವಿ ಅಥವಾ ಕವಯಿತ್ರಿ ಭಾಷಾಜ್ಞಾನವೆಂಬ ಗೊಬ್ಬರದಿಂದ ಪೋಷಿಸಿದಾಗ ಮಾತ್ರ ಒಂದು ಸುಂದರ ಕವನ ರಚನೆಯಾಗಬಲ್ಲದು. ಅಂಥ ಒಂದು ಸಾಧ್ಯತೆ ಕು. ದೀಪಿಕಾ ರವರ ಕವನಗಳನ್ನು ಓದಿದಾಗ ಸ್ಪಷ್ಟಗೊಳ್ಳುತ್ತದೆ. ಅವರ ಬರವಣಿಗೆ ಶೈಲಿ ಚೆನ್ನಾಗಿದೆ, ಕುತೂಹಲಕಾರಿಯಾಗಿದೆ, ಓದಿಸಿಕೊಂಡು ಹೋಗುವ ಗುಣವಿಶೇಷತೆಗಳನ್ನು ಹೊಂದಿವೆ. ದೀಪಿಕಾ ರವರು ಹವ್ಯಾಸಕ್ಕೆಂದು ವಾಟ್ಸಪ್ಪ್, ಫೇಸ್ಬುಕ್ ಗಳಲ್ಲಿ ಬರೆಯುತ್ತಿದ್ದ ಇವರು ನಂತರ ವಿವಿಧ ಸಾಹಿತ್ಯಕ ಬಳಗಗಳಲ್ಲಿ ಸೇರಿಕೊಂಡು ಅಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿ, ಅನೇಕ ವೇದಿಕೆಗಳಲ್ಲಿ ಕವನ ವಾಚನ ಮಾಡಿ ಗುರುತಿಸಿಕೊಂಡಿರುತ್ತಾರೆ. ಉತ್ತಮ ಕವನಗಳನ್ನು ರಚಿಸಿ ಪ್ರಶಂಸೆಗಳನ್ನು ಪಡೆದಿರುತ್ತಾರೆ. ಇವರ "ಅಕಲ್ಪಿತ ಹಾತೆ" ಕವನ ಸಂಕಲನದಲ್ಲಿ ಪ್ರೀತಿ, ತಂಪುಗಳಿಂದ ಕೂಡಿದ ಪಾನೀಯ, ಪ್ರೇಮ, ತಾರೆಗಳ ತೋಟ, ಒಲವ ನೆನಪು, ಖುಷಿ, ನೋವು, ದುಃಖ, ಅಪ್ಪ ಅಮ್ಮನ ಒಲವು ಇತ್ಯಾದಿ ಕವನಗಳು ಓದುಗರ ಮನ ಸೆಳೆಯುತ್ತವೆ. ಅಂತೆಯೇ ಯಾರು ಇಲ್ಲದೆ ಅನಾಥೆಯಾದೆ ಅನ್ನೋ ಕವನ ನೋವು ತುಂಬಿದ ಭಾವಗಳಿಂದ ಕೂಡಿ ಒಮ್ಮೆ ದುಃಖ ಹೊಮ್ಮಳಿಸದೇ ಬಿಡುವುದಿಲ್ಲ. ಇವರ ಎಲ್ಲಾ ಕವನಗಳು ಒಂದೊಂದು ರೀತಿಯಲ್ಲಿ ನೊಂದು, ಬೆಂದು, ಬೇಸತ್ತು ಬದುಕಿನಲ್ಲಿ ಪ್ರೀತಿ ತುಂಬಿ ಪ್ರೇಮ ಅರಳಿ ನಗುವ ನೂರಾರು ಸಂದೇಶಗಳನ್ನು ಒಳಗೊಂಡಿದೆ. ಸಾಹಿತ್ಯ ಲೋಕಕ್ಕೆ ಈ ಕವನ ಸಂಕಲನ ಮೂಲಕ ಪಾದಾರ್ಪಣೆ ಮಾಡುತ್ತಿರುವ ಕು. ದೀಪಿಕಾ ರವರು ಮುಂದೆ ಉತ್ತಮೋತ್ತಮ ಕೃತಿಗಳನ್ನು ರಚಿಸುವಲ್ಲಿ ಯಶಶ್ವಿಯಾಗಲಿ ಎಂದು ಹಾರೈಸುವೆ.
Comments (0)
Post Comment
Report Abuse
Be the first to comment using the form below.