ಈ ಸಂದರ್ಭದಲ್ಲಿ ಡಾ ಕೆ ವಿ ದೇವಪ್ಪ, ಡಾ ಜೆ ರವೀಂದ್ರ ಪಶು ವೈದ್ಯರು, ಜಗದೀಶ್, ಮತ್ತು ಜಗದೀಶ್ ದೇವಾಡಿಗ ಉಪ್ಪುಂದ ಅವರಿಗೆ ಸಮಾಜ ಸೇವ ರತ್ನ ರಾಜ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಕಥಾಬಿಂದು ಪ್ರಕಾಶನದಿಂದ ಪ್ರಕಟಗೊಂಡ ಸುಮಾರು 25 ಕೃತಿಗಳ ಕೃತಿಕಾರರಿಗೆ ಗೌರವ ಸನ್ಮಾನ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು ಚಲನಚಿತ್ರ ಸಂಗೀತ ನಿರ್ದೇಶಕರು ಕಲಾರತ್ನ ಸೆಕ್ಸೋಫೋನ್ ವಾದಕ ಜಯರಾಮ್ ಅವರ ವಾದನ ಜನ ಮೆಚ್ಚುಗೆ ಪಡೆಯಿತು. ಸಾಹಿತ್ಯೋತ್ಸವದ ಪ್ರಮುಖ ಅಂಗವಾದ ಐವತ್ತು ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಡಾ ಕೊಳ್ಚಪ್ಪೆ ಗೋವಿಂದ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾದ ಹಿರಿಯ ಕವಿ ಮತ್ತು ಸಂಶೋಧಕ ರಾಧಾಕೃಷ್ಣ ಕೆ ಉಳಿಯತಡ್ಕ, ಧನಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲೀಕರಾದ ಶ್ರೀ ಶ್ರೀಪತಿ ಭಟ್ ಪುಸ್ತಕಗಳ ಲೋಕಾರ್ಪಣೆ ಮಾಡಿದರು. ಸನ್ಮಾನಿತರಾದ ಕೃತಿಕಾರರು ಮನದಾಳದ ನಾಲ್ಕು ಮಾತುಗಳ ಮೂಲಕ ಜನರ ಗಮನ ಸೆಳೆದರು.. ಹಿರಿಯ ಸಾಹಿತಿಗಳಾದ ಶ್ರೀ ರಾಧಾಕೃಷ್ಣ ಉಳಿಯತಡ್ಕ ತಮ್ಮ ಭಾಷಣದಲ್ಲಿ ಕವಿಗಳ ಜವಾಬ್ದಾರಿಗಳ ಬಗ್ಗೆ ತಿಳಿಸಿದರು. ಚಿತ್ರಕಲೆಯಲ್ಲಿ ವಿಶೇಷ ಸಾಧಕರಾದ ಶ್ರೀ ಬಿಕೆ ಮಾಧವರಾವ್ ಅವರಿಗೆ ಕಲಾಜ್ಯೋತಿ ಪ್ರಶಸ್ತಿ, ಶ್ರೀ ಕೆ ಪುಂಡಲೀಕ ನಾಯಕ್, ಶ್ರೀ ಬದ್ರುದ್ದೀನ್ ಕೂಳೂರು, ಶ್ರೀಮತಿ ಶಾಂತ ಪುತ್ತೂರು ಮತ್ತು ಶ್ರೀಮತಿ ಸರ್ವ ಅರಸ ಶೆಟ್ಟಿ ಅವರಿಗೆ ಸಾಹಿತ್ಯ ಸಿರಿ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತ್ಯ ರತ್ನ ಶ್ರೀ ವಿ ಬಿ ಕುಳಮರ್ವ ವಹಿಸಿದ್ದು ಕವಿಗಳಾದ ಶ್ರೀಯುತ ಜಯರಾಮ ಪಡ್ರೆ, ನಾರಾಯಣ ಕುಂಬ್ರಾ, ನಾರಾಯಣ ನಾಯ್ಕ ಕುದುಕೊಳಿ, ಉಮೇಶ್ ಕಾರಂತ್, ಭಾಸ್ಕರ್ ಎ ವರ್ಕಾಡಿ, ವಿರಾಜ್ ಅಡೂರ್, ಸುಭಾಷ್ ಎಸ್, ಹಿತೇಶ್ ಕುಮಾರ್, ಶ್ರೀಮತಿಯರಾದ ಶೈಲಜಾ ಕೇಕಣಾಜೆ, ಪರಿಮಳ ಮಹೇಶ್, ಸುಖಲತಾ ಶೆಟ್ಟಿ, ನವ್ಯ ಶ್ರೀ ಸ್ವರ್ಗ, ಪ್ರತಿಕ್ಷ ಆರ್, ದೀಪ್ತಿ ಎಂ, ದೀಪ್ತಿ ಅಡ್ಡಂತಡ್ಕ, ವಿದ್ಯಾಶ್ರೀ ಅಡೂರ್ , ಸೌಮ್ಯ ಗುರುಕಾರ್ಲೆ ತಮ್ಮ ಕವನಗಳನ್ನು ವಾಚಿಸಿದರು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಮತಿ ರಕ್ಷಿತಾ ಭಟ್ ಅವರ ಹಾಡುಗಾರಿಕೆಗೆ ಶ್ರೀಮತಿ ಕವಿತಾ ಕಿಣಿ, ಶ್ರೀ ವೆಂಕಟೇಶ್ ರಾವ್ ಸಾತ್ ನೀಡಿದರು. ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ಕವಿತಾ ಕಿಣಿ ಮತ್ತು ಶ್ರೀ ರವೀಂದ್ರ ಕಿಣಿ ಆದರ್ಶ ದಂಪತಿಗಳ ವಿಶೇಷ ಆದರಕ್ಕೆ ಪಾತ್ರರಾದರು. ಶ್ರೀ ಜಯರಾಮ ಉಡುಪ ಧಾರ್ಮಿಕ ಕ್ಷೇತ್ರದಲ್ಲಿ, ಶ್ರೀ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಕ್ಷೇತ್ರದಲ್ಲಿ, ಶ್ರೀ ವೆಂಕಟೇಶರಾವ್ ಸಂಗೀತದಲ್ಲಿ, ಶ್ರೀಮತಿ ಭಾರತಿ ಹಾಸನ್ ಕ್ರೀಡಾಪಟು ಮತ್ತು ಸಮಾಜ ಸೇವಕರಾಗಿ, ಶ್ರೀಮತಿ ಭವ್ಯ ಸುಧಾಕರ ಜಗಮನೆ ಸಾಹಿತ್ಯದಲ್ಲಿ, ಶ್ರೀ ಜಯಂತ ಪೂಜಾರಿ ಸಮಾಜ ಸೇವೆ, ಡಾ ಕೊಳ್ಚಪ್ಪೆ ಗೋವಿಂದ ಭಟ್ ಮತ್ತು ಶ್ರೀಮತಿಯರಾದ ರೇಖಾ ಸುರೇಶ್ ರಾವ್, ರತ್ನ ಭಟ್ ತಲಂಜೇರಿ, ಬಿ ಸತ್ಯವತಿ ಭಟ್ ಇವರು ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಶ್ರೀ ಬಸವರಾಜ ವಾಯಿ ಮತ್ತು ಶ್ರೀ ರಮೇಶ್ ಪೂಜಾರಿ ಸಮಾಜ ಸೇವೆಯಲ್ಲಿ ಚೈತನ್ಯಶ್ರೀ ಪ್ರಶಸ್ತಿಗೆ ಪಾತ್ರರಾದರು.
ಶ್ರೀ ಸತೀಶ್ ಎನ್ ಬಂಗೇರ, ಶ್ರೀ ಗೋಪಾಲಕೃಷ್ಣ ಶಾಸ್ತ್ರಿ, ಸೌಮ್ಯ ಗೋಪಾಲ್, ಶ್ರೀ ಜಯಾನಂದ ಪೆರಾಜೆ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿ ಪ್ರಶಂಸೆಗೆ ಪಡೆದರು. ಶ್ರೀಯುತರಾದ ದಿವಾಕರ ಬಲ್ಲಾಳ ಎ ಬಿ, ಶ್ರೀ ಜಯ ಮಣಿಯಂಪಾರೆ, ಶ್ರೀಮತಿಯರಾದ ವಿದ್ಯಾ ಎಸ್ ರೈ, ರಶ್ಮಿ ಸನಿಲ್, ಸುಧಾ ನಾಗೇಶ್, ಶ್ರೀಮತಿ ಸುನೀತಾ ಪ್ರದೀಪ್ ಮತ್ತು ಅಪೂರ್ವ ಕಾರಂತ್ ಕಾರ್ಯಕ್ರಮವನ್ನು ನಿರೂಪಿಸಿ ಯಶಸ್ಸಿಗೆ ಕಾರಣರಾದರು.
Comments (0)
Post Comment
Report Abuse
Be the first to comment using the form below.