(JavaScript required to view this email address)
Mangalore

News & Articles

ಕಥಾಬಿಂದು ಸಾಹಿತ್ಯ ಸಮ್ಮೇಳನ 48 ಕೃತಿಗಳ ಅನಾವರಣ


ಕಥಾಬಿಂದು ಸಾಹಿತ್ಯ ಸಮ್ಮೇಳನ 48 ಕೃತಿಗಳ ಅನಾವರಣ
ಕಥಾಬಿಂದು ಪ್ರಕಾಶನ ಪಿ ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜನವರಿ 21ರಂದು ಅಪರಾಹ್ನ ಎರಡು ಗಂಟೆಯಿAದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದೆ. ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಕಥಾಬಿಂದು ಸಾಹಿತ್ಯ ಸಮ್ಮೇಳನ 48 ಕೃತಿಗಳ ಅನಾವರಣ
 ಇದೇ ಸಂದರ್ಭದಲ್ಲಿ 48 ಸಾಹಿತ್ಯ ಕೃತಿಗಳ ಅನಾವರಣ ಕೂಡ ನಡೆಯಲಿದೆ ಶಿವಮೊಗ್ಗದ ಹಿರಿಯ ಸಾಹಿತಿ ಶ್ರೀಮತಿ ಗಾಯತ್ರಿ ಸುರೇಂದ್ರ ಅವರು ಅಧ್ಯಕ್ಷತೆ ವಹಿಸಲಿದ್ದು ಉದ್ಘಾಟನೆಯನ್ನು ಆನಂದ ನಿಲಯ ಪ್ರಕಾಶನದ ಶ್ರೀ ಆನಂದ ಕೊರಟಿಯವರು ಮಾಡಲಿದ್ದಾರೆ ಮುಖ್ಯ ಅತಿಥಿಗಳಾಗಿ ಡಾ ಆರ್ ಎಸ್ ರವೀಂದ್ರ (ಪ್ರಾಧ್ಯಾಪಕರು), ಹಿರಿಯ ಸಾಹಿತಿ ಮಂಗಳೂರಿನ ಡಾ ಕೊಳ್ಚಪ್ಪೆ ಗೋವಿಂದ ಭಟ್ ಆಗಮಿಸುವರು. ಶ್ರೀ ವಾಮನರಾವ್ ಬೇಕಲ್ ಅವರ (ಕನ್ನಡ ಭವನ ಕಾಸರಗೋಡು) ಅಧ್ಯಕ್ಷತೆಯಲ್ಲಿ 'ಕನ್ನಡ ತಿಲಕ ರಾಜ್ಯ ಪ್ರಶಸ್ತಿ' ಪ್ರದಾನ ನಡೆಯಲಿದೆ.

ಕಥಾಬಿಂದು ಸಾಹಿತ್ಯ ಸಮ್ಮೇಳನ 48 ಕೃತಿಗಳ ಅನಾವರಣ
23 ಜನ ಸಾಧಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಥಾಬಿಂದು ಸಾಹಿತ್ಯ ಸಮ್ಮೇಳನ 48 ಕೃತಿಗಳ ಅನಾವರಣ
ಅದೇ ದಿನ ನಡೆಯುವ ಕನ್ನಡ ಕವಿಗೋಷ್ಠಿಯಲ್ಲಿ 15 ಕವಿಗಳು ಭಾಗವಹಿಸಲಿದ್ದು ಶ್ರೀಮತಿ ಭವ್ಯ ಸುಧಾಕರ ಜಗಮಾನೆ ಅಧ್ಯಕ್ಷತೆ ವಹಿಸುವರು, ಅತಿಥಿಗಳಾಗಿ ಶ್ರೀಮತಿ ಬಿ ಸತ್ಯವತಿ ಎಸ್ ಭಟ್ ಕೊಳಚಪ್ಪು, ಆಕಾಶವಾಣಿ ಕಲಾವಿದ ಹಾಸನದ ಶ್ರೀ ಕುಮಾರ ಚಲವಾದಿ, ಅತಿಥಿಗಳಾಗಿ ಪಾಲ್ಗೊಳ್ಳುವರು. 
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿವಿಧ ಲೇಖಕರ ಒಟ್ಟು 48 ಪುಸ್ತಕಗಳು ಅನಾವರಣಗೊಳ್ಳಲಿವೆ. ಶ್ರೀಮತಿ ವಿನೋದಿನಿ ಆನಂದ್ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಮಾಲೆ-2 ಇದರ 48 ಕೃತಿಗಳು ಅನಾವರಣಗೊಳ್ಳಲಿವೆ.
ಕಥಾಬಿಂದು ಸಾಹಿತ್ಯ ಸಮ್ಮೇಳನ 48 ಕೃತಿಗಳ ಅನಾವರಣ
 ಕೆ ವಿ ಲಕ್ಷ್ಮಣಮೂರ್ತಿ (ಹಿರಿಯ ಸಾಹಿತಿಗಳು) ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸುನೀತಾ ನೆಲೆಗದ್ದೆ ಅವರು ನಡೆಸಿಕೊಡಲಿದ್ದಾರೆ ಅಪೂರ್ವ ಕಾರಂತ್ ಮತ್ತು ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸುವರು.
ಪಿವಿ ಪ್ರದೀಪ್ ಕುಮಾರ್
ಮುಖ್ಯಸ್ಥರು
ಕಥಾಬಿಂದು ಪ್ರಕಾಶನ
ಮಂಗಳೂರು
ಮೊಬೈಲ್+91 93414 10153
ಕಥಾಬಿಂದು ಸಾಹಿತ್ಯ ಸಮ್ಮೇಳನ 48 ಕೃತಿಗಳ ಅನಾವರಣ
ಕಥಾಬಿಂದು ಸಾಹಿತ್ಯ ಸಮ್ಮೇಳನ 48 ಕೃತಿಗಳ ಅನಾವರಣ
ಕಥಾಬಿಂದು ಸಾಹಿತ್ಯ ಸಮ್ಮೇಳನ 48 ಕೃತಿಗಳ ಅನಾವರಣ

Comment (1)




P

Praveen.v.k.ಬಿದಿಗೆಚಂದ್ರ commented on January 18th, 2024 at 9:20 AM 
ಕಥಾ ಬಿಂದು ಇದೊಂದು ಘನಗುಣಗಳವೆತ್ತ ಪ್ರತಿಷ್ಠಿತ ವ್ಯಾಟ್ಸಾಪ್ ಸಂಸ್ಥ ಇಲ್ಲಿ ಅನಾವರಣ ಹೊಂದುವ ಪ್ರತಿಯೊಂದು ಸಾಹಿತ್ಯ ಸುಮಗಳೂ ಸು ಘಮಬೀರುವವೇ. ಗಣ ಮಟ್ಟಕ್ಕಿಂತ ಗುಣಮಟ್ಟಕ್ಕೆ ಪ್ರಾಧಾನ್ಯತೆ, ಪ್ರಾಮುಖ್ಯತೆ ಕೊಟ್ಟಿರುವ ಸಂಸ್ಥೆ. ಹಾಗೆ ನೋಡಿದರೆ ನಾನು ಐತ್ತಕ್ಕೂಹಿಎಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಸಾಮಾಜಿಕ ಸಾಹಿತ್ಯಿಕ,ಸಂಸ್ಥೆಗಳು ಪರಿಷತ್ತುಗಳಿಂದ ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳನ್ನು ೫೦ ಕ್ಪಕೂ ಅಧಿಕ ಡೆನು,ನನ್ನದೇ ಸ್ವಂತ ಪರಿಮಳ ಪ್ರಕಾಶನದಡಿಯಲ್ಲಿ ನನ್ನ ೧೦ ಪುಸ್ತಕಗಳನ್ನು ಹೊರತಂದರೂ ಇವತ್ತೂ ಕಥಾಬಿಂದು ಸಂಸ್ಥೆಯಿಂದ ಕೊಡಮಾಡುವ ಪ್ರಶಸ್ತಿಗೆ ನಿಜವಾದ ಆಕಾಂಕ್ಷಿಯೇ. ಉಪನ್ಯಾಸಕನಾಗಿ ಎರಡೂ ಮೂರು ಲೆಕ್ಚೆರಗಳನ್ನು ನೀಡಿದಾಗ ಸಿಗುವ ತೃಪ್ತಿ ನಿಮ್ಮ ಸಂಸ್ಥೆ ಯಿಂದ ಪಡೆಯು ಪ್ರಶಸ್ತಿ ಆಗಿರುತ್ತದೆ.ನಿಜ. ನನಗೆ ಈ ಬಾರಿ ಪ್ರಶಸ್ತಿ ನೀಡುವ ಕುರಿತು ಏನೂ ಗೊತ್ತಾಗ್ಲಿಲ್ಲಾ. ಇಲ್ದಿದ್ರೆ ಖಂಡಿತಾ. ನಾನು ಬಯಸ್ತಿದ್ದೆ.ಇರಲಿ ಈ ಪ್ರಶಸ್ತಿ ವಿಜೇತರಿಗೂ,ಲೇಖಕರಿಗೂ ಆಯೋಜಕರಿಗೂ ಎಲ್ಲವೂ ಯಾವಾಗಲೂ ಶುಭಮಂಗಳವಾಗಲಿ.
ನಿಮ್ಮ
ಪ್ರೊ.ಪ್ರವೀಣ. ವಿ.ಕುಲಕರ್ಣಿ. ಬಿದಿಗೆಚಂದ್ರ✒️. ಜಮಖಂಡಿ. ೯೮೮೬೯೬೧೬೫೦.