ಆಮೇಲೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜನವರಿ 21ರಂದು 54 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದೆ. ಇದೇ ವರ್ಷ ಕಿನ್ನಿಗೋಳಿಯಲ್ಲಿ10 ಮತ್ತು ಮೇ ತಿಂಗಳಲ್ಲಿ ಮುಡಿಪುವಿನಲ್ಲಿ ಎಂಟು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದೆ. ಇತರ ಸಾಹಿತ್ಯಕ ಕಾರ್ಯಕ್ರಮಗಳ ಜೊತೆಗೆ ಹೈದರಾಬಾದಿನಲ್ಲಿ ಮೇತಿಂಗಳ 05 ರಂದು ಕವಿಗೋಷ್ಠಿ ಮತ್ತು ಕನ್ನಡ ಕಾರ್ಯಕ್ರಮ ನಡೆಸಿದ್ದು ಹೆಗ್ಗಳಿಕೆ ಮತ್ತು ಸ್ಮರಣೆಯ. ಈಗ ಕಥಾಬಿಂದು ಪ್ರಕಾಶನವು ಈ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಉಡುಪಿಯಲ್ಲಿ ಒಂದೇ ದಿನ ಒಂದೇ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ 101 ಪುಸ್ತಕಗಳ ಲೋಕಾರ್ಪಣೆಯ ದಾಖಲೆಯನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದೆ ಈ ಮಹಾಯೋಜನೆಯ ಬರಹಗಾರರಿಗೆ ಅದರಲ್ಲೂ ಮುಖ್ಯವಾಗಿ ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ಯೋಜನೆ ಇದಾಗಿದೆ. ಕವಿ ಸಾಹಿತಿಗಳ ನಿರೀಕ್ಷೆಯಂತೆ ಕೈ ಗೆಟಕುವ ಖರ್ಚಿನಲ್ಲಿ ಪುಸ್ತಕಗಳನ್ನು ಪ್ರಕಾಶನಗೊಳಿಸುವ ಯೋಜನೆ ಇದಾಗಿದೆ. ಹೆಚ್ಚಿನ ಮಾಹಿತಿ ಈ ಪ್ರಕಟಣೆಯ ಜೊತೆಗೆ ಲಗತ್ತಿಸಿದ ಟಿಪ್ಪಣಿಯಲ್ಲಿದೆ.
Comments (0)
Post Comment
Report Abuse
Be the first to comment using the form below.