"ಕವಿಮನಸ್ಸುಗಳು ಬೆರೆಯಲು ಕವಿತೆಯೇ ಮಧ್ಯವರ್ತಿ ಯಾಗುವಂತೆ ವೀಣಾ ನಾಗರಾಜ್ ಅವರು ನನ್ನನ್ನು ಬೆಸೆದು ಕೊಂಡಿದ್ದು ತಮ್ಮ ಭಾವಪೂರ್ಣ ಕವಿತೆಗಳ ಮೂಲಕ. ತನ್ನ ದ್ವಿತೀಯ ಕವನ ಸಂಕಲನ ದಲ್ಲಿ ದಿಟ್ಟ ಗುರುತೊಂದನ್ನು ಸಾಹಿತ್ಯ ಕ್ಷೇತ್ರದಲ್ಲಿ ಮೂಡಿಸಲು ಸಜ್ಜಾದ ಈ ಕವಿಯಿತ್ರಿ ಒಬ್ಬ ಮುಕ್ತ ಮನದ ಮುದ್ದು ಮೊಗದ ವಿನೀತ ಭಾವದ ಕವಿ ಸಂಗಾತಿ. ಮುಖಪುಟ ದಲ್ಲಿ ಪರಿಚಿತರಾದ ವೀಣಾ ರಾವ್ ರವರ ಕವಿತೆಗಳಲ್ಲಿ ಪದ ಲಾಲಿತ್ಯ ವಿದೆ. ನಿಜ ಭಾವಗಳ ಅನಾವರಣವಿದೆ.
Comments (0)
Post Comment
Report Abuse
Be the first to comment using the form below.