(JavaScript required to view this email address)
Mangalore

News & Articles

ಒಂದು ಕಲ್ಲಿನ ಭವಿಷ್ಯ ಉತ್ತುಂಗದಲ್ಲಿರಬಹುದು. ಆದರೆ ಆ ಕಲ್ಲು ಯಾರ ಬಳಿ ಸೇರುತ್ತದೆ ಅನ್ನುವುದು ಬಹಳ ಮುಖ್ಯವಾಗಿರುತ್ತದೆ. ಒಬ್ಬ ಶಿಲ್ಪಿಯ ಕೈಗೆ ದೊರೆತರೆ ಅದು ಉಳಿಪೆಟ್ಟನ್ನು ಸಹಿಸಿ ಎಲ್ಲರೂ ಕರ ಮುಗಿವ ಸುಂದರ ಶಿಲ್ಪಿಯಾಗಬಹುದು. ಅದೇ ಒಬ್ಬ ಮೇಸ್ತ್ರಿಯವನ ಕೈಗೆ ದೊರೆತರೆ ಹೊಸ್ತಿಲು ದಾಟುವ ಮೆಟ್ಟಿಲಾಗಬಹುದು ಅಲ್ಲವೇ.. ಇವು ನನ್ನದೇ ಸಾಲುಗಳು. ಎಷ್ಟೋ ಬಾರಿ ನೋಡಿದ್ದೆ. ಆಶ್ಚರ್ಯಗೊಂಡಿದ್ದೆ. ನಮಸ್ತೇ ಸರ್ ಎಂದು ಪರಿಚಯ ಮಾಡಿಕೊಳ್ಳುವ ವ್ಯಕ್ತಿ ಅದೊಂದು ದಿನದಲ್ಲಿ ಸಂತೋಷ್ ಹೆಗಡೆಯವರ ವಿದ್ಯಾರ್ಥಿಯಾಗಿರುತ್ತಿದ್ದರು. ಸುಮಾರು ಹೆಚ್ಚು ಕಡಿಮೆ 1998-2001 ಇರಬಹುದು. ಆ ಕಾಲದಲ್ಲಿ ಐಡಿಯಲ್ ಕಂಪ್ಯೂಟರ್ ಆಂಡ್ ಟೆಕ್ನಿಕಲ್ ಇನ್ಸ್ಟಿಟ್ಯೂಷನ್ ಎಂಬ ಸಂಸ್ಥೆಯ ಮೂಲಕ ಅದೆಷ್ಟೋ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ಖರ್ಚಿನಲ್ಲಿ ಕಂಪ್ಯೂಟರ್ ತರಬೇತಿಯನ್ನು ನೀಡುತಿದ್ದರು. ಅಷ್ಟೇ ಅಲ್ಲದೆ ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ನೀಡಿ ಪ್ರೋತ್ಸಾಹಿಸುತಿದ್ದರು. ರೋಟರ್ಯಾಕ್ಟ್ ಪ್ರೆಸಿಡೆಂಟ್ ಆಗಿದ್ದಾಗ ಕ್ರೀಡೆ - ಕಂಬಳಗಳಿಗೆ ಒತ್ತು ನೀಡಿ, ಬಡವರಿಗೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುತಿದ್ದರು. ಸಮಾಜ ಸೇವೆ ಕೈಗೊಳ್ಳುತ್ತಿದ್ದರು. ನನ್ನನ್ನೂ ಸೇರಿಸಿ ಅದೆಷ್ಟೋ ಜನರಿಗೆ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದವರು ಸಂತೋಷ್ ಕುಮಾರ್ ಹೆಗಡೆಯವರು. ಬಲಗೈಯ ಸಹಾಯ ಎಡಗೈಗೆ ತಿಳಿಯದಂತೆ, ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದದ್ದು  ನಿಜಕ್ಕೂ ಅದ್ಭುತವೇ ಸರಿ. ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯತ್ವವನ್ನು ಕೂಡಾ ಪಡೆದುಕೊಂಡಿದ್ದಾರೆ. ಯಕ್ಷಗಾನ, ಭಜನೆಕುಣಿತ, ಹಾಗೂ ಸಾಹಿತ್ಯದಭಿರುಚಿಯನ್ನು  ಮೈಗೂಡಿಸಿಕೊಂಡಿರುವ ಇವರು ಉದ್ಯಮಕ್ಷೇತ್ರದಲ್ಲಿಯೂ ಕೂಡಾ ಸೈ ಎನಿಸಿಕೊಂಡಿದ್ದಾರೆ. ಇವರ ವ್ಯಕ್ತಿತ್ವವನ್ನು ನೋಡಿ ಕಥಾಬಿಂದು ಪ್ರಕಾಶನದವರು ಕಳೆದ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2022 ನ್ನು ನೀಡಿ ಗೌರವಿಸಿದ್ದಾರೆ..
ಸಹೃದಯಿ ಸಂತೋಷ್ ಕುಮಾರ್ ಹೆಗಡೆ
ಅಶ್ವಿನಿ ಕೆ ಯುವ ಲೇಖಕಿ
ಸಹೃದಯಿ ಸಂತೋಷ್ ಕುಮಾರ್ ಹೆಗಡೆ
ಸಹೃದಯಿ ಸಂತೋಷ್ ಕುಮಾರ್ ಹೆಗಡೆ
ಸಹೃದಯಿ ಸಂತೋಷ್ ಕುಮಾರ್ ಹೆಗಡೆ
ಸಹೃದಯಿ ಸಂತೋಷ್ ಕುಮಾರ್ ಹೆಗಡೆ
ಸಹೃದಯಿ ಸಂತೋಷ್ ಕುಮಾರ್ ಹೆಗಡೆ
ಸಹೃದಯಿ ಸಂತೋಷ್ ಕುಮಾರ್ ಹೆಗಡೆ
ಸಹೃದಯಿ ಸಂತೋಷ್ ಕುಮಾರ್ ಹೆಗಡೆ
ಸಹೃದಯಿ ಸಂತೋಷ್ ಕುಮಾರ್ ಹೆಗಡೆ
ಸಹೃದಯಿ ಸಂತೋಷ್ ಕುಮಾರ್ ಹೆಗಡೆ

Comments (0)




Be the first to comment using the form below.