(JavaScript required to view this email address)
Mangalore

News & Articles

ಮಂಗಳೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಥಾಬಿಂದು ಪ್ರಕಾಶನ ಮತ್ತು ಕಲ್ಕೂರ ಪ್ರತಿಷ್ಠಾನ ವತಿಯಿಂದ ಸಂಗೀತ ಸಾಹಿತ್ಯ ಸಾಂಸ್ಕೃತಿಕೋತ್ಸವ ಕಾರ್ಯಕ್ರಮ ಇತ್ತೀಚೆಗೆ ಮಂಗಳೂರು ಮಂಗಳಾದೇವಿ ದೇವಸ್ಥಾನದ ರಂಗಮಂದಿರದಲ್ಲಿ ನಡೆಯಿತು.

ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಎಸ್. ಪ್ರದೀಪ್‌ ಕುಮಾರ್‌ ಕಲ್ಕೂರ ಉದ್ಭಾಟಿಸಿದರು. ಡಾ. ರೇವಣ್ಣ ಬಳ್ಳಾರಿ ಅವರು ಪಿ.ವಿ. ಪ್ರದೀಪ್‌ ಕುಮಾರ್‌ ಅವರ 'ಆ ಒಂದು ದಿನ' 57ನೇ ಕೃತಿಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ  ನಾನಾ ಕ್ಷೇತ್ರದ ಸಾಧಕರಾದ ಕೇಶವ ಶಕ್ತಿನಗರ, ಡಾ. ಕೆ.ಆರ್‌.ನಾಥ್‌, ಬಿ.ಕೆ. ಮಾಧವ ರಾವ್‌, ಡಾ.ಸತೀಶ್‌ ಎನ್‌. ಬಂಗೇರ, ಜಯರಾಮ್‌ ಉಡುಪ, ಡಿ.ಬಿ. ನಾಯಕ್‌, ಪದ್ಮಾವತಿ ಸಚಿದಾನಂದ ಗುಪ್ತ, ಶಾಂತ ಕುಂಟಿನಿ, ಚಂದ್ರಹಾಸ ದೇವಾಡಿಗ, ಶಿಲ್ಪಿ ಕೆ. ಶಿವರಾಮ ಆಚಾರ್ಯ, ಕೆ.ಲಕ್ಷ್ಮೀ, ಸ್ನಿತಿಕ್‌ ಸನ್ವಿತ್‌ ಕುಲಾಲ್‌, ಅನನ್ಯ, ಶೃಜನ್ಯ, ಆದ್ಯ ಅವರಿಗೆ ಕರ್ನಾಟಕ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ತೀಯ ಸಮಾಜದ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಲ್ಜಡ, ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಡುಪಿ ಪತ್ರಕರ್ತರ ವೇದಿಕೆ ಅಧ್ಯಕ್ಷ ಶೇಖರ ಅಜೆಕಾರು, ಯುಗಪುರುಷ ಸಂಪಾದಕ  ಭುವನಾಭಿರಾಮ ಉಡುಪ, ಡಾ.ಪಡ್ಡಂಬೈಲು ಕೃಷ್ಣಪ್ಪ ಗೌಡ, ಯಶ್ವಿತ್ ಕಾಳಮ್ಮನೆ, ಸುಧಾರಾಜು, ಸುನೀತಾ ಪ್ರದೀಪ್‌ ಕುಮಾರ್‌ ಉಪಸ್ಥಿತರಿದ್ದರು.

ಬದ್ರುದ್ದೀನ್‌ ಕೂಳೂರು ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸೋಮಶೇಖರ ಹಿಪ್ಪರಗಿ, ಇಬ್ರಾಹಿಂ ಖಲೀಲ್‌, ಅಪ್ನಾನ್‌ ಕರಾಯಾ, ಪ್ರೀತಮ್‌ ಮಿಜಾರು, ಅನ್ಸಾಲ್‌  ಚಿಪ್ಪಾರು, ಯಶವಂತ್‌ ಕುದ್ರೋಳಿ, ಡಾ.ಜಯಶ್ರೀ ಕದ್ರಿ, ಬಶೀರ್‌ ಅಹ್ಮದ್‌ ಬಂಟ್ವಾಳ, ಕೆ.ಆರ್‌. ಹಲಗಿ ಕವನ ವಾಚಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಿಯ ಹರೀಶ್‌ ನಿರೂಪಿಸಿದರು.

Comments (0)




Be the first to comment using the form below.