(JavaScript required to view this email address)
Mangalore

News & Articles

ಭಾವ ನೈವೇದ್ಯ ಎಂಬುದು ಅಂತರಾಳದ ಭಾವನೆಗಳಿಗೆ ಧ್ವನಿಯಾಗಿ ಅಕ್ಷರ ರೂಪ ಪೋಣಿಸಿ ಒಂದು ಹೂವಿನ ಪ್ರಸಾದವೇ ಎಂಬಂತೆ ಕಾಣುತ್ತಿದೆ. ಸಮಾಜಕ್ಕೆ, ದೇವರಿಗೆ ಅರ್ಪಿಸುವ ನೈವೇದ್ಯವಾಗಿರುವ ವಸ್ತುವನ್ನು ಒಮ್ಮೆ ದೇವರಿಗೆ ಅಥವಾ ಸಮಾಜಕ್ಕೆ ಅರ್ಪಿಸಿದರೆ ಅದು ಪವಿತ್ರ ಹೂ ಮನಸಿನ ಪ್ರಸಾದವಾಗಿ ಪರಿಗಣಿಸಲ್ಪಡುತ್ತದೆ. ಅಂತೆಯೇ ಶ್ರೀಮತಿ ಪುಷ್ಪ ಪ್ರಸಾದ್ ರವರು ಶಾಲಾ ದಿನಗಳಿಂದಲೇ ಬರೆಯುವ ಗೀಳು ಹಚ್ಚಿಕೊಂಡು ತಮ್ಮದೇ ಆದ ಓದುಗರನ್ನು ತನ್ನತ್ತ ಸೆಳೆದುಕೊಂಡಿರುವ ಇವರು ಸರಳ, ಸುಂದರ, ಸೌಮ್ಯ ಮನೋಭಾವದವರು. 
ಪುಷ್ಪ ಪ್ರಸಾದ್ ರವರ "ಭಾವ ನೈವೇದ್ಯ"
ಇದೀಗ ಎರೆಡನೇ ಕೃತಿಯಾದ "ಭಾವ ನೈವೇದ್ಯ" ವನ್ನು ಎಲ್ಲರ ಮುಂದಿಟ್ಟಿದ್ದಾರೆ. ಈ ಸಂಕಲನದಲ್ಲಿ ಸುಮಾರು 30 ಕವನಗಳ ಗುಚ್ಛದೊಳಗೆ ಪ್ರೇಮ ಭಾವ, ತುಡಿತ -ಮಿಡಿತವಿದೆ. ಜೊತೆಗೆ ಅದಕ್ಕಾಗಿ ಮಿಡಿವ ಹೃದಯಗಳಿಗೆ ಮಾಂತ್ರಿಕ ಸ್ಪರ್ಶವೂ ಇದೆ, ಮುಲಾಮಿನ ಆರೈಕೆಯೂ ಇದೆ. ಏನಿದು ನಗುವಿನ ಮಾಯೆ, ಪ್ರೀತಿಯ ಧಾರಾವಾಹಿ, ಮದನ ಚಂದ್ರಿಕೆ ಇತ್ಯಾದಿ ಕವನಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ಪದ ಬಂಧಗಳ ಸಾಲುಗಳನ್ನು ಓದುತ್ತಿದ್ದರೆ ಮತ್ತೆ ಮತ್ತೆ ಓದುತ್ತಲೇ ಇರಬೇಕು ಎಂಬ ಮನಸಾಗುತ್ತದೆ. ಅದಕ್ಕೊಂದಷ್ಟು ವಿರುದ್ದವಾಗಿ, ಗಂಭೀರವಾಗಿ ಪರಿತಾಪ, ಜೀವನ, ಇತ್ಯಾದಿ ಕವನಗಳನ್ನು ರಚಿಸಿ ಬದುಕಿನ ಏರುಪೇರು, ದುಗುಡ -ದುಮ್ಮಾನಗಳಿಗೆ ಧ್ವನಿಯಾಗುವ ಪ್ರೇಮದ ಕಾರಂಜಿಯಿಂದ ಪುಟಿದು ನೈಜ ಬದುಕಿನ ಚಿತ್ರಣದಂತೆಯೂ ಭಾಸವಾಗುತ್ತದೆ. ಎಳೆ ಹೃದಯಗಳಿಗೆ ಕಚಗುಳಿ ಇಡುವ, ಬಲಿತ ಜೀವಗಳಿಗೆ ಸಾಂತ್ವಾನ ತುಂಬುವ, ಸಿಹಿ ಕಹಿಯನ್ನು ಅಳೆದು ತೂಗಿ ಹೇಳುವ ಒಂದು ಪ್ರಯತ್ನವನ್ನು ಆತ್ಮೀಯರಾದ ಪುಷ್ಪ ಪ್ರಸಾದ್ ರವರು ತಮ್ಮ ಕವಿತೆಗಳ ಮೂಲಕ ರಚಿಸಿದ್ದಾರೆ. ಇವರ ಈ ಆಶಯದ ಬರವಣಿಗೆಯ ಎರೆಡನೇ ಕವನ ಸಂಕಲನ ಭಾವ ನೈವೇದ್ಯವನ್ನು ಎತ್ತಿಕೊಂಡು ಓದುವುದರೊಂದಿಗೆ ಅವರನ್ನು ಬೆಳೆಸುವ ಜವಾಬ್ದಾರಿ ನಾವೆಲ್ಲರೂ ತೆಗೆದುಕೊಳ್ಳೋಣ. ಪುಷ್ಪ ಪ್ರಸಾದ್ ರವರ ಲೇಖನಿಯಿಂದ ಮತ್ತಷ್ಟು ಒಳ್ಳೆಯ ಸಾಹಿತ್ಯ ಹೊರಬರಲಿ ಎಂದು ಆಶಿಸುತ್ತಾ...


ಪುಷ್ಪ ಪ್ರಸಾದ್ ರವರ "ಭಾವ ನೈವೇದ್ಯ"
ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು
ವೈದ್ಯರು, ಸಾಹಿತಿಗಳು ಹಾಗೂ ಸಂಘಟಕ ಸಮಾಜ ವಿಜ್ಞಾನಿಗಳು
ಪುಷ್ಪ ಪ್ರಸಾದ್ ರವರ "ಭಾವ ನೈವೇದ್ಯ"
ಪುಷ್ಪ ಪ್ರಸಾದ್ ರವರ "ಭಾವ ನೈವೇದ್ಯ"

Comments (0)




Be the first to comment using the form below.