ಶ್ರೀ ಮತಿ ಲಕ್ಷ್ಮೀ ವಿ ಭಟ್* ಇವರು ಎಂ ಎ: ಬಿ.ಎಡ್ ಪದವೀಧರರು. ಮೂಲತಹ ಮಂಜೇಶ್ವರದ ಬಳಿಯ ಮೀಯಪದವಿನವರು. ಮಂಗಳೂರಿನ ಪ್ರತಿಷ್ಠಿತ ಕೆನರಾ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕಿ ಯಾಗಿದ್ದು ೩೪ ವರ್ಷಗಳಿಂದ ಸೇವೆ ಸಲ್ಲಿಸುತಿದ್ದಾರೆ. ಅತಿ ಹೆಚ್ಚು ಮಕ್ಕಳನ್ನು ಕನ್ನಡ ಸಾಹಿತ್ಯ ಚಟುವಟಿಕೆ ಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಕ್ಕೆ ಇವರಿಗೆ ಕೀರ್ತಿ ಪ್ರಕಾಶನ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಸುವರ್ಣ ಕನ್ನಡ ರತ್ನ ಪ್ರಶಸ್ತಿ ಯನ್ನು ನೀಡಿ ಗೌರವಿಸಿದೆ.
ಅಲ್ಲದೆ ಸಾಹಿತ್ಯ ಸೇವೆಗಾಗಿ ಸಾಹಿತ್ಯ ದೀವಿಗೆ ಪ್ರಶಸ್ತಿ, ಕಾವ್ಯ ಕಣಜ ಪ್ರಶಸ್ತಿ ಹಾಗೂ ಸಾಹಿತ್ಯೋತ್ಸವ " *ಚೈತನ್ಯ ಶ್ರೀ " ಪ್ರಶಸ್ತಿಯೂ ದೊರೆತಿವೆ
ಬಿಡುಗಡೆಯಾದ ಕವನ ಸಂಕಲನ
೧) ಕಾವ್ಯ ಮೃಷ್ಟಾನ್ನ
೨) ವನಸುಮ - (ರಾಷ್ಟ್ರಮಟ್ಟದ ತೃತೀಯ ಸ್ಥಾನ ಪಡೆದಿದೆ)
೩) ಹೊಸ ಬರಹಗಾರರ ಕೈಪಿಡಿ. ( ಜಂಟಿಯಾಗಿ ಪ್ರಕಟಗೊಂಡಿದೆ)
೪) ಜನಮಾನ್ಯ ಮುಕ್ತಕ ಸಂಕಲನ
ಇವರು ಕನ್ನಡ ಕಾವ್ಯ ಪ್ರಕಾರಗಳಾದ ಷಟ್ಪದಿ, ಕಂದ, ರಗಳೆ, ಸಾಂಗತ್ಯ, ವೃತ್ತ, ಮುಕ್ತಕ- ಮಾತ್ರ ವಲ್ಲದೆ ಭಾವಗೀತೆ, ಚಿತ್ರ ಕವನ, ಶಿಶುಗೀತೆ, ಭಕ್ತಿ, ದೇಶ ಭಕ್ತಿ ಗೀತೆ, ಚುಟುಕು ಹನಿಗವನ ಹಾಗೂ ಅನ್ಯದೇಶ್ಯ ಪ್ರಕಾರ ಗಳಾದ ಗಝಲ್, ರುಬಾಯಿ, ಹಾಯ್ಕು, ಟಂಕಾ ..... ಇತ್ಯಾದಿ ಗಳ ರಚನೆಗಳಲ್ಲೂ ಸೈ ಎನಿಸಿಕೊಂಡಿದ್ದಾರೆ.
Comments (0)
Post Comment
Report Abuse
Be the first to comment using the form below.