(JavaScript required to view this email address)
Mangalore

News & Articles

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಾಹನ ಚಾಲಕರಾಗಿ ಸುಮಾರು 26 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶ್ರೀ ಕೆ. ಲಕ್ಷ್ಮಣ ಗೌಡ ವಾಹನ ಚಾಲಕರು 
ಶ್ರೀ ಜತ್ತಪ್ಪ ಗೌಡ ಇವರ ಮಗನಾಗಿ ದಿನಾಂಕ 20.05.1965 ರಂದು ಜನಿಸಿದ  ಶ್ರೀ ಕೆ. ಲಕ್ಷ್ಮಣ ಗೌಡ ತಮ್ಮ ಶಿಕ್ಷಣವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆಯಲ್ಲಿ ಮುಗಿಸಿ ದಿನಾಂಕ 17-02-1991 ರಂದು ಆರೋಗ್ಯ ಇಲಾಖೆಯ ತಾಲೂಕು ಆಸ್ಪತ್ರೆ ಬಂಟ್ವಾಳದಲ್ಲಿ ವಾಹನ ಚಾಲಕರಾಗಿ ಸೇವೆಗೆ ಸೇರಿದರು ದಿನಾಂಕ 01-08-2000 25-07-2017 ದಿನಾಂಕ 27-07-2017ರಿಂದ ಸಮುದಾಯ ಆರೋಗ್ಯ ಕೇಂದ್ರ ವಾಮದಪದವಿನಲ್ಲಿ ಕರ್ತವ್ಯಕ್ಕೆ ಸೇರಿ ಕೇಂದ್ರದಲ್ಲಿ ವಾಹನ ಚಾಲಕರಾಗಿ ಉತ್ತಮ ಸೇವೆಯನ್ನು ನೀಡಿ ಇದೀಗ ನಿವೃತ್ತರಾಗಿದ್ದಾರೆ. ಸದ್ರಿಯವರು ಚಾಲಕ ವೃತ್ತಿಯಲ್ಲಿ ಇದುವರೆಗೂ ಯಾವುದೇ ಅಪಘಾತ ಸಾವು-ನೋವುಗಳು ಸಂಭವಿಸಿರುವುದಿಲ್ಲ ಮತ್ತು ಉತ್ತಮ ವಾಹನ ಚಾಲಕ ಎಂದು ಪ್ರಶಂಸೆ ಮತ್ತು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಒಬ್ಬ ಉತ್ತಮ ವಾಹನ ಚಾಲಕರು ಎಂದು ಇಲಾಖೆಯಲ್ಲಿ ಸನ್ಮಾನಿಸಲ್ಪಟ್ಟರುತ್ತಾರೆ. ಇಷ್ಟೆ ಅಲ್ಲದೆ ಇವರು ಒಬ್ಬ ಕ್ರೀಡಾಪಟುವಾಗಿ ಕ್ರೀಡೆಯಲ್ಲಿ ಪ್ರತಿ ವರ್ಷ ನಡೆಯುವ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ 2001 ರಿಂದ 2020ರ ವರೆಗೆ ಜಿಲ್ಲಾಮಟ್ಟದಿಂದ ಭಾಗವಹಿಸಿ ರಾಜ್ಯಮಟ್ಟದ ವರೆಗೆ ಭಾಗವಹಿಸಿಕೊಂಡು ಬಂದಿರುತ್ತಾರೆ. ಇವರು ಕೃಷಿಯ ಕುಟುಂಬದಿಂದ ಬಂದವರಾಗಿರುವುದರಿಂದ ಕೃಷಿ ಆಸಕ್ತಿ ಹೊಂದಿರುತ್ತಾರೆ. ಕೃಷಿಯ ಜೊತೆಗೆ ಒಬ್ಬ ಉತ್ತಮ ಜೇನು ಕೃಷಿಕರು ಎಂದು ಹಲವು ಪ್ರಶಸ್ತಿ ಮತ್ತು ಅಭಿನಂದನೆಯನ್ನು ಪಡೆದಿರುತ್ತಾರೆ. ವೈಯಕ್ತಿಕ ಶಿಸ್ತು, ಸ್ವಂತ ನಿಲುವು, ಕೆಲಸದಲ್ಲಿ ಶ್ರದ್ಧೆ ಇವರ ವಿಶೇಷತೆ 26 ವರ್ಷಗಳ ಸುದೀರ್ಘ ದಕ್ಷ ಸೇವೆಯನ್ನು ನಾವೆಲ್ಲರೂ ಕೃತಜ್ಞತಾ ಪೂರ್ವಕವಾಗಿ ಸ್ಮರಿಸುವುದರೊಂದಿಗೆ ನಿವೃತ್ತಿ ಸಂತರದ ಜೀವನವು ಆರೋಗ್ಯ, ಸುಖ, ಸಮೃದ್ಧಿಯಿಂದ ಕೂಡಿರಲೆಂದು ಹೃತ್ತೂರ್ವಕವಾಗಿ ಹಾರೈಸುತ್ತೇವೆ.


ಶ್ರೀ ಕೆ. ಲಕ್ಷ್ಮಣ ಗೌಡ
ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ
ಶ್ರೀ ಕೆ. ಲಕ್ಷ್ಮಣ ಗೌಡ
ಶ್ರೀ ಕೆ. ಲಕ್ಷ್ಮಣ ಗೌಡ

Comments (0)




Be the first to comment using the form below.