ಮೂಲತಃ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ
ಕು. ಮಾನಸ ಮದುವೆಯಾಗಿ ನಮ್ಮ ಮೂಡಬಿದಿರೆಯ ಮಾಂಟ್ರಾಡಿಗೆ ಬಂದು
ಶ್ರೀಮತಿ ಮಾನಸ ಪ್ರವೀಣ್ ಭಟ್ಆಗಿ ಈಗ ನಮ್ಮೋರಿನವರೇ ಆಗಿದ್ದಾರೆ. ಶಿವಮೊಗ್ಗದ ಸಾಗರ ಅಂದ ಕೂಡಲೇ ನನ್ನ ಸ್ಮೃತಿಯಲ್ಲಿ ಕನ್ನಡ ಸಾರಸ್ವತ ಲೋಕವನ್ನು ಬೆಳಗಿದ ಅನೇಕಾನೇಕ ಸಾಹಿತಿಗಳು ಹಾದು ಹೋಗುತ್ತಾರೆ. ಅಂಥಾ ಸಾಹಿತಿಗಳ ನಾಡಿನಲ್ಲಿ ಜನಿಸಿದ ಮಾನಸ, ಅವರಂತೆ ಆದರ್ಶ ಬದುಕಿನ ಕನಸು ಕಾಣುತ್ತಿರುವವರು. ಎಳೆವೆಯಿಂದಲೇ ಸಾಹಿತ್ಯ ಕಲೆ ಸಂಸ್ಕೃತಿಗಳ ಬಗ್ಗೆ ಒಲವು ಬೆಳೆಸಿಕೊಂಡು ಸಾಹಿತಿಯಾಗಿಯೂ, ಸಾಹಿತ್ಯ ಸಂಘಟಕಿಯಾಗಿಯೂ ಇವರು ದುಡಿಯುತ್ತಿದ್ದಾರೆ. ವರ್ತಮಾನ ಕಾಲದ ದುಡ್ಡೇ ದೊಡ್ಡಪ್ಪ ಮನೋಭಾವ ದಿಂದ ಹೊರಗುಳಿದು ಮಾನವೀಯತೆಯ ಅಳತೆಗೋಲಿ ನಿಂದ ಬದುಕನ್ನು ಮಾನಸ ಅವರಂತೆ ಕಾಣುತ್ತಿರುವುದು ಮಾತ್ರವಲ್ಲ ಮುಂದಿನ ತಲೆಮಾರು ಸಮಾಜಕ್ಕೆ ಹೊರೆಯಾಗದಂತೆ ಬದುಕ ಬೇಕೆಂದು ಪ್ರೇರೇಪಿಸುವ ಉದಯೋನ್ಮುಖ ಸಾಹಿತಿ ಇವರು.
ನಾನೀಗ ಹೇಳ ಹೊರಟಿರುವುದು ಅವರ ಕೃತಿ ಕಥಾ ಖಜಾನೆಯ ಬಗ್ಗೆ "ಏಡಿ ಮತ್ತು ರಾಜ’. ‘ದುಷ್ಟನರಿ’ ‘ಕನಸಿನ ಕಥೆ', ‘ಕೂರಳು ಬಿಗಿದ ಪ್ರೀತಿ’, ‘ ಸೋಲೇ ಗೆಲುವಿನ ಸೋಪಾನ', ‘ಹಸಿವಿನ ಬಡತನ', ‘ದೇವರಿದ್ದಾನೆ’ ‘ಪಿರಮಿಡ್ ಭೂತ’ ‘ಕಡಿಲಿನಾಳದ ದೆವ್ವಗಳು. ಎಂಬ ಹದಿಮೂರು ಕಥೆಗಳು ಹಾಗೂ ‘ಕೊರೋನಾ ಸಂಕಷ್ಟದಲ್ಲಿ ಜಾತಿ ಧರ್ಮ ಮರೆತ ಜನತೆ’ ಎಂಬ ಒಂದು ಪ್ರಹಸನವೂ ಇದೆ. ಇವುಗಳೆಲ್ಲಾ ನೀತಿ ಕಥೆಗಳಾಗಿದ್ದು ಈ ಕಥೆಗಳ ಮೂಲಕ ಮಾನಸ ಚಿಕ್ಕಮಕ್ಕಳಿಗೆ ನೀತಿಯನ್ನು ಭೋದಿ ಸುತ್ತಿದ್ದಾರೆ. ಪ್ರತೀ ಕಥೆಯ ಅಂತ್ಯದಲ್ಲಿ ಆ ಕಥೆಯ ನೀತಿಯನ್ನು ಪ್ರತ್ಯೇಕ ವಾಕ್ಯಗಳಲ್ಲಿ ಬರೆದು ಆ ಮೂಲಕ ತಾನು ಹೇಳುವ ಕಥೆಯ ಉದ್ದೇಶವನ್ನು ಅವರು ಸ್ಪಷ್ಟಪಡಿಸುತ್ತಾರೆ. ನಮ್ಮ ಶಿಕ್ಷಣ ಪದ್ಧತಿಯಲ್ಲಿ ಮೌಲ್ಯ ಶಿಕ್ಷಣಕ್ಕೆ ಮೌಲ್ಯವೇ ಇಲ್ಲದಂತಾದಾಗ ಅವರು ಇಂಥಾ ಕೃತಿಗಳ ಓದಿನಿಂದ ವಿದ್ಯಾರ್ಥಿಗಳ ಮನಸ್ಸನಲ್ಲಿ ಉತ್ತಮ ಮಾನವೀಯ ಮೌಲ್ಯಗಳು ಮೂಡಲು ನಿರ್ಧರಿಸುವುದರಿಂದ ಮತ್ತು ಅದಕ್ಕೆ ಪೂರಕವಾಗಿ ಲೇಖಕರು ನೀಡಿದ ನೀತಿ ವಾಕ್ಯಗಳು ಸಹಕರಿಸುವುದರಿಂದ ಬೇಗ ಅಥೈಸಿಕೊಳ್ಳಲು ಮಕ್ಕಳಿಗೆ ಸಾಧ್ಯವಾಗುತ್ತದೆ ಇದರಿಂದಾಗಿ ಇಂಥಾ ಬರವಣಿಗೆಗಳು ಹೆಚ್ಚು ಅರ್ಥಪೂರ್ಣವಾಗುತ್ತದೆ. ಮತ್ತು ಸಾರ್ಥಕಗೊಳ್ಳುತ್ತವೆ.
Comments (0)
Post Comment
Report Abuse
Be the first to comment using the form below.