(JavaScript required to view this email address)
Mangalore

News & Articles

ದಿನಾಂಕ  ಜನವರಿ 22ರಂದು ಶ್ರೀ ವೀರಭದ್ರೇಶ್ವರ ಸುಕ್ಷೇತ್ರ ಕನ್ನಳ್ಳಿ ಇಲ್ಲಿ ನಡೆಯುವ ಕಥಾಬಿಂದು ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಸೇವೆಯನ್ನು ಗುರುತಿಸಿ ಶ್ರೀಮತಿ ಎಂ ಎಸ್ ಆಶಾಲತಾ ಇವರಿಗೆ ಕನ್ನಡ ತಿಲಕ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕಥಾಬಿಂದು ಸಂಸ್ಥೆಯ ಸಂಸ್ಥಾಪಕರಾದ ಪಿವಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ
ಹೆಸರು : ಎಂ. ಎಸ್. ಆಶಾಲತಾ
ತಂದೆ : ಎಂ. ಎಸ್. ಶಿವಲಿಂಗಯ್ಯ
ತಾಯಿ : ವೆಂಕಟಾಲಕ್ಷ್ಮಮ್ಮ
ಹುಟ್ಟಿದೂರು : ಹೊಸೂರು, ಬೈರಮಂಗಲ ಹೋಬಳಿ ರಾಮನಗರ ಜಿಲ್ಲೆ
ಪತಿ : ಹೆಚ್. ವಿ. ರಾಮಚಂದ್ರ ( ಅಡ್ವೋಕೇಟ್, ಬೆಂಗಳೂರು )
ಮಗಳು : ಶ್ರೇಯ ರಾಮಚಂದ್ರ
ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಬಿ. ಇ. ಮುಗಿಸಿ ಪ್ರಸ್ತುತ ಕೆನಡಾದ ವಿಂಡಸರ್ ವಿಶ್ವ ವಿದ್ಯಾಲಯದಲ್ಲಿ ಎಂ. ಎಸ್ ಮಾಡುತ್ತಿದ್ದಾರೆ.

ಕವಯಿತ್ರಿಯ ವಿದ್ಯಾರ್ಹತೆ : ಕನ್ನಡ ಸ್ನಾತಕೋತ್ತರ ಪದವಿ( ಮಾನಸ ಗಂಗೋತ್ರಿ, ಮೈಸೂರು ) 
ಹವ್ಯಾಸ : ಕವನ, ಲೇಖನಗಳ ರಚನೆ, ಸುಗಮ ಸಂಗೀತ ಕೇಳುವುದು
ರಾಜ್ಯದ ಹಲವಾರು ಕವಿಗೋಷ್ಠಿ ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕಾರ

ಪಡೆದಿರುವ ಪ್ರಶಸ್ತಿ ಗಳು :
1) ದಾವಣಗೆರೆ ಕಲಾ ಕುಂಚ ಬಳಗದಿಂದ ಪ್ರಶಸ್ತಿ
2) ಮಂಡ್ಯದ ಜಿ. ವಿ. ಕೆ. ಪ್ರತಿಷ್ಠಾನ ಬಳಗದಿಂದ 2020ರ' ಸಹಕಾರ ರತ್ನ' ಪ್ರಶಸ್ತಿ
3) ರಾಜ್ಯಮಟ್ಟದ ಕವಿಗೋಷ್ಟಿಯಲ್ಲಿ ಉತ್ತಮ ಕವಿ ಪ್ರಶಸ್ತಿ
4) ಸಾಹಿತ್ಯ,ಸಹಕಾರ, ಮಹಿಳಾ ಕ್ಷೇತ್ರದ ಸೇವೆಗಾಗಿ ಬುದ್ಧ,ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರಾಜ್ಯಮಟ್ಟದ ದತ್ತಿ ಪುರಸ್ಕಾರ ಸನ್ಮಾನ
5)ಮಂಡ್ಯದ ಕನ್ನಡ ಸಾಂಸ್ಕೃತಿಕ ಬಳಗದವತಿಯಿಂದ ಅರವತ್ತೆಳನೇ
ಕನ್ನ ಡ ರಾಜ್ಯೋತ್ಸವದ ಅಂಗವಾಗಿ
ಕಾವ್ಯಶ್ರೀ ಪ್ರಶಸ್ತಿ 
6) ಸುಮಂಗಲಿ ಸೇವಾ ಟ್ರಸ್ಟ್ ಶ್ರೀರಂಗಪಟ್ಟಣ ಇವರಿಂದ ಕನ್ನಡ ರಾಜ್ಯೋತ್ಸವದಅಂಗವಾಗಿ ಸಾಹಿತ್ಯ ಹಾಗು ಸಹಕಾರ ಕ್ಷೇತ್ರದ ಸಾಧನೆಗಾಗಿ 2022ರ ಕರ್ನಾಟಕ ಪ್ರಜಾ ಭೂಷಣ ಪ್ರಶಸ್ತಿ
7) ತಾಯ್ನಾಡು ರಕ್ಷಣಾ ವೇದಿಕೆ ಬೆಂಗಳೂರು ಇವರಿಂದ  ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ 2022ರ  ಕನ್ನಡ ರಾಜ್ಯೋತ್ಸವ ಪ್ರಶಸ್ತಿ
8)ಎಂ. ಡಿ. ಸಿ. ಸಿ. ಬ್ಯಾಂಕ್ ಮಂಡ್ಯ ಇವರಿಂದ ಉತ್ತಮ ವ್ಯವಸ್ಥಾಪಕಿ ಪ್ರಶಸ್ತಿ 
 
ಇವರ ಹಲವರು ಕವನಗಳು, ಲೇಖನಗಳು ಚನ್ನಪಟ್ಟಣದ ಸ್ಥಳೀಯ ಪತ್ರಿಕೆಗಳಾದ ರೇಷ್ಮಸೀಮೆ, ಬಯಲು ಸೀಮೆ, ಮೈಸೂರಿನ
ಮೈಸೂರು ಪತ್ರಿಕೆ, ಸಾದ್ವಿ ಪತ್ರಿಕೆ,ಪ್ರಜಾನುಡಿ ಪತ್ರಿಕೆ ಗಳಲ್ಲಿ ಪ್ರಕಟಗೊಂಡಿವೆ 

ಇವರ ಪ್ರಥಮ ಕವನ ಸಂಕಲನ " ಮನದ ಸಿರಿ " ಪ್ರಕಟಣೆಗೆ ಸಿದ್ದ ವಾಗಿದೆ 

ವೃತ್ತಿ : ಶಾಖಾ ವ್ಯವಸ್ಥಾಪಕಿಯಾಗಿ 
ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್,ಕೆ. ಹೊನ್ನಲಗೆರೆಯಲ್ಲಿ 
(ಮದ್ದೂರು ತಾಲ್ಲೂಕು)ಪ್ರಸ್ತುತ
ಕಾರ್ಯ ನಿರ್ವಹಿಸುತ್ತಿರುವುದು

ಎಂ. ಎಸ್ ಆಶಾಲತಾ ಅವರಿಗೆ ಕನ್ನಡ ತಿಲಕ ಪ್ರಶಸ್ತಿ

Comments (0)




Be the first to comment using the form below.