ಕಿನ್ನಿಗೋಳಿ: ಯುಗ ಪುರುಷ ಕಿನ್ನಿಗೋಳಿ ನೇತೃತ್ವದಲ್ಲಿ ಕಥಾಬಿಂದು ಸಾಹಿತ್ಯ ವೇದಿಕೆ, ವಾಯ್ಸ್ ಆಫ್ ಆರಾಧನ ಆಶ್ರಯದಲ್ಲಿ ನವೆಂಬರ್ 1, 2022 ರಂದು
ಕನ್ನಡ ರಾಜ್ಯೋತ್ಸವ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮಧ್ಯಾಹ್ನ 2:30 ರಿಂದ ನಡೆಯಲಿದೆ.
ಡಾ.ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ಭುವನಾಭಿರಾಮ ಉಡುಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದೈಜಿವರ್ಲ್ಡ್ ನ ಡೈರೆಕ್ಟರ್ ಹೇಮಾಚಾರ್ಯ, ಉದ್ಯಮಿ ಶ್ರೀಪತಿ ಭಟ್, ಸಾಹಿತಿ ಕಾದಂಬರಿಕಾರ ಪಿ.ವಿ. ಪ್ರದೀಪ್ ಕುಮಾರ್ ಹಾಗೂ ವಾಯ್ಸ್ ಆಫ್ ಆರಾಧನ ಸಂಸ್ಥಾಪಕಿ ಪದ್ಮಶ್ರೀ ಭಟ್ ನಿಡ್ಡೋಡಿ ಉಪಸ್ಥಿತರಿರುವರು.
ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ನಾವು - ನೀವು ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ ಶ್ರೀ ಗಣೇಶ ಅಮೀನ್ ಸಂಕಮಾರ್ ಅವರು.
ಖ್ಯಾತ ಪತ್ರಕರ್ತ ಸಾಹಿತಿ ಸಂಘಟಕ ಡಾ. ಶೇಖರ ಅಜೆಕಾರು ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಟಿ ನಡೆಯಲಿದೆ. ಶ್ರೀಮತಿ ರೇಖಾ ಸುದೇಶ್ ರಾವ್ ನಿರ್ವಹಣೆಯಲ್ಲಿ ಕವಿ, ಕವಯಿತ್ರಿಯರಾದ ಸುಲೋಚನ ಪಚ್ಚಿನಡ್ಕ, ದೀಪಾ ಪಾವಂಜೆ, ಅನುರಾಧ, ರೇಮಂಡ್ ಡೀಕೂನ ತಾಕೊಡೆ, ಡಾ. ಸುರೇಶ ನೆಗಳಗುಳಿ, ಬದ್ರುದ್ದೀನ್ ಕೂಳೂರು, ಮನ್ಸೂರ್ ಮೂಲ್ಕಿ, ಸೌಮ್ಯಾ ಗೋಪಾಲ್, ಮಾನಸ ಪ್ರವೀಣ್ ಭಟ್, ಗೋಪಾಲಕೃಷ್ಣ ಶಾಸ್ತ್ರಿ, ಸರೋಜಿನಿ, ವೀಣಾ ವಾಮಂಜೂರ್, ರೇಖಾ ನಾರಾಯಣ್ ಪಕ್ಷಿಕೆರೆ, ಶಾಂತಾ ಪುತ್ತೂರು ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಶಿಕಲಾ ಕಮ್ಮಡೆ, ಸಂತೋಷ ಕುಮಾರ್ ಹೆಗಡೆ, ಶುಭಲಕ್ಷ್ಮಿ ಆರ್. ನಾಯಕ್, ಶಾಂತ ಪುತ್ತೂರು, ಚಂದ್ರಹಾಸ ಎಂ. ದೇವಾಡಿಗ, ಸೀತಾರಾಮ್ ಕುಮಾರ್, ಎಚ್. ಜನಾರ್ಧನ ಇವರುಗಳಿಗೆ ಕಥಾಬಿಂದು ರಾಜ್ಯೋತ್ಸವ ಪುರಸ್ಕಾರ 2022 ನೀಡಿ ಗೌರವಿಸಲಾಗುವುದು. ಜೊತೆಗೆ ವಾಯ್ಸ್ ಆಫ್ ಆರಾಧನ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ.
ಆರಾಧನಾ ಭಟ್ ಹಾಗೂ ಸಂಭ್ರಮ ಕಾರ್ತಿಕ್ ಭಟ್ ಅವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದಾರೆ.
Comments (0)
Post Comment
Report Abuse
Be the first to comment using the form below.