ಪಿ. ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಈಗಾಗಲೆ ಮಲೇಷಿಯಾ, ದುಬೈ, ಮುಂಬೈ, ನೇಪಾಳದಲ್ಲಿ ಕನ್ನಡ ಕಂಪು ಕಾರ್ಯಕ್ರಮವನ್ನು ಯಶಸ್ವೀಯಾಗಿ ನೆರವೇರಿಸಿ ಇದೀಗ ಶ್ರೀ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಜಂಗಮವಾಡಿ ಮಠ ವಾರಣಾಸಿ ಕಾಶಿ ಇವರ ದಿವ್ಯ ಉಪಸ್ಥಿತಿಯಲ್ಲಿ ಕಥಾಬಿಂದು ಕನ್ನಡ ಕಂಪು ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ). ಮಂಗಳೂರು ಸಮೃದ್ಧಿ ಪೌಂಡೇಶನ್ (ರಿ) ಕೆಂಗೇರಿ ಕೊಮ್ಮಘಟ್ಟ. ಬೆಂಗಳೂರು ಶ್ರೀ ಮರಳುಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಭದ್ರಾವತಿ ಇವರ ಆಯೋಜನೆಯಲ್ಲಿ ಕನ್ನಡ ಕಂಪು ಸರಣಿ ೫ ಹಾಗೂ ಸಾಧನ ಶ್ರೀ ರಾಷ್ಟ್ರ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ ೧೮.೧೨.೨೦೨೨ ರ ಸಂಜೆ ೫ ಗಂಟೆಗೆ ಜಂಗಮವಾಡಿ ಮಠ ವಾರಣಾಸಿ ಕಾಶಿ ಉತ್ತರ ಪ್ರದೇಶ ಇಲ್ಲಿ ಜರುಗಲಿದೆ. ಈ ಸಂದರ್ಭದಲ್ಲಿ ಸತ್ಯ ಶಾಂತ ಪ್ರತಿಷ್ಠಾನ (ರಿ) ಅರ್ಪಿಸುವ ಶ್ರೀಮತಿ ಶಾಂತ ಕುಂಟಿನಿ ನಿರ್ಮಾಣದ ‘ಜೈ ಸೀತಾ ರಾಮ್’ ಯೂಟ್ಯೂಬ್ ಹಾಡನ್ನು ಬಿಡುಗಡೆ ಮಾಡಲಾಗುವುದು.
ಶ್ರೀ ಸಿದ್ದಲಿಂಗಯ್ಯ ಅಧ್ಯಕ್ಷರು ಶ್ರೀಮರಳುಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಭದ್ರಾವತಿ, ಶ್ರೀ ರುಧ್ರಾರಾಧ್ಯ ಅಧ್ಯಕ್ಷರು ಸಮೃದ್ಧಿ ಫೌಂಡೇಶನ್ (ರಿ) ಕೆಂಗೇರಿ ಕೊಮ್ಮಘಟ್ಟ. ಬೆಂಗಳೂರು, ಶ್ರೀ ರವೀಂದ್ರ ಕಿಣಿ ನಿವೃತ್ತ ಅಧೀಕ್ಷಕ ಅಭ್ಯಂತರರು ಮಂಗಳೂರು, ಶ್ರೀಮತಿ ಎಂ. ಎಸ್. ಸುಧಾಮಣಿ ವೆಂಕಟೇಶ ಮಾಜಿ ನಗರ ಸಭಾ ಅಧ್ಯಕ್ಷರು ಭದ್ರಾವತಿ, ಶ್ರೀ ನಾಗರಾಜ ಡಿ. ಎಸ್. ಎಸ್. ಮುಖಂಡರು ಭದ್ರಾವತಿ, ಡಾ. ಪರಮೇಶ್ವರಪ್ಪ ಎಸ್ ಬ್ಯಾಡಗಿ, ಪ್ರೊಫೆಸರ್, ಆಯುರ್ವೇದ ಸಂಕಾಯ, ಕಾಶಿ ಹಿಂದೂ ವಿಶ್ವವಿದ್ಯಾಲಯ ವಾರಣಾಸಿ, ಉತ್ತರ ಪ್ರದೇಶ ಡಾ. ಬಸವ ಪ್ರಭು ಜಿರಲಿ ಪ್ರೊಫೆಸರ್, ಕೃಷಿ ವಿಜ್ಞಾನ ಸಂಸ್ಥಾನ ಕಾಶಿ ವಿಶ್ವವಿದ್ಯಾಲಯ ವಾರಣಾಸಿ, ಉತ್ತರ ಪ್ರದೇಶ, ನಳಿನಿ ಗಂಗಾಧರ ಚಿಲುಮೆ ಮ್ಯಾನೇಜರ್ ಜಂಗಮ ವಾಡಿ ಮಠ, ಶಿವಾನಂದ ಹಿರೇಮಠ ವ್ಯವಸ್ಥಾಪಕರು ಜಂಗಮ ವಾಡಿ ಮಠ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಸಾಧನ ಶ್ರೀ ರಾಷ್ಟ್ರ ಪ್ರಶಸ್ತಿ ಪುರಸ್ಕೃತರುಡಾ. ಹರಿಶ್ಚಂದ್ರ ಸಾಲಿಯಾನ್ (ಸಾಹಿತ್ಯ)
ಶ್ರೀ ಆನಂದ್ ಕೊರಟಿ (ಪ್ರಕಾಶನ)
ಶ್ರೀ ಶೇಖರ ಪಿ. ಪೂಜಾರಿ (ಸಮಾಜ ಸೇವೆ)
ಶ್ರೀ ರಮೇಶ್ ಕೆ. ಅಮೀನ್ (ಸಮಾಜ ಸೇವೆ)
ಶ್ರೀಮತಿ ಕೆ. ಲಕ್ಷ್ಮೀ (ಸಾಹಿತಿ, ಅನುವಾದ, ನಾಣ್ಯ ಸಂಗ್ರಹ)
ಶ್ರೀ ಕೃಷ್ಣಮೂರ್ತಿ ಪುದುಕೋಳಿ (ಧಾರ್ಮಿಕ)
ಶ್ರೀಮತಿ ಕವಿತಾ ಕಿಣಿ (ತಬಲಾ ವಾದನ)
ಶ್ರೀಮತಿ ಶಾಂತ ಕುಂಟಿನಿ (ಸಾಹಿತ್ಯ ಸಂಘಟನೆ)
ಡಾ. ಎಸ್. ಶಾಂತರಾಜು (ಸಮಾಜ ಸೇವೆ)
ಶ್ರೀ ಎನ್. ಕೃಷ್ಣಮೂರ್ತಿ (ಸಮಾಜ ಸೇವೆ)
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಯಕರು, ವಿದ್ವಾನ್ ಶ್ರೀ. ಸಿ. ಶಿವರಾಜ್ ಪಂ|| ಪುಟ್ಟರಾಜ ಸಂಗೀತ ವಿದ್ಯಾಲಯ ಭದ್ರಾವತಿ ಇವರಿಂದ ಹಿಂದೂಸ್ಥಾನಿ ಸಂಗೀತ ಹಾಗೂ ಶ್ರೀಮತಿ ಕವಿತಾ ಕಿಣಿ ಅವರಿಂದ ತಬಲಾ ವಾದನ ಜರುಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶ್ರೀ ಪಿ. ವಿ. ಪ್ರದೀಪ್ ಕುಮಾರ್ ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮಂಗಳೂರು, ಶ್ರೀ ಸಿದ್ದಲಿಂಗಯ್ಯ, ಜನಕಲ್ಯಾಣ ಟ್ರಸ್ಟ್ ಭದ್ರಾವತಿ, ಶ್ರೀ ರುದ್ರಾರಾದ್ಯ ಸಮೃದ್ಧಿ ಫೌಂಡೇಶನ್ (ರಿ) ಕೊಮ್ಮಘಟ್ಟ, ಶ್ರೀಮತಿ ಆಶಾ ಶಿವು ಯುವ ಲೇಖಕಿ ಇವರುಗಳು ಪತ್ರಿಕಾ ಪ್ರಕಟಣೆಯ ಸಮಯದಲ್ಲಿ ಉಪಸ್ಥಿತರಿದ್ದರು.
Comments (0)
Post Comment
Report Abuse
Be the first to comment using the form below.