(JavaScript required to view this email address)
Mangalore

News & Articles

ಸಾಹಿತ್ಯವು ಹಿತವನ್ನು ಜೊತೆಯಲ್ಲಿ ಹೊತ್ತುತರುತ್ತದೆ. ಪದ್ಯಗಳನ್ನು ಅನೇಕ ಕವಿಮಾನ್ಯರು ಕನ್ನಡ ಸಾಹಿತ್ಯಕ್ಕೆ, ನಾಡಿಗೆ ಕೊಡುಗೆಯಾಗಿ ನೀಡುತ್ತಾ ಬಂದಿದ್ದಾರೆ. ಈ ಸಾಲಿಗೆ ಜಯಂತಿ ಕನ್ನುಕೆರೆ ಅವರು ಸೇರುತ್ತಾರೆ. ಮನಸ್ಸಿಗೆ ಮುದ ನೀಡುವ ಹೃದ್ಯವಾದ ಕವನಗಳನ್ನು ಜಯಂತಿ ಕನ್ನುಕೆರೆ ಬರೆಯುವುದರಲ್ಲಿ ಪಳಗಿದ್ದಾರೆ. ಕಥೆ, ಕವನ, ಕಾದಂಬರಿ, ಲೇಖನ ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಜಯಂತಿ ಕನ್ನುಕೆರೆ ಅವರು ಗೃಹಿಣಿಯಾಗಿ, ತಾಯಿಯಾಗಿ ಗೃಹ ಕೃತ್ಯವನ್ನು ನಿಭಾಯಿಸುತ್ತಾ, ಸಾಹಿತ್ಯಾಭಿಮಾನಿಯಾಗಿ ಇವರದು ಬಹುಮುಖ ಪ್ರತಿಭೆಯುಳ್ಳವರಾಗಿದ್ದಾರೆ. ಮನೆಗೆ ಮಲ್ಲಿಗೆಯಾಗಿ, ಕಷ್ಟಗಳಿಗೆ ಕಲ್ಲಾಗಿ ಎಲ್ಲರಲ್ಲೂ ಸಹೃದಯತೆಯನ್ನು ಹೊಂದಿ ಜೀವನಾನುಭವಗಳನ್ನು ತಮ್ಮ ಕವನಗಳಲ್ಲಿ ಅಚ್ಚೊತ್ತಿದ್ದಾರೆ. ಛಂದೋಬದ್ಧವಾಗಿ, ಲಯಭರಿತ ಪದಲಾಲಿತ್ಯದಿಂದ ಅವರ ಕವನ ಆಕರ್ಷಿಸುತ್ತದೆ. 

ಒಸಗೆ

ಸೌಹಾರ್ದದ ಬಾಳಿಗೆ ಒಲವಿನ ಬೆಸುಗೆ,
ಸೌಜನ್ಯ ತುಂಬಿದ ಉಲ್ಲಾಸದ ಒಸಗೆ,
ಸೌಗಂಧಿಕಾ ಪುಷ್ಪದ ಘಮವದು ಬುವಿಗೆ,
ಸೌರಭ ಸೂಸುವ ಸೃಷ್ಟಿಯ ಬೆಡಗೆ.
ಒಸಗೆ., ಭಾವಯಾನ., ಜಲಕ್ರಾಂತಿ., ವಿಕಸನ., ವಿಶ್ವಗುರು., ಜ್ಞಾನ ದೀವಿಗೆ., ಅನುಭಾವ., ಲೋಕ ಪೂಜಿತೆ., ಕಾರುಣ್ಯ ಸಿಂಧು., ಜ್ಞಾನ ಜ್ಯೋತಿ., ಲಾಸ್ಯ., ಬೇಗನೆ ಬಾರೋ., ಆತ್ಮ ಶೋಧನೆ., ಕೃಪಾ ಕಟಾಕ್ಷ., ಮಾಣಿಕ್ಯ., ಮತದಾನ., ಕುರ್ಚಿಯ ಗತ್ತು., ಯುಗಳ ಗಾನ., ಚಂಡಾಟ., ತಂದೆಯೇ ದೇವರು., ನಭದೊಳಿಹ ನೀಲಕಂಠ., ಶಾಪ., ರಕ್ಷಣೆ.ಹೂಬನ., ತವರು., ವಂದನೆ., ಜೀವಾಧಾರ., ಒಡಲಾಳ., ದುಡಿಮೆಯ ಫಲ., ಅಸಮಾನ., ಸುಮಬಾಲೆ., ಕೃಷಿಯ ಖುಷಿ., ಮುದ್ದು ತಾರೋ., ಬೆಳಕಿನ ಬೆರಗು., ಮುಗಿಲ ಹನಿಗಳು., ಗೆಳೆತನ., ಆರಾಧನೆ., ದಿವ್ಯ ಪ್ರಭೆ., ಜಳಕದ ಪುಳಕ. ಕಲ್ಪನೆ., ಬಾಳದೀವಿಗೆ., ಹಸಿರು., ಭಾವಲೀಲೆ., ತನ್ನಿರೆ ಹಾಲ., ಪಚ್ಚೆಯ ತೆನೆ., ಹಂಬಲ., ಮೂಲಾಧಾರ., ಮುರಳಿ ಗಾನ., ಗಣಪ ಬಂದನಮ್ಮ., ಕೈ ಚಳಕ., ಕಾಯಕವೇ ಕೈಲಾಸ., ದೇಶದ ಪ್ರಗತಿ., ಹೆಮ್ಮೆಯ ಹಂಪಿ., ವಾಗಭಿಮಾನಿ, ಸಂದೇಶ., ಶಿವ ಸನ್ನಿಧಿ., ಕಾಯಕ ನಿಷ್ಠೆ. ಹೀಗೆ ಇವರ ಸಾಹಿತ್ಯ ಸಾಲುಗಳು ಸಾಗಿ 55 ನೇ ಕವನ

ಕಾಯಕ ನಿಷ್ಠೆ

ಕಾಯಕ ನಿಷ್ಠೆಯ ಯೋಗಿಗೆ,
ಗೌರವಿಸುವುದೇ ಕಾಣಿಕೆ,
ಅನ್ನದಾತ ಸುಖೀ ಭವ,
ಸಂತೃಪ್ತಿಯಲಿ ಹಾಡಿ ಹೊಗಳುವ.
ಕವನಕ್ಕೆ ಈ ಸಂಕಲನ ಮುಕ್ತಶಯವಾಗುತ್ತದೆ ಒಂದಕ್ಕಿ0ತ ಒಂದು ವಿಭಿನ್ನವಾದ ಕವನಗಳನ್ನು ರಚಿಸಿದ್ದಾರೆ ಜಯಂತಿ ಕನ್ನುಕೆರೆ ಅವರು ಇವರಿಂದ ಇನ್ನಷ್ಟು ಸಾಹಿತ್ಯ ಕೃತಿಗಳು ಹೊರಬರಲಿ ಎಂದು ಆಶಿಸುತ್ತ ಶುಭವಾಗಲಿ.


ಜಯಂತಿ ಕನ್ನುಕೆರೆ ಅವರ ಮಿನುಗು ಮಿಂಚು
ವಾಮನ್ ರಾವ್ ಬೇಕಲ್.
ಸ್ಥಾಪಕ ಅಧ್ಯಕ್ಷರು ಕನ್ನಡ ಭವನ, ಕಾಸರಗೋಡು
25.12.23

* * * * *
ಜಯಂತಿ ಕನ್ನುಕೆರೆ ಅವರ ಮಿನುಗು ಮಿಂಚು
ಮನದಾಳದಿಂದ.....

ನಾನು ಜಯಂತಿ ಕನ್ನುಕೆರೆ. ಸಾಹಿತ್ಯ ಕ್ಷೇತ್ರದಲ್ಲಿ ಹೆಜ್ಜೆ ಗುರುತು ಮೂಡಿಸುವ ಆಸೆ ನನಗೆ. ಎಳವೆಯಿಂದಲೇ ಓದು ನನ್ನ ಮುಖ್ಯ ದಿನಚರಿ. ಎಲ್ಲಾ ಪ್ರಕಾರದ ಸಾಹಿತ್ಯದಲ್ಲಿ ನನ್ನ ಆಸಕ್ತಿ ಅಡಕವಾಗಿತ್ತು. ಬ್ಯಾಂಕ್ ಉದ್ಯೋಗಿಯಾಗಿ ಸಾಹಿತ್ಯಕ್ಕೆ ಸಮಯ ನೀಡಲಾಗಲಿಲ್ಲ. ವಿಶ್ರಾಂತ ಜೀವನದಲ್ಲಿ ಸಾಹಿತ್ಯಾಸಕ್ತಿ ಗರಿಗೆದರಿತು.
ನನ್ನ ಕವನಗಳನ್ನು ಆಸ್ವಾದಿಸಿ ಪ್ರತಿಕ್ರಿಯಿಸಿ ಎಂದು ಆಶಿಸುತ್ತೇನೆ. ಈ ಬರವಣಿಗೆ ಕನ್ನಡಮ್ಮನ ಸೇವೆಗೆ ಸಿಕ್ಕ ಸದವಕಾಶ ಎಂದೇ ಭಾವಿಸುತ್ತೇನೆ. ಸಮಾಜದ ಆಗುಹೋಗುಗಳ ಕುರಿತು ಹಲವಾರು ಕವನ ರಚಿಸಿದ್ದೇನೆ. ಪ್ರಕೃತಿ, ದೇವರು, ಮುಂತಾದ ಹಲವಾರು ವಿಷಯಗಳ ಕುರಿತು ನನ್ನ ಲೇಖನಿ ಓಡಿದೆ. ಈ ಕವನ ಸಂಕಲನಕ್ಕೆ ಶ್ರೀಯುತ ವಾಮನ್ ರಾವ್ ಬೇಕಲ್ ರವರು ಮುನ್ನುಡಿ ಹಾಡಿರುವರೆಂದು ತಿಳಿಸಲು ಹರ್ಷಿಸುತ್ತೇನೆ. ಶ್ರೀಯುತ ಬೇಕಲ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು. ಬೆನ್ನುಡಿಗಳನ್ನು ತಿಳಿಸಿ ನನ್ನ ಬೆನ್ನು ತಟ್ಟಿದ ಶ್ರೀಮಾನ್ ವೈ. ವಿ. ಗುಂಡೂರಾಯರಿಗೂ ನನ್ನ ಅನಂತ ಧನ್ಯವಾದಗಳು.
ನನ್ನ ಮೊದಲ ಕವನ ಸಂಕಲನ "ಭಾವ ದೀಪ್ತಿ"ಗೆ ಕೂಡ ಕಥಾಬಿಂದು ಪ್ರಕಾಶನದಿಂದಲೇ ಬಿಡುಗಡೆಯ ಭಾಗ್ಯ. ಈಗ ದ್ವಿತೀಯ ಕವನ ಸಂಕಲನವೂ ಅವರಿಂದಲೇ ಹೊರ ಬರುತ್ತಿದೆ. ಕವನ ಸಂಕಲನ ಹೊರ ತರಲು ಪ್ರೋತ್ಸಾಹ ನೀಡಿದ ನನ್ನ ಹಿತೈಷಿಗಳಿಗೆ ಆಭಾರಿ. ಬಹು ಮುಖ್ಯವಾಗಿ ಸನ್ಮಾನ್ಯ ಸಾಹಿತಿ ಶ್ರೀ ಕೊಳ್ಚಪ್ಪೆ ಗೋವಿಂದ ಭಟ್ಟರಿಗೆ ನನ್ನ ಅನಂತಾನAತ ಧನ್ಯವಾದಗಳು. ಹಾಗೆಯೇ ಶ್ರೀಯುತ ಪಿ.ವಿ. ಪ್ರದೀಪ್ ಕುಮಾರ್, "ಕಥಾ ಬಿಂದು ಪ್ರಕಾಶನ"ದ ರೂವಾರಿಗಳಿಗೆ ನನ್ನ ಮನದಾಳದ ಧನ್ಯವಾದಗಳು.
ಇನ್ನೊಂದು ಮಾತು.
ನನ್ನ ಸಹೋದ್ಯೋಗಿ ಶ್ರೀಮತಿ ಪೂರ್ಣಿಮಾ ಭಗವಾನ್ ರವರು ಸಾಹಿತ್ಯ ಕೃಷಿಗೆ ನಿರಂತರ ಪ್ರೋತ್ಸಾಹ ನೀಡಿದ್ದಾರೆ . ಅವರಿಗೂ ಅನೇಕಾನೇಕ ಧನ್ಯವಾದಗಳು. ಅಲ್ಲದೇ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸಿದ ಎಲ್ಲಾ ಸಹೃದಯರಿಗೂ ನನ್ನ ಕೃತಜ್ಞತೆಗಳು. ಸದಾ ನನ್ನ ಕಾವ್ಯ ಪಯಣಕ್ಕೆ ಬೆಂಬಲವಿತ್ತ ನನ್ನ ಕುಟುಂಬದ ಕಾಣಿಕೆಯನ್ನು ಕೂಡ ಸ್ಮರಿಸಲೇಬೇಕು. ನನ್ನ ಪತಿ ದೇವರು ಶ್ರೀಯುತ ಈಶ್ವರ ಮುಚ್ಚಿಂತಾಯರ ಬೆಂಬಲಕ್ಕೆ ನನ್ನ ಹೃನ್ಮನದ ನಮನಗಳು. ಈ ನನ್ನ ದ್ವಿತೀಯ ಕೃತಿಯನ್ನು ನನ್ನ ಸುಪುತ್ರಿ ಶ್ರೀಮತಿ"ಕೀರ್ತನಾ ಮುಚ್ಚಿಂತಾಯರಿಗೆ ಅರ್ಪಿಸುತ್ತೇನೆ. ನನ್ನ ಸಾಹಿತ್ಯ ಕೃಷಿಗೆ ತಮ್ಮ ಬೆಂಬಲ ಸದಾ ಇರಲೆಂದು ಬಯಸುತ್ತೇನೆ.
ಜಯಂತಿ ಕನ್ನುಕೆರೆ.
ಜಯಂತಿ ಕನ್ನುಕೆರೆ ಅವರ ಮಿನುಗು ಮಿಂಚು
ಜಯಂತಿ ಕನ್ನುಕೆರೆ ಅವರ ಮಿನುಗು ಮಿಂಚು
ಜಯಂತಿ ಕನ್ನುಕೆರೆ ಅವರ ಮಿನುಗು ಮಿಂಚು
ಜಯಂತಿ ಕನ್ನುಕೆರೆ ಅವರ ಮಿನುಗು ಮಿಂಚು
ಜಯಂತಿ ಕನ್ನುಕೆರೆ ಅವರ ಮಿನುಗು ಮಿಂಚು
ಜಯಂತಿ ಕನ್ನುಕೆರೆ ಅವರ ಮಿನುಗು ಮಿಂಚು

Comments (2)




V

V.M.Hatwar commented on January 11th, 2024 at 12:28 PM 
Congratulations God bless you all the best keep it up



V

V.M.Hatwar commented on January 11th, 2024 at 12:29 PM 
Congratulations God bless you all the best keep it up