(JavaScript required to view this email address)
Mangalore

News & Articles

ಪ್ರತಿಭೆಗೆ ಅವಕಾಶ ದೊರೆತಾಗ ಸಾಧನೆ ಮಾಡಬೇಕೆಂಬ ಹಂಬಲ ಹೆಚ್ಚಾಗುತ್ತದೆ ಎನ್ನುವುದಕ್ಕೆ ಶ್ರೀಮತಿ ಜಾನಕಿದೇವಿ ಭದ್ರಣ್ಣವರ ಅವರ ಸಾಹಿತ್ಯ ಕೃಷಿ ಉತ್ತಮ ನಿದರ್ಶನ. ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ ಕವಿಗೋಷ್ಠಿಯಲ್ಲಿ ಉತ್ಸಾಹದಿಂದ ಭಾಗಿಯಾಗಿ ಮುಂದೆ ಅನೇಕ ರಾಜ್ಯಮಟ್ಟದ ಸಾಹಿತ್ಯಕ ಕಾರ್ಯಕ್ರಮಗಳ ವೇದಿಕೆಯ ಸದುಪಯೋಗ ಪಡೆದುಕೊಂಡು ಅಲ್ಪಾವಧಿಲ್ಲಿಯೇ ಅವರು ಮೂರು ಕೃತಿಗಳನ್ನು ರಚಿಸಿದ್ದು ಬಹಳ ಸಂತಸದ ವಿಚಾರ. ಬೈಲಹೊಂಗಲ ತಾಲೂಕಿನ ನಾಗನೂರು ಗ್ರಾಮದ ಕೆಳದಿ ಚೆನ್ನಮ್ಮನ ವಂಶಸ್ಥರ ಕುಟುಂಬದಲ್ಲಿ ಜನಿಸಿದ ಇವರು ವೃತ್ತಿಯಿಂದ ಆಶಾ ಕಾರ್ಯಕರ್ತೆಯಾಗಿ ಜನಸೇವೆಯಲ್ಲಿ ನಿರತರಾಗಿದ್ದಾರೆ. ಹೊಸದನ್ನು ಕಲಿಯುವ ಹಂಬಲ, ಏನಾದರೂ ವಿಶೇಷವಾದದ್ದನ್ನು ಬರೆಯಬೇಕೆಂಬ ತುಡಿತ ಅವರನ್ನು ಸದಾ ಕ್ರಿಯಾಶೀಲರನ್ನಾಗಿಸಿದೆ. ತಂದೆಯವರ ಪ್ರೇರಣೆ, ನಾಗನೂರು ಮಠದ ಸಂಸ್ಕೃತಿಯ ಪ್ರಬಾವದಿಂದ ಅವರು ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ಸಾಹಿತ್ಯ ಸೇವೆಯನ್ನು ಮುಂದುವರಿಸಿದ್ದಾರೆ. 'ಗೋಧೂಳಿ ಸಮಯ'ಕೃತಿಯಲ್ಲಿ ಮೂಡಿಬಂದ ಕವನಗಳು ಕವಯತ್ರಿಯವರ ಜೀವನಾನುಭವದ ಸೊಗಸನ್ನು ಪ್ರತಿಬಿಂಬಿಸುತ್ತವೆ. ಸರಳ ಹಾಗೂ ಸುಂದರ ಸಾಲುಗಳಲ್ಲಿ ಆಧ್ಯಾತ್ಮ, ಗುರುವಿನ ಕರುಣೆ, ದೇವರ ಅನುಗ್ರಹ, ಸಂಬಂಧಗಳ ಬಾಂಧವ್ಯ, ಮಮತೆ ಎಲ್ಲವೂ ಅನಾವರಣಗೊಂಡಿವೆ. ವಿಭಿನ್ನ ಹಾಗೂ ವಿಶೇಷ ಶೈಲಿಯ ರಚನೆಗಳಲ್ಲು ಗ್ರಾಮೀಣ ಬದುಕಿನ ವಿವಿಧ ಆಯಾಮಗಳು, ದೇಶಾಭಿಮಾನ, ಕನ್ನಡ ಪ್ರೇಮ ಎದ್ದುಕಾಣುತ್ತವೆ. 'ಗುರುವಿನ ಜ್ಞಾನ ಪಕ್ಷಿಯು, 'ಮುನ್ನುಡಿ' ಕವನಗಳು ಅರಿವಿನ ಮಹತ್ವ ಸಾರಿದರೆ, 'ಪ್ರೀತಿಯ ಪ್ರಾಣ', 'ತಾಯಿಯ ನೆನಪಿನ ಚಿನ್ನ' ಕವನಗಳಲ್ಲಿ ಹೆತ್ತಮ್ಮನ ತ್ಯಾಗ, ಅಂತಃಕರಣ ಹೃದಯ ತಣಿಸುತ್ತದೆ. ರಾಗ ಸಂಯೋಜಿಸಿ ಹಾಡಬಹುದಾದ ರೀತಿಯಲ್ಲಿ ಶ್ರೀಮತಿ ಜಾನಕಿದೇವಿ ಭದ್ರಣ್ಣವರ ಅವರು ಬರೆದ ಕವನಗಳು ಓದುಗರಿಗೆ ಸುಲಭವಾಗಿ ಅರ್ಥವಾಗುವಂತಿವೆ. ಜೀವನದ ತತ್ತ್ವ, ಸಂದೇಶ, ಮೌಲ್ಯಗಳನ್ನು ಹೊತ್ತು ಹೊರಬರುತ್ತಿರುವ ಮೌಲಿಕ ಕೃತಿ 'ಗೋಧೂಳಿ ಸಮಯ'ಎಲ್ಲರ ಮನಮುಟ್ಟಲಿ ಎಂದು ಆಶಿಸುತ್ತೇನೆ.

ಜಾನಕಿದೇವಿ
ಎನ್.ಆರ್.ಠಕ್ಕಾಯಿ
ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು
ತಾಲೂಕು ಘಟಕ ಬೈಲಹೊಂಗಲ
ಜಿಲ್ಲೆ: ಬೆಳಗಾವಿ
ಜಾನಕಿದೇವಿ
ಜಾನಕಿದೇವಿ
ಜಾನಕಿದೇವಿ

Comments (0)




Be the first to comment using the form below.