(JavaScript required to view this email address)
Mangalore

News & Articles

ಶ್ರೀಮತಿ ಗಾಯತ್ರಮ್ಮ ಮೂಲತಃ ಶಿವಮೊಗ್ಗ ದವರು. ಅವರ ಪತಿ ಸುರೇಂದ್ರ ಬಿ ಎಂ. ವಾಯು ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರು. ಮಗ ಅಜಯ್ ಕುಮಾರ್ ಶರ್ಮ ವೃತ್ತಿಪರರು.

ಶ್ರೀಮತಿ ಗಾಯತ್ರಮ್ಮ ಅವರಿಗೆ ಕನ್ನಡ ಸಾಹಿತ್ಯ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿ. ಅವರ ಓದು ಬಿಎ. ಹಿಂದಿಯಲ್ಲಿ ಪ್ರವೀಣ ಮತ್ತು ಸಂಸ್ಕೃತದಲ್ಲಿ ಕೋವಿದ ಕೂಡ ಪೂರೈಸಿದ್ದಾರೆ.  ಅವರು ಅಂತರ್ಜಾಲ ಆಧಾರಿತ ಸಾಹಿತ್ಯ ಬಳಗಗಳಲ್ಲಿ ಸಕ್ರಿಯ ರಾಗಿದ್ದಾರೆ. ನೂರಕ್ಕೂ ಹೆಚ್ಚು ಬಳಗಗಳಿಂದ ಬಹುಮಾನ ಪತ್ರಗಳನ್ನು ಪಡೆದಿದ್ದಾರೆ.
ಅವರು ಬರೆದ ಲೇಖನ, ಕವನಗಳು ಜನ ಮಿಡಿತ ಕುಂದನಗರಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಶ್ರೀಮತಿ ಗಾಯತ್ರಮ್ಮ ಅವರು ವಾಗೀಶ್ವರಿ ಓದುಗರ ಸಂಘ ವನ್ನು 2013ರಲ್ಲಿ ಹುಟ್ಟು ಹಾಕಿ ಶಿವಮೊಗ್ಗದಲ್ಲಿ ಮನೆ ಮನೆಯಲ್ಲಿ ಉತ್ತಮ ಪುಸ್ತಕಗಳ ವಿಮರ್ಶೆಯ ಮೂಲಕ ಜಾಗೃತಿ ಮೂಡಿಸಿ ಓದುವ ಹವ್ಯಾಸವನ್ನು ಬೆಳೆಸಿದ್ದಾರೆ. ಅವರು ಕನ್ನಡ ಸಾಹಿತ್ಯ ಪರಿಷತ್ ಶಿವಮೊಗ್ಗ ತಾಲೂಕ ಘಟಕದ ಸದಸ್ಯರು.  


ಸಹೃದಯ ಬರಹಗಾರ್ತಿ ಶ್ರೀಮತಿ ಗಾಯತ್ರಮ್ಮ
ಶ್ರೀಮತಿ ಗಾಯತ್ರಮ್ಮ ಅವರಿಗೆ ಹಲವು ಪ್ರಶಸ್ತಿಗಳು ಬಂದಿವೆ

೧ ಕನ್ನಡ ಸೇವಾರತ್ನ  ಪ್ರಶಸ್ತಿ
ಜಿಲ್ಲಾ ಸಾಹಿತ್ಯ ಪರಿಷತ್ ಬೆಂಗಳೂರು

೨ ಸಾಹಿತ್ಯದ ಸಿಂಧೂ ರಾಜ್ಯ ಪ್ರಶಸ್ತಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ

೩ ಉತ್ತಿಷ್ಠ ಸಾಧಕ ರತ್ನ ಪ್ರಶಸ್ತಿ ಉತ್ತಿಷ್ಠ  ಚಾರಿಟಬಲ್ ಟ್ರಸ್ಟ್ ಬೆಂಗಳೂರು

೪ ಹೆಮ್ಮೆಯ ಕನ್ನಡತಿ ಪ್ರಶಸ್ತಿ- ಚೇತನ್ ಫೌಂಡೇಶನ್ ಧಾರವಾಡ

ಕಥಾ ಬಿಂದು ಪ್ರಕಾಶನದವರು ಆಗಸ್ಟ್ 27ರಂದು ಕುಪ್ಪಳ್ಳಿಯಲ್ಲಿ ಆಯೋಜಿಸಿರುವ ಸಾಹಿತ್ಯ ಸಂಭ್ರಮದಲ್ಲಿ ಶ್ರೀಮತಿ ಗಾಯತ್ರಮ್ಮ ಪ್ರಶಸ್ತಿಗಾಗಿ ಆಯ್ಕೆಯಾಗಿದ್ದಾರೆ.

ಶ್ರೀಮತಿ ಗಾಯತ್ರಮ್ಮ ಅವರ ಸಾಹಿತ್ಯ ಚಟುವಟಿಕೆಗಳು ಇನ್ನೂ ಬಿರುಸಾಗಿ ನಡೆಯಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು. 
ಸಹೃದಯ ಬರಹಗಾರ್ತಿ ಶ್ರೀಮತಿ ಗಾಯತ್ರಮ್ಮ
ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು
ಸಹೃದಯ ಬರಹಗಾರ್ತಿ ಶ್ರೀಮತಿ ಗಾಯತ್ರಮ್ಮ
ಸಹೃದಯ ಬರಹಗಾರ್ತಿ ಶ್ರೀಮತಿ ಗಾಯತ್ರಮ್ಮ
ಸಹೃದಯ ಬರಹಗಾರ್ತಿ ಶ್ರೀಮತಿ ಗಾಯತ್ರಮ್ಮ

Comments (0)




Be the first to comment using the form below.