ಸುತ್ತಮುತ್ತ ಭತ್ತ, ಕಬ್ಬು ತರಕಾರಿ ಬೆಳೆಯುವ ಹೊಲ ಗದ್ದೆಗಳು, ಒಳಗೆ ಸಂಸ್ಕಾರವ0ತ ವ್ಯಕ್ತಿತ್ವಗಳು, ಇಂತಹ ಸುಂದರ ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಜೀವಿಸುವ ಭವ್ಯಾ ಕವಿಯಾಗಿರುವುದರಲ್ಲಿ ಅಚ್ಚರಿಯೇನಿಲ್ಲ. ಹಾಗೆಯೇ ಭವ್ಯಾ ಜಗಮನೆ ನನ್ನ ಸಮೀಪ ಬಂಧುಗಳ ಮಗಳು. ಹಲವು ವರ್ಷಗಳ ಹಿಂದೆ ಪುಟ್ಟ ಹುಡುಗಿಯಾಗಿದ್ದ ಭವ್ಯಾ ಈಗ ಉನ್ನತ ವಿದ್ಯಾಭ್ಯಾಸ ಮಾಡಿರುವುದಲ್ಲದೇ ಒಬ್ಬ ಪ್ರತಿಭಾವಂತೆಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಬಹಳ ಹೆಮ್ಮೆಯ ವಿಷಯ.
ಕವಿತೆ ನೋವಿನ ಸೋದರಿ, ನರಳುವ, ಅಳುವ ಪ್ರತಿಯೊಬ್ಬನೂ ಕವಿಯೇ ಅವನ ಪ್ರತಿಯೊಂದು ಕಣ್ಣೀರೂ ಕವನವೇ. ಪ್ರತಿಯೊಂದು ಹೃದಯವೂ ಕವನ ಸಂಕಲನದ0ತೆ, ಮಾನವನ ಭಾವನೆಯ ಎಲ್ಲಾ ಹಂತಗಳಲ್ಲಿ ಅಭಿವ್ಯಕ್ತಿಯ ಕೈಯ್ಯನ್ನು ನೀಡುವವನೂ ಕವಿಯೇ ಎಂದು ಪ್ರಸಿದ್ಧ ಬರಹಗಾರ ಆಂಡ್ರಿ ಹೇಳುತ್ತಾರೆ. ಹಾಗೆಯೇ ಉದಯೋನ್ಮುಖ ಕವಯತ್ರಿ, ಬರಹಗಾರ್ತಿ ಭವ್ಯಾ ಜಗಮನೆ ಅವರ ಚೊಚ್ಚಲ ಕವನ ಸಂಕಲನಕ್ಕೆ ಮುನ್ನುಡಿ ಬರೆಯುತ್ತಾ ಅವರ ಭವ್ಯ ಭವಿಷ್ಯಕ್ಕೆ ಶುಭ ಕೋರುತ್ತಾ..... ತನ್ನ ಒಳಗಿನ ತುಡಿತಗಳಿಗೆ ಬರಹ ರೂಪ ಕೊಟ್ಟು ಸಮಾಜದ ನಾನಾ ಸ್ಥರಗಳ ಒಳ ಹೊಕ್ಕು ಬಂಧಿಯಾಗಿದ್ದ ಭಾವಗಳನ್ನು ಹೊರಗೆಳೆದು ಸಾಹಿತ್ಯದ ಹಲವು ಪ್ರಕಾರಗಳ ಮೂಲಕ ಇಲ್ಲಿ ತಮ್ಮ ಅನುಭಾವಗಳನ್ನು ಭವ್ಯ ಸುಂದರವಾಗಿ ವ್ಯಕ್ತಪಡಿಸಿದ್ದಾರೆ.
ಜರಿದರೆಂದು ಜಗ್ಗದೇ
ಕಾಲೆಳೆದರೆಂದು ಕುಗ್ಗದೇ
ಮನ ನೋಯಿಸಿದರೆಂದು ಮುನಿಯದೇ
ನಮ್ಮನ್ನು ಜಾಗೃತಗೊಳಿಸಿದವರಿಗೆ ವಂದಿಸಿ
ಪುಟಿದೆದ್ದು ಸ್ಫೂರ್ತಿಯ ಸೆಲೆಯಾಗಿ ಮುಂದೆ ಸಾಗಬೇಕು
ಹೀಗೆ ಹೇಳುವಲ್ಲಿ ಟೀಕೆ ಮಾಡಿದವರು ನಮ್ಮನ್ನು ಜಾಗೃತಗೊಳಿಸಿದ್ದಾರೆ ಎಂಬ ಭವ್ಯಾ ಅವರ ಸಕಾರಾತ್ಮಕವಾದ ಉದಾತ್ತ ಮನೋಭಾವ ಕಾಣುತ್ತದೆ. ಹಾಗೆಯೇ ತಾಯ್ತನದಲ್ಲಿ ಹೆರಿಗೆ ನೋವಿನ ಬಾಧೆ ಹೇಳಲು ಸಾದ್ಯವೇ ಇಲ್ಲ. ಆದರೆ ಮಗು ಹುಟ್ಟಿದ ಮೇಲೆ ಆ ತಾಯಿಯ, ತಾಯ್ತನದ ಆ ನಗು ಬದುಕಿನಲ್ಲಿ ಮೊದಲ ಸಾರಿ ಬರುವ ಅವಿಸ್ಮರಣೀಯ ನಗುವಾಗಿರುತ್ತದೆ ಎನ್ನುವಾಗ ತಾಯ್ತನ ಅನುಭವಿಸಿರುವ ಅವರ ಅನುಭವದ ಭಾವ ಸೊಗಸಾಗಿ ಮೂಡಿಬಂದಿದೆ. ಆಸ್ತಿ, ಹಣ ಎಷ್ಟೇ ಇದ್ದರೂ ಹೆತ್ತವರನ್ನು ಸಲಹಲಾರದ್ದು ತೃಣಕ್ಕೆ ಸಮಾನ ಎನ್ನುತ್ತಾರೆ ಹಾಗೆಯೇ ಮುಂದುವರೆದು...ಶುಚಿತ್ವ, ಆರೋಗ್ಯ, ಕಾಯಕ, ಪರಿಸರ, ದೇಶದ ಏಳ್ಗೆ, ವಿಶ್ವದ ಶಾಂತಿ, ಸದ್ದರ್ಮದ ಉಳಿವುಗಳ ಬಗ್ಗೆ ಕಾಳಜಿ ಅಕ್ಷಯವಾಗಲಿ ಎನ್ನುವಲ್ಲಿ ಅವರಿಗಿರುವ ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ. ಕ್ಷಮೆ ಕೀಳರಿಮೆಯಲ್ಲ ಅದೊಂದು ಬಂಧುತ್ವವನ್ನು ಬಿಗಿಯಾಗಿ ಬೆಸೆಯುವ ಭಾವ... ಅನಾಥರೆಂದು ಕೊರಗುವುದರಿಂದ ಪ್ರಯೋಜನವಿಲ್ಲ ತಮ್ಮಲ್ಲಿರುವ ಸದ್ಗುಣಗಳಿಂದಲೇ ವಿಧಾತರಾಗಬೇಕು ಎನ್ನುತ್ತಾರೆ. ಅಲ್ಲದೇ ತಮ್ಮ ಪ್ರೀತಿಯ ಪತಿಯನ್ನು ಸುಧಾಕರ ನನ್ನ ಪತಿರಾಯ ತುಂಬಿದ ಕೊಡದಂತ ಸ್ವಭಾವ ಹಾಗೂ ದಯಾಳುವೂ ಕೃಪಾಳುವೂ ಆಗಿರುವುದಲ್ಲದೇ ಸರ್ವರಿಗೂ ಒಳಿತನ್ನೇ ಬಯಸುವ ಹೃದಯವಂತರು ಎನ್ನುವಲ್ಲಿ ತಮ್ಮ ಪತಿಯ ಮೌಲ್ಯಯುತ ಗುಣಗಳನ್ನು ಅತ್ಯಂತ ಅಭಿಮಾನದಿಂದ ಹೇಳಿಕೊಂಡಿರುವುದಲ್ಲದೇ ದೇಹವನ್ನು ಮಣ್ಣಿಗಿಡುವ ಮುನ್ನ ನೇತ್ರಾದಾನ ಮಾಡಿ ಕಣ್ಣಿಲ್ಲದವರಿಗೆ ಕಣ್ಣಾಗಬೇಕು, ಹಿರಿಯರು ಮರದ ಬೇರಿದ್ದಂತೆ ಮಕ್ಕಳು ಚಿಗುರುಗಳಂತೆ ಎಲ್ಲರೂ ಒಟ್ಟಾಗಿ ಸೇರಿ ಬಾಳಿನ ತೇರನ್ನು ಎಳೆಯಬೇಕು, ಪ್ರತೀ ಕಲೆಯೂ ಸೃಷ್ಟಿಯಿಂದಾಗಿದ್ದು ಎಲ್ಲಾ ಕಲೆಗಳೂ ಆದರಣೀಯವಾದುವು ಎಂಬಲ್ಲಿ ಆಕೆ ಒಬ್ಬ ಕಲಾಪ್ರೇಮಿಯಾಗಿ ಕಾಣುತ್ತಾಳೆ. ಅಪರಿಚಿತರಿಗೆ ಅನಗತ್ಯವಾಗಿ ಮೆಸೇಜ್ ಮಾಡಿದ್ರೆ ಇಮೇಜ್ ಹಾಳಾಗಿ ಲೈಫ್ ಡ್ಯಾಮೇಜ್ ಆಗುತ್ತದೆ ಎಂಬ ಸಂದೇಶವನ್ನೂ ನೀಡಿದ್ದಾರೆ. ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಾದ ಕವನ, ಹಾಯ್ಕು ಟಂಕಾ, ರುಬಾಯಿ ಚುಟುಕುಗಳಲ್ಲಿ ಸಮಾಜ ಪರ, ವ್ಯಕ್ತಿತ್ವದ ಉನ್ನತಿಯ ಕಾಳಜಿಯೇ ಪ್ರಮುಖವಾಗಿ ಕಾಣುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಅಲ್ಲದೇ ತಂದೆ ತಾಯಿ,ಅವರ ಮುದ್ದಾದ ಇಬ್ಬರು ಮಕ್ಕಳು ಹಾಗೂ ಪತಿಯೊಂದಿಗೆ ಅವರದ್ದು ಅತೀ ಸುಂದರ ಹಾಗೂ ಸಂಸ್ಕಾರವAತ ಕುಟುಂಬ. ಆ ಕುಟುಂಬದ ಬೆಂಬಲದೊ0ದಿಗೆ ಭವ್ಯಾರ ಪ್ರತಿಭೆ ಇನ್ನಷ್ಟು ಪ್ರಜ್ವಲಿಸಲಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅವರೊಂದು ಅನನ್ಯ ಕೊಡುಗೆಯಾಗಲಿ.
ತಮ್ಮ ಚೊಚ್ಚಲ ಕೃತಿಯ ಲೋಕಾರ್ಪಣೆಯೊಂದಿಗೆ ಭವ್ಯಾ ಅವರ ಸಾಹಿತ್ಯ ಕೃಷಿ ಹೀಗೆಯೇ ನಿರಂತರವಾಗಿ ಸಾಗಲಿ ಅವರ ಲೇಖನಿಯ ಶಾಯಿ ಎಂದಿಗೂ ಮುಗಿಯದೇ ಹಸಿಯಾಗಿರಲಿ, ಉತ್ಸಾಹ ಬತ್ತದಂತೆ ಸದಾ ಸ್ಫೂರ್ತಿಯ ಸೆಲೆಯಾಗಿ ಲೋಕರತ್ನ ಎಂಬ ಕಾವ್ಯನಾಮದಂತೆ ಸಾಹಿತ್ಯ ಲೋಕದ ಅಮೂಲ್ಯ ರತ್ನವಾಗಲಿ ಎಂದು ಮನದುಂಬಿ ಹಾರೈಸುತ್ತಾ ಅತ್ಯಂತ ಪ್ರೀತಿ ಹಾಗೂ ಅಭಿಮಾನದಿಂದ ನನಗೆ ಮುನ್ನುಡಿ, ಶುಭನುಡಿಯನ್ನು ಬರೆಯಲು ಅವಕಾಶ ಕೊಟ್ಟಿದ್ದಕ್ಕಾಗಿ ಪ್ರೀತಿಯ ವಂದನೆಗಳನ್ನು ತಿಳಿಸುತ್ತೇನೆ.
ಶ್ರೀಮತಿ ಮಾಲಾ ಚೆಲುವನಹಳ್ಳಿ
ಕವಯತ್ರಿ ಹಾಗೂ ಬರಹಗಾರ್ತಿ
Comment (1)
Post Comment
Report Abuse
Dr.N D Hegde commented on October 13th, 2023 at 10:12 AM
Very nice