(JavaScript required to view this email address)
Mangalore

News & Articles

ಭಾವ ಲಹರಿ (ಷಟ್ಪದಿ ಸಂಕಲನ )
ಶ್ರೀಮತಿ ಪಂಕಜಾ. ಕೆ
ಪ್ರಕಟಣೆ 
ಕಥಾಬಿಂದು ಪ್ರಕಾಶನ ಪುಟ 132
ಬೆಲೆ 150/-
ಪ್ರಥಮ ಮುದ್ರಣ 2022
ಶ್ರೀಮತಿ ಪಂಕಜಾ. ಕೆ. ಇವರ ಷಟ್ಪದಿ ಕವನ ಸಂಕಲನ ಭಾವ ಲಹರಿಯ ಈ ಪುಸ್ತಕ ಹಳೆಗನ್ನಡ ಕಾವ್ಯಗಳಲ್ಲಿ ಮಾತ್ರವೆ ಕಾಣಬಹುದಾದ ಛಂದಸ್ಸಿನ ನಿಯಮಗಳನ್ನು ಪಾಲಿಸಿ ಬರೆದ 113 ಕವನದ ಸಂಕಲನವಾಗಿದೆ. ಮುಖ್ಯವಾಗಿ ಮಾತ್ರಾಗಣ ನಿಯಮ ಹಾಗೂ ಆದಿಪ್ರಾಸಗಳನ್ನು ಗಮನದಲ್ಲಿಟ್ಟುಕೊಂಡು ಮನದ ಭಾವಗಳನ್ನು ಹೆಣೆಯುವುದು ಸವಾಲೇ ಸರಿ. ಈ ಪ್ರಯತ್ನದಲ್ಲಿ ಮೆಟ್ಟಲೇರುತ್ತಿರುವ ಶ್ರೀಮತಿ ಪಂಕಜಾ ಕೆ. ಮುಡಿಪು ಇವರ ಪರಿಶ್ರಮ ಹಾಗೂ ಸಾಧನೆ ಅಮೋಘ. ತುಂಬು ಕುಟುಂಬದಲ್ಲಿ ಜನಿಸಿ  ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ತಮ್ಮ ಇಳಿವಯತಸ್ಸಿನಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ದುಮುಕಿದ ಇವರ ರಚನೆಗಳು ಬಹಳ  ಸರಳ-ಮನಮುಟ್ಟುವಂತಹದು. 
ಇತಿಹಾಸ ಪದವೀಧರೆಗೆ ಸಾಹಿತ್ಯದೊಲವು ಕಾಕತಾಳೀಯವೇ ಸರಿ. ಈಗಾಗಲೇ ಸಾವಿತ್ರಿ ಎಂಬ ಕವನ ಸಂಕಲನ ಹಾಗೂ ಗೊಂಚಲು ಎಂಬ ಲೇಖನಸರಣಿಯನ್ನು ಪ್ರಕಟಿಸಿರುವ ಪಂಕಜಾರ ಮೂರನೆಯ ಕೃತಿ ಇದಾಗಿದೆ. ಅನೇಕ ಜಾಲತಾಣಗಳ ಸ್ಪರ್ಧೆಗಳಲ್ಲಿ ಬಹುಮಾನ ಬಾಚಿಕೊಳ್ಳುತ್ತಿರುವ ಇವರು ಕಸೂತಿ ಹಾಗೂ ಹೂದೋಟದಲ್ಲೂ ಅಸಕ್ತಿ ಹೊಂದಿದ್ದಾರೆ. ಶಾರದೆಯ ಭಜನೆ ಯಿಂದ ಆರಂಭವಾಗಿ ಅನೇಕ ಸ್ತುತಿಗಳ ಪುಟ್ಟದಾದರೂ ಬಹಳ ಮನೋಜ್ಞವಾಗಿ ಮೂಡಿಬಂದಿವೆ. ಲೇಖಕಿ ದೈವಭಕ್ತಿಯ ಗೆಲುವು, ಪರಿಸರದ ಒಲವು, ಭಾವನೆ, ಚೆಲುವು, ದೇಶ, ನಾಡಿನ ಬಲವನ್ನು ತಮ್ಮ ಕವನಗಳ ಮೂಲಕ ವ್ಯಕ್ತಪಡಿಸಿದ ಹಲವು ಪದ್ಯಗಳು ನಂತರದ ಪುಟಗಳಲ್ಲಿ ಕಾಣಸಿಗುತ್ತವೆ. ಮುಖ್ಯವಾಗಿ  ಕಡಿಮೆ ಸಾಲು ಹಾಗೂ ಬಹಳ ಸರಳ ಶಬ್ದಗಳ ಬಳಕೆಯಿಂದ ಕವನಗಳೆಲ್ಲವೂ ಮಕ್ಕಳೂ ಅರ್ಥೈಸುವಂತೆ ಸುಲಲಿತವಾಗಿವೆ. ಶರ ಷಟ್ಟದಿಯ ‘ಕೃಷಿಖುಷಿ' ಕವನದಲ್ಲಿರುವ ಪ್ರಕೃತಿ  ಪ್ರೇಮ ಎಷ್ಟು ಅದ್ಭುತವಾಗಿದೆ ನೋಡಿ , 
ಮಳೆಹನಿ ಸುರಿಯಲು / ಕೊಳೆತೊಳೆದಿಳೆಯಲಿ/ಬೆಳೆಯನು ಬೆಳೆಯಲು ಸಂಭ್ರಮವು ಮೊಳಕೆಯ ನೋಡುತ/ ಕಳೆಯನು ಕೀಳುತ/ ಹೊಳೆಯಲಿ ಮೀಯಲು ಸಂತಸವು|| ಭೋಗ ಷಟ್ಟದಿಯ ‘ಕಳ್ಳನರಿ' ಕಥಾಪದ್ಯವು ಓದಲು ಸರಾಗವಾಗಿ ಮಕ್ಕಳಿಗೆ ಹೇಳಿ ಮಾಡಿಸಿದಂತೆ ಇದೆ. ‘ಪರಿವರ್ಧಿನಿ'ಯ ಜೆನ್ನುಡಿಯಲ್ಲಿ ಭಾಷಾಭಿಮಾನದ ಪರಿ ಸೊಗಸಾಗಿ ಮೂಡಿಬಂದಿದೆ.


ಭಾವ ಲಹರಿ
"ರನ್ನನು ಪಂಪನು ಹೊಗಳುತ ಹಾಡಿದ’’
"ಕನ್ಜಡಿಯಂತೆಯೆ ಹೊಳೆಯುತಲಿರುವುದು”

ಆಹಾ, ಕನ್ನಡದ ಸವಿ ಎನ್ನುತ್ತ ಚಪ್ಪರಿಸುವಂತಿವೆ.

ಎನಿತು ಸುಂದರವಿರುವ ದಿನಗಳು /
 ಹನಿಸಿ ಕಣ್ಣಲಿ ಕನಸ ಮಾಡಿಸಿ / 

ನೆನೆಯುತಿರುತಿರೆ ಮೊಗದ ತುಂಬ ಹರುಷ ಮೂಡುವುದು ಎಂದು ಭಾಮಿನಿ ಯಲ್ಲಿ ಬಾಲ್ಯಕ್ಕೆ ಮರಳಿದ ಪರಿ ನಮ್ಮನ್ನೂ ಆ ನೆನಪಿನ ಗುಂಗಿನಲ್ಲಿ ತೇಲಿಸುತ್ತದೆ. ಗದ್ಯದಂತೆ. ಅಡ್ಡಾದಿಡ್ಡಿ ಬರೆಯುವ ನವ್ಯಕವನಗಳ ಭರಾಟೆಯಲ್ಲಿ ಓದಲು ಲಯಬದ್ಧವಾದ
ಇಂತಹ ಅಪರೂಪದ ಕವನಗುಚ್ಛ ನನ್ನಂತಹ ಓದುಗರಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ. ನಿಮ್ಮ ಲೇಖನಿಯ
ಹರಿವು ನಿರಂತರವಾಗಲಿ.


ಭಾವ ಲಹರಿ
ಶೈಲಜಾ ಕೇಕಣಾಜೆ
ಹವ್ಯಾಸಿ ಬರಹಗಾರ್ತಿ

ಭಾವ ಲಹರಿ
ಭಾವ ಲಹರಿ
ಭಾವ ಲಹರಿ
ಭಾವ ಲಹರಿ
ಭಾವ ಲಹರಿ
ಭಾವ ಲಹರಿ

Comments (0)




Be the first to comment using the form below.