(JavaScript required to view this email address)
Mangalore

News & Articles

ಕವಯಿತ್ರಿ ಲಕ್ಷ್ಮೀ ವಿ ಭಟ್ ಅವರ ಐದು ವೈವಿಧ್ಯಮಯ ಕೃತಿಗಳನ್ನು ಒಂದೇ ದಿನ ಗಡಿನಾಡು ಮಂಜೇಶ್ವರ ಬಳಿಯ ಕೊಂಡೆವೂರಿನಲ್ಲಿ ಬಿಡುಗಡೆಗೊಳಿಸಿ ವಿಕ್ರಮ ಸಾಧಿಸಿದ್ದಾರೆ. ಸದಭಿರುಚಿಯ ಛಂದೋಬದ್ಧ ಮತ್ತು ಮುಕ್ತ ಕವನಗಳನ್ನು ಬರೆದು ಖ್ಯಾತರಾಗಿರುವ ಲಕ್ಷ್ಮೀ ವಿ ಭಟ್ ಅವರು ಈ ಬಾರಿ ಮಕ್ಕಳ ಕವನ, ದೇಶಭಕ್ತಿ ಗೀತೆ, ಸುಚರಿತರು ಕವನ, ಭಕ್ತಿ ಕವನ ಮತ್ತು ಗಜಲ್ ಸಂಕಲನ ಬರೆದು ತಮ್ಮ ಸೃಜನಶೀಲತೆಯ ಪರಿಚಯ ಮಾಡಿದ್ದಾರೆ. ಕೃತಿಗಳ ಕಿರು ಪರಿಚಯ ಇಲ್ಲಿದೆ.  ಈ ಎಲ್ಲಾ ಕೃತಿಗಳನ್ನು ಪ್ರಕಟಿಸಿದವರು ಕಥಾಬಿಂದು ಪ್ರಕಾಶನ ಮಂಗಳೂರು 9341410153, ಪ್ರತಿಗಳಿಗಾಗಿ ಕವಯಿತ್ರಿಯನ್ನು 97385 19932 ಸಂಪರ್ಕಿಸಬಹುದು.
*ಭಕ್ತಿ ಮಂಜರಿ**ಭಾರತಾಂಬೆಗೆ ನಮನ**ಸುಚರಿತರು**ಭಾವಸ್ಪರ್ಶ**ಕಲರವ*
ಕಲರವ
ಮಕ್ಕಳ ಕವನಗಳ ಸಂಕಲನ. ಒಟ್ಟು 82 ಕವನಗಳಿರುವ ಈ ಸಂಗ್ರಹದಲ್ಲಿ ತಾಳಹಾಕಿ ಹಾಡಬಹುದಾದ ಗೇಯತೆಯುಳ್ಳ ಕವನಗಳಿವೆ. ಮಕ್ಕಳ ಆಸಕ್ತಿಯ ವಿಷಯಗಳಾದ ಆಟ, ಪ್ರಕೃತಿ, ವಿಸ್ಮಯಗಳು ಈ ಸಂಕಲನದ ಮುಖ್ಯ ಅಡಕಗಳು. ಪುಟಗಳು 100,  ಬೆಲೆ ರೂ.150

*ಭಕ್ತಿ ಮಂಜರಿ**ಭಾರತಾಂಬೆಗೆ ನಮನ**ಸುಚರಿತರು**ಭಾವಸ್ಪರ್ಶ**ಕಲರವ*
ಭಾವಸ್ಪರ್ಶ
ಇದೊಂದು ಗಜಲ್ ಕವನಗಳ ಸಂಕಲನ. ಗಜಲ್ ಎಂದರೆ ಹೆಂಗಸರೊಡನೆ ಮಾತನಾಡುವ, ಅನುರಾಗ ವ್ಯಕ್ತಪಡಿಸುವ ಭಾವಪೂರ್ಣ ರಚನೆಗಳು. ಒಂದು ಅರಬಿ ಕಾವ್ಯ ಪ್ರಕಾರ. ಅಂತರಂಗದ ಆಳದಿಂದ ಹೊರ ಹೊಮ್ಮುವ ಗಂಭೀರತೆ ತರುವ ಹಾಡುಗಳು. ಪುಟಗಳು 68 . ಬೆಲೆ ರೂ.125
*ಭಕ್ತಿ ಮಂಜರಿ**ಭಾರತಾಂಬೆಗೆ ನಮನ**ಸುಚರಿತರು**ಭಾವಸ್ಪರ್ಶ**ಕಲರವ*
ಸುಚರಿತರು
ಚಿರಪರಿಚಿತ ಸಜ್ಜನರ ಕುರಿತ ಕವನಗಳ ಗುಚ್ಛ. ಈ ತರದ ವ್ಯಕ್ತಿ ಚಿತ್ರಗಳು ಲೇಖನ ರೂಪದಲ್ಲಿ ಬಂದಿದ್ದರೂ ಕವನಗಳಾಗಿ ಬಂದ ಕೃತಿಗಳು ಇಲ್ಲವೆನ್ನಬಹುದು. ಹೀಗೆ ಇದೊಂದು ಹೊಸ ಪ್ರಯತ್ನ. 45 ಕವನಗಳಿದ್ದು ಆದಿ ಶಂಕರರಿಂದ ಹಿಡಿದು ಬಡವರ ಬಂಧು ಅಂಬೇಡ್ಕರರವರೆಗೆ ವೈವಿಧ್ಯಮಯ ಚೇತನಗಳ ಕುರಿತ ಕವನಗಳು ಇಲ್ಲಿ ಬಿರಿದಿವೆ. ಪುಟಗಳು 68, ಬೆಲೆ ರೂ.125
*ಭಕ್ತಿ ಮಂಜರಿ**ಭಾರತಾಂಬೆಗೆ ನಮನ**ಸುಚರಿತರು**ಭಾವಸ್ಪರ್ಶ**ಕಲರವ*
ಭಾರತಾಂಬೆಗೆ ನಮನ
ದೇಶಭಕ್ತಿ ಗೀತೆಗಳ ಸಂಕಲನ. 45 ಕವನಗಳು ಇರುವ ಈ ಗುಚ್ಛದಲ್ಲಿ ದೇಶಪ್ರೇಮವನ್ನು ಹೆಚ್ಚಿಸುವ, ಓದುಗರಲ್ಲಿ ದೇಶಭಕ್ತಿ ಮೂಡಿಸುವ ಚೈತನ್ಯಪೂರ್ಣ ಕೃತಿ ಇದು. 45 ಕವನಗಳು ಇರುವ ಈ ಸಂಕಲನದಲ್ಲಿ ತಾಯಿ ಭಾರತಿ, ಕನ್ನಡದ ಅಭಿಮಾನ, ಕರುನಾಡ ವೈಭವ, ವಂದೇ ಮಾತರಂ, ಗಣರಾಜ್ಯ, ಮಾತೃಭೂಮಿ, ಅಮರ ಯೋಧ, ಸೈನಿಕರು, ಅಮರ ಸುಳ್ಯ ಕದನ, ಭಾರತಾಂಬೆ  ಮುಂತಾದ ಶೀರ್ಷಿಕೆಯ ಕವನಗಳು ಇವೆ. ಮಕ್ಕಳು ವಿಶೇಷ ಸಂದರ್ಭಗಳಲ್ಲಿ ಹಾಡಬಹುದು ರಾಗ ಸಂಯೋಜನೆಗೆ ಒಗ್ಗುವಂಥವುಗಳು.
ಪುಟಗಳು 68. ಬೆಲೆ ರೂ 125.
*ಭಕ್ತಿ ಮಂಜರಿ**ಭಾರತಾಂಬೆಗೆ ನಮನ**ಸುಚರಿತರು**ಭಾವಸ್ಪರ್ಶ**ಕಲರವ*
ಭಕ್ತಿಮಂಜರಿ
ಭಕ್ತಿ ಗೀತೆಗಳ ಸಂಕಲನ
ನೂರೊಂದು ಗೀತೆಗಳು ಮೂಡಿಬಂದಿವೆ. ಎಲ್ಲಾ ದೇವ- ದೇವಿಯರ ಕುರಿತ ಭಕ್ತಿ ಗೀತೆಗಳು ಇದರಲ್ಲಿವೆ. ಹಬ್ಬ ಹರಿದಿನಗಳಲ್ಲಿ ಹಾಡಲು ಶಕ್ತವಾಗಿರುವ, ಭಕ್ತಿ ಭಾವ ಮೂಡಿಸುವ ಕವನಗಳು ಅಡಕವಾಗಿವೆ.  132 ಪುಟಗಳಿದ್ದು 101 ಭಕ್ತಿಗೀತೆಗಳಿವೆ.  ಬೆಲೆ ರೂ.175
ಐದು ಕೃತಿಗಳೂ ಸಂಗ್ರಹ ಯೋಗ್ಯ ಉಪಯುಕ್ತ ಪುಸ್ತಕಗಳು. ಬಿಡಿಯಾಗಿ, ಒಟ್ಟಾಗಿ ಪಡೆಯಲು ಕವಯಿತ್ರಿಯನ್ನು ಸಂಪರ್ಕಿಸಬಹುದು.
*ಭಕ್ತಿ ಮಂಜರಿ**ಭಾರತಾಂಬೆಗೆ ನಮನ**ಸುಚರಿತರು**ಭಾವಸ್ಪರ್ಶ**ಕಲರವ*
ಪರಿಚಯಿಸಿದವರು
ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು
*ಭಕ್ತಿ ಮಂಜರಿ**ಭಾರತಾಂಬೆಗೆ ನಮನ**ಸುಚರಿತರು**ಭಾವಸ್ಪರ್ಶ**ಕಲರವ*
*ಭಕ್ತಿ ಮಂಜರಿ**ಭಾರತಾಂಬೆಗೆ ನಮನ**ಸುಚರಿತರು**ಭಾವಸ್ಪರ್ಶ**ಕಲರವ*

Comments (0)

Be the first to comment using the form below.